NEWSನಮ್ಮಜಿಲ್ಲೆನಮ್ಮರಾಜ್ಯ

ಗ್ರಾಪಂ ಸಭೆಯಲ್ಲಿ ಮಹಿಳಾ ಸದಸ್ಯರ ಗಂಡಂದಿರು ಭಾಗವಹಿಸಿದರೆ ಕಠಿಣ ಕ್ರಮ: ಜಿಪಂ ಸಿಇಒ ಡಾ.ವಿದ್ಯಾ ಕುಮಾರಿಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಮಧುಗಿರಿ : ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ಸದಸ್ಯರಾಗಿದ್ದರೆ ಅವರ ಗಂಡಂದಿರು ಸಭೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ಹಾಗೇನಾದರೂ ದುಂಡಾವರ್ತನೆ ತೋರಿ ಭಾಗವಹಿಸಿದ್ದ ದಾಖಲೆ ಸಿಕ್ಕರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಲ್ಲ ಎಂದು ಜಿಪಂ ಸಿಇಒ ಡಾ.ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪಟ್ಟಣದ ತಾಪಂನ ಸಾಮರ್ಥ್ಯ ಸೌಧದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈಗಾಗಲೇ ಕೊಡಗದಾಲ ಗ್ರಾಪಂನಲ್ಲಿ ಈ ರೀತಿಯ ಕೃತ್ಯ ನಡೆದಿದ್ದು ಕಂಡು ಬಂದಿದೆ. ಮುಂದೆ ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್ಲಿ ದಲಿತ ಸಮಾಜದ ಪಿಡಿಒಗಳು ಕರ್ತವ್ಯಕ್ಕೆ ಬಂದಾಗಲೆಲ್ಲ ಆಡಳಿತ ಸದಸ್ಯರು ಕಿರುಕುಳ ಕೊಡುತ್ತಿದ್ದಾರೆ. ಅದು ಈಗಲೂ ಮುಂದುವರಿದಿದ್ದು ಸರಿಪಡಿಸದಿದ್ದರೆ ಗ್ರಾಪಂ ಮುಂದೆ ಧರಣಿ ಕೂರುವುದಾಗಿ ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಹಾಗೂ ಕೊಡಗದಾಲ ಗ್ರಾಮದ ದಲಿತ ಮುಖಂಡರು ತಿಳಿಸಿದರು. ಈ ಬಗ್ಗೆ ಎರಡೂ ಕಡೆಯಿಂದ ಸಮಸ್ಯೆಯಿದ್ದು ಪರಿಶೀಲಿಸುತ್ತೇನೆ ಎಂದರು.

ಐಡಿಹಳ್ಳಿಯ ಚೌಳಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಟೆಂಡರ್ ಕರೆದಿರುವ ಬಗ್ಗೆ ಬಂದ ದೂರಿಗೆ ಪ್ರತಿಕ್ರಿಯಿಸಿದ ಸಿಇಒ ಇಲಾಖೆ ಹಾಗೂ ಸ್ಥಳೀಯ ಗ್ರಾಪಂನಲ್ಲಿನ ಗೊಂದಲವೇ ಇದಕ್ಕೆ ಕಾರಣವಾಗಿದ್ದು ಸರಿಪಡಿಸಿಕೊಳ್ಳಿ ಎಂದರು.

ಇನ್ನು ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಏಕಪಕ್ಷೀಯವಾಗಿ ಆದೇಶ ಮಾಡದಂತೆ ಹೊಸಕೆರೆ ಪಿಡಿಒಗೆ ಸೂಚಿಸಿದರು. ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘದ ಬದಲಿಗೆ ಸ್ವಾಮಿ ವಿವೇಕಾನಂದ ಯುವಕರ ಸಂಘ ಎಂದು ಬದಲಾಯಿಸಿರುವ ಸರ್ಕಾರ ವಿವಿಧ ಚಟುವಟಿಕೆಗಳಿಗೆ 5 ಲಕ್ಷ ರೂ. ಸಾಲ ನೀಡಲಿದ್ದು 1 ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಇಂತಹ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಡಿಸೆಂಬರ್ ಒಳಗಾಗಿ ಯೋಜನಾ ವರದಿ ನೀಡಲು ಸೂಚಿಸಿದರು.

ನಿವೃತ್ತಿಯಾದರೂ ಸರ್ಕಾರಿ ಸಿಮ್ ಬಳಕೆ : ದೊಡ್ಡಯಲ್ಕೂರು ಗ್ರಾಪಂನ ಸರ್ಕಾರಿ ಸಿಮ್ ಕಾರ್ಡ್ ನಿವೃತ್ತಿಯಾದ ಪಿಡಿಒ ನಾಗರಾಜು ಎಂಬುವವರು ಬಳಸುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ಬಂದಿದ್ದು ಪರಿಶೀಲಿಸಿದಾಗ ಸ್ಪಷ್ಟವಾಗಿತ್ತು. ಕರೆ ಮಾಡಿದಾಗ ನಿವೃತ್ತ ಅಧಿಕಾರಿಯೇ ಕರೆ ಸ್ವೀಕರಿಸಿದ್ದರು. ಆದರೆ ಮತ್ತೆ ಅದೇ ನಂಬರ್‌ಗೆ ಕರೆ ಮಾಡಿದಾಗ ಕಾರ್ಯದರ್ಶಿ ಬಳಿ ಇತ್ತು. ಒಂದೇ ಸಂಖ್ಯೆಯ ಸಿಮ್ ಕಾರ್ಡನ್ನು ಇಬ್ಬರು ಬಳಸುತ್ತಿದ್ದಾರೆ ಎಂಬ ಅಂಶ ಸಭೆಗೆ ತಿಳಿಯಿತು. ಆದರೆ ಒಂದೇ ಸಂಖ್ಯೆಯ 2 ಸಿಮ್ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯದೆ ಅಧಿಕಾರಿಗಳು ಗೊಂದಲಕ್ಕೊಳಗಾಗಿದರು.

