ಹನೂರು: ಸಿಡಿಲು ಬಡಿದು 12 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ಹನೂರು ತಾಲೂಕಿನ ಚನ್ನೂರು ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ವೆಂಕಟಭೋವಿ ಎಂಬುವರಿಗೆ ಸೇರಿದ್ದ 12 ಮೇಕೆಗಳು ಮೃತಪಟ್ಟಿವೆ.
ಕಾಡಿನಲ್ಲಿ ಮೇಕೆಗಳನ್ನು ಮೇಯಿಸಿಕೂಂಡು ಮನೆಗೆ ಬರುತ್ತಿದ್ದಾಗ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ಮೇಕೆಗಳು ಸತ್ತಿವೆ ಎಂದು ವೆಂಕಟಭೋವಿ ತಿಳಿಸಿದ್ದಾರೆ.
ಇನ್ನು ನಮಗೆ ಇವುಗಳಿಂದಲೇ ಜೀವನ ನಡೆಯುತ್ತಿತ್ತು ಈಗ ಇವುಗಳನ್ನು ಕಳೆದುಕೊಂಡು ನಾವು ಹೇಗೆ ಬದುಕುವುದು ಎಂದು ವೆಂಕಟಭೋವಿ ದುಃಖ ತೋಡಿಕೊಂಡಿದ್ದಾರೆ.
ಅಧಿಕಾರಿಗಳು ಇತ್ತ ಗಮನಹರಿಸಿ ಬಡವನಾದ ಮೇಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ವೆಂಕಟಭೋವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಹಿಸಿದ್ದಾರೆ.