
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಹೆಚ್ಚಳವಾಗಬೇಕಿದ್ದು 14ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲದ ಕಾರಣ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ವಕೀಲ ಎಚ್.ಬಿ.ಶಿವರಾಜು ಹಾಗೂ ಅವರ ತಂಡ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದು ಅದರ ವಿಚಾರಣೆ ಇಂದು ನಡೆಯಿತು.
ಈ ವೇಳೆ ರಾಜ್ಯ ಸರ್ಕಾರದ ಪರ ಹಾಗೂ ಸಾರಿಗೆ ಸಂಸ್ಥೆಯ ಪರ ವಕೀಲರು ವಕಾಲತ್ತು ಹಾಕಲು 2 ವಾರಗಳ ಕಾಲ ಸಮಯ ಕೇಳಿದ್ದರಿಂದ ನ್ಯಾಯಾಲಯವು ಅವರಿಗೆ ಅವಕಾಶ ಕೊಟ್ಟು ವಿಚಾರಣೆತನ್ನು ಮುಂದೂಡಿದೆ. ಆದರೆ, ಈ ನಡುವೆ ನ್ಯಾಯಾಲಯದಿಂದ ಜನರೇಟರ್ ಆಗಿರುವ ದಿನಾಂಕದವರೆಗೆ ನೌಕರರ ಪರ ವಕೀಲರು ಕಾಯುವವ ಅಗತ್ಯವಿಲ್ಲ.
ಅಂದರೆ ವೇತನ ಸೌಲಭ್ಯ ಸಂಬಂಧ ನೌಕರರ ಪರವಾಗಿ ಪ್ರಕರಣವನ್ನು ದಾಖಲು ಮಾಡಿರುವ ವಕೀಲ ಎಚ್.ಬಿ.ಶಿವರಾಜು ಅವರು ಪ್ರಕರಣದ ತುರ್ತು ವಿಚಾರಣೆಗಾಗಿ ಮೆಮೋ ಸಲ್ಲಿಸಿದ್ದೇ ಆದಲ್ಲಿ ಪ್ರಕರಣವನ್ನು ಈ ಎರಡು ವಾರಗಳ ನಡುವೆ ಯಾವಾಗಬೇಕಾದರೂ ನ್ಯಾಯಾಲಯ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಅಂದರೆ, ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಂಸ್ಥೆಯ ಪರ ವಕೀಲರು ವಕಾಲತ್ತು ಹಾಕಲು ಕೇಳಿರುವ 2 ವಾರಗಳ ಸಮಯವನ್ನು ಕೋರ್ಟ್ ಕೊಟ್ಟಿದೆ. ಆದರೆ ಇದು ತುರ್ತು ಪ್ರಕರಣವೆಂದು ನೌಕರರ ಪರ ವಕೀಲರು ಮೆಮೋ ಹಾಕಿದರೆ 2-3ದಿನದಲ್ಲೇ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಇನ್ನು ತುರ್ತು ವಿಚಾರಣೆ ಮಾಡುವಂತೆ ನ್ಯಾಯಾಲಯಕ್ಕೆ ಸೋಮವಾರ ಮೆಮೋ ಸಲ್ಲಿಸುವುದಾಗಿ ನೌಕರರ ಪರ ವಕೀಲರು ವಿಜಯಪಥಕ್ಕೆ ತಿಳಿಸಿದ್ದಾರೆ. ಅದರಂತೆ ಅವರು ಒಂದು ವೇಳೆ ಮೆಮೋ ಹಾಕಿದ್ದೆ ಆದರೆ ಈ ಎರಡು ವಾರಗಳ ನಡುವೆ ಯಾವಾಗಬೇಕಾದರೂ ಈ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ದಡ್ಡವಾಗಿದೆ.
2025ರ ಮಾರ್ಚ್ 10ರಂದು ಈ ಸಂಬಂಧ ಹೈ ಕೋರ್ಟ್‌ನಲ್ಲಿ ಶಿವರಾಜು ಹಾಗೂ ಅವರ ವಕೀಲರ ತಂಡ ಅರ್ಜಿ ಹಾಕಿದೆ. ಅರ್ಜಿಯನ್ನು ಮಾ.11ರಂದು ಮಾನ್ಯಮಾಡಿದ ಹೈ ಕೋರ್ಟ್ ಸಂಬಂಧಪಟ್ಟ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತ್ತು. ಆ ವಿಚಾರಣೆ ಇಂದು ನಡೆದಿದ್ದು, ನೌಕರರ ಪರವಾಗಿ ಶಿವರಾಜು ಹಾಗೂ ಕೆಲ ಹಿರಿಯ ವಕೀಲರು ವಾದ ಮಂಡಿಸಿದ್ದಾರೆ. ಅದರಂತೆ ಸರ್ಕಾರದ ಹಾಗೂ ಸಾರಿಗೆ ಸಂಸ್ಥೆ ಪರವಾಗಿದ ವಕೀಲರು ಪ್ರತಿವಾದ ಮಂಡಿದರು.
ಪ್ರಕರಣವೇನು?: ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರ ಸಹಿಯೊಂದಿಗೆ ಮಾ.10ರಂದು ಪಿಟಿಶನ್ ಫೈಲ್ ಮಾಡಿದ್ದಾರೆ.
ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ನೌಕರರಿಗೆ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮತ್ತೆ ವೇತನ ಹೆಚ್ಚಳವಾಗಬೇಕಿತ್ತು, ಅದನ್ನು ಕೂಡ ಮಾಡಿಲ್ಲ.
ಈ ಎಲ್ಲವನ್ನು ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯ ಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ನೌಕರರಿಗೆ ವೇತನಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ಮೆಟ್ಟಿಲೇರಿದ್ದಾರೆ.
ಈ ನಡುವೆ ಇದೇ ಏ.5ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ನೌಕರರ ಸಂಘಟನೆಗಳ ಸಭೆ ಕರೆಯಲಾಗಿತ್ತು. ಆದರೆ ಅದನ್ನು ಸಕಾರಣ ನೀಡದೆ ಸರ್ಕಾರ ಮುಂದೂಡಿದೆ.