ಶಾಲೆಯ ಅನುದಾನದ ಜಮೀನು ದಾಖಲಿಸಿ : ಸರ್ಕಾರಿ ಜಾಗದಲ್ಲಿರುವ ಶಾಲಾ ಜಮೀನುಗಳನ್ನು ಮೊದಲು ಸರ್ವೆ ಮಾಡಿಸಿ ಖಾತೆ ಸಿದ್ದ ಮಾಡಬೇಕು. ನಂತರ ಖಾಸಗಿಯಾಗಿ ಶಾಲೆಗೆ ಭೂ ದಾನ ಕೊಟ್ಟಿರುವ ದಾಖಲೆಗಳನ್ನು ಶೀಘ್ರವಾಗಿ ಸರಿಪಡಿಸಿ. ಈಗಾಗಲೇ ಇಂತಹ 106 ಪ್ರಕರಣದಲ್ಲಿ 58 ದಾಖಲಾತಿಗಳು ಲಭ್ಯವಿದೆ ಎಂದರು.

ಸಿಸಿಟಿವಿ-ಗುರುತಿನ ಚೀಟಿಯಿಲ್ಲ : ಗ್ರಾ.ಪಂಗಳಲ್ಲಿರುವ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರಿ ಮೊಬೈಲ್‌ಗೆ ಕರೆ ಮಾಡಿದರೆ ಹಲವಾರು ಪಿಡಿಒಗಳು ಕರೆ ಸ್ವೀಕರಿಸಲ್ಲ ಎಂಬ ಆರೋಪ ಕೇಳಿಬಂದಿತು. ಕಚೇರಿಯಲ್ಲಿ ಸಾರ್ವಜನಿಕರ ಸಂಪರ್ಕ ಅಧಿಕಾರಿಯ ಮೊಬೈಲ್ ಸಂಖ್ಯೆ ಹಾಗೂ ಸಕಾಲದ ನಾಮ-ಫಲಕವಿಲ್ಲ ಹಾಗೂ ಸಿಂಗನಹಳ್ಳಿ ಗ್ರಾಪಂನಲ್ಲಿ ಸಂಜೆ 4.30 ಕ್ಕೆ ಬೀಗ ಹಾಕುವ ಬಗ್ಗೆ ಮಾಹಿತಿ ಪಡೆದ ಸಿಇಒ ಗರಂ ಆದರು.

ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೂ ಕಚೇರಿ ಮುಚ್ಚುವಂತಿಲ್ಲ. ಶೀಘ್ರ ಸಕಾಲ ಬೋರ್ಡ್‌ ಅಳವಡಿಸಿ ಈ ಬಗ್ಗೆ ಮತ್ತೆ ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ತಾಲೂಕಿನಲ್ಲಿ ಪಿಡಿಒಗಳ ಸಂಖ್ಯೆ ಹೆಚ್ಚಿದ್ದು ಕೆಲಸ ಮಾಡುವವರಿಗೆ ಹೆಚ್ಚುವರಿ ಕೆಲಸ ನೀಡಿ ಆ ಪಟ್ಟಿಯನ್ನು ನೀಡಲು ಇಒ ಅವರಿಗೆ ಸೂಚಿಸಿದರು.

40 ಅರ್ಜಿಗಳ ಪರಿಶೀಲನೆ ಬಳಿಕ ಶ್ರಾವಂಡನಹಳ್ಳಿ , ಚಿಕ್ಕಮಾಲೂರು ಗ್ರಾಮದಲ್ಲಿ ಕಸವಿಲೇವಾರಿ ಘಟಕ ಹಾಗೂ ಶಾಲಾ ಮೂಲಭೂತ ಸೌಕರ್ಯದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ (ಆಡಳಿತ) ಹಾಲಪ್ಪ ಪೂಜಾರ್, ಉಪಕಾರ್ಯದರ್ಶಿ (ಅಭಿವೃದ್ಧಿ) ಅತೀಕ್ ಪಾಷ, ಮುಖ್ಯ ಯೋಜನಾಧಿಕಾರಿ ಸಣ್ಣ ನರಸೀಯಪ್ಪ, ಇಒ ಲಕ್ಷ್ಮಣ್, ಎಡಿ ಗುರುಮೂರ್ತಿ, ಎಒ ಮಧುಸೂದನ್, ತಾಲೂಕು ಅಧಿಕಾರಿಗಳು, ಎಲ್ಲ ಪಿಡಿೊಗಳು ಹಾಗೂ ಸಾರ್ವಜನಿಕರು ಇದ್ದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