ಹನೂರು: ತಾಲೂಕಿನ ಸೂಳೆರೀಪಾಳ್ಯ ಗ್ರಾಪಂ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಚೆಕ್ ಡ್ಯಾಮ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಕೈಯಲ್ಲಿ ಮೀನು ಹಿಡಿಯುವ ಬಲೆ ಇದ್ದು, ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತರ ಎಡಗೈಯಲ್ಲಿ ಮಂಜು, ರಾಜು ಬಾಯಿ ಎಂದು ಮತ್ತು ಎದೆ ಭಾಗದಲ್ಲಿ ಪಲ್ಲವಿ ಎಂಬ ಹಚ್ಚೆ ಇದ್ದು ವಾರಸುದಾರರು ಯಾರಾದರು ಇದ್ದರೆ ಹನೂರು ಪೊಲೀಸರನ್ನು ಸಂಪಪರ್ಕಿಸಬಹುದು.
ಇನ್ನು ಸ್ಥಳಕ್ಕೆ ಅಗ್ನಿಶಮಾಕ ಸಿಬ್ಬಂದಿ ಧಾವಿಸಿ ಚೆಕ್ ಡ್ಯಾಮ್ ನಲ್ಲಿದ್ದ ಶವವನ್ನು ಹೊರತೆಗೆದರು.
ಅಗ್ನಿಶಾಮಕ ಸಿಬ್ಬಂದಿಗಳಾದ ರವಿ, ಗಿರೀಶ್, ನವೀನ್, ಗಿರುಮೂರ್ತಿ, ಶಿವಣ್ಣ, ಮುನಿಶಾಂತ ಹಾಗೂ ಪೊಲೀಸ್ ಸಿಬ್ಬಂದಿ ಎಸ್ ರವಿ ಇದ್ದರು.