
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಹೆಚ್ಚಳವಾಗಬೇಕಿದ್ದು 14ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲದ ಕಾರಣ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ವಕೀಲ ಎಚ್.ಬಿ.ಶಿವರಾಜು ಹಾಗೂ ಅವರ ತಂಡ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದು ಅದರ ವಿಚಾರಣೆ ನಾಳೆ (ಏ.7) ನಡೆಯಲಿದೆ.
ಕಳೆದ ಮಾರ್ಚ್ 10ರಂದು ಈ ಸಂಬಂಧ ಹೈ ಕೋರ್ಟ್‌ನಲ್ಲಿ ಶಿವರಾಜು ಹಾಗೂ ಅವರ ವಕೀಲರ ತಂಡ ಅರ್ಜಿ ಹಾಕಿದೆ. ಅರ್ಜಿಯನ್ನು ಮಾ.11ರಂದು ಮಾನ್ಯಮಾಡಿದ ಹೈ ಕೋರ್ಟ್ ಸಂಬಂಧಪಟ್ಟ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತ್ತು.
ಆ ವಿಚಾರಣೆ ನಾಳೆ ನಡೆಯಲಿದ್ದು, ನೌಕರರ ಪರವಾಗಿ ಶಿವರಾಜು ಹಾಗೂ ಕೆಲ ಹಿರಿಯ ವಕೀಲರು ವಾದ ಮಂಡಿಸಲಿದ್ದಾರೆ. ಅದರಂತೆ ಸರ್ಕಾರದ ಪರವಾಗಿದ ವಕೀಲರ ಪ್ರತಿವಾದ ಮಂಡಿಸಲಿದ್ದಾರೆ.
ಇನ್ನೂ ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರ ಸಹಿಯೊಂದಿಗೆ ಪಿಟಿಶನ್‌ಫೈಲ್ ಮಾಡಿದ್ದಾರೆ.
ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ನೌಕರರಿಗೆ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮತ್ತೆ ವೇತನ ಹೆಚ್ಚಳವಾಗಬೇಕಿತ್ತು, ಅದನ್ನು ಕೂಡ ಮಾಡಿಲ್ಲ.
ಇನ್ನು ಇದೇ ಏ.5ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ನೌಕರರ ಸಂಘಟನೆಗಳ ಸಭೆ ಕರೆಯಲಾಗಿತ್ತು ಆದರೆ ಅದನ್ನು ಸಕಾರಣ ನೀಡದೆ ಸರ್ಕಾರ ಮುಂದೂಡಿದೆ. ಹೀಗಾಗಿ ನಾಳೆ ಕೋರ್ಟ್‌ನಲ್ಲಿ ವಿಚಾರಣೆ ಇರುವುದರಿಂದ ಕೋರ್ಟ್ ಏನು ನಿರ್ದೇಶನ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಎಲ್ಲವನ್ನು ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ನೌಕರರಿಗೆ ವೇತನಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ಮೆಟ್ಟಿಲೇರಿದ್ದಾರೆ.
ಧಾರವಾಡ ಹೈ ಕೋರ್ಟ್‌ನಲ್ಲಿ ಡಿಎಂಇಗಳ ಬಡ್ತಿ ವಿಚಾರಣೆ: ಇನ್ನು ಇದರ ಜತೆಗೆ ಧಾರವಾಡ ಹೈ ಕೋರ್ಟ್‌ನಲ್ಲಿ ಸಾರಿಗೆಯ 5 ಮಂದಿ ಡಿಎಂಇಗಳ ಬಡ್ತಿ ವಿಚಾರಣೆ ಕೂಡ ನಾಳೆಯೇ ನ್ಯಾಯಮೂರ್ತಿಗಳಾದ ಜ್ಯೋತಿಮಾಲಿಮುನಿ ಅವರ ಏಕಸದಸ್ಯ ಪೀಠದಲ್ಲಿ ನಡೆಯಲಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲ ಶಿವರಾಜು ಅವರು ವಾದ ಮಂಡನೆ ಮಾಡಲಿದ್ದಾರೆ.
