ಬೆಂಗಳೂರು: ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕ್ಷಮೆ ಕೇಳಲ್ಲವೆಂದು ಉದ್ಧಟತನ ಮೆರೆದಿದ್ದ ನಟ ಕಮಲ್ ಹಾಸನ್‌ಗೆ ಹೈಕೋರ್ಟ್ ಭಾರೀ ಚಾಟಿ ಬೀಸಿದ್ದು ಮೊದಲು ಕನ್ನಡಿಗರ ಕ್ಷಮೆ ಕೇಳಿ ಅಮೇಲೆ ವಿಚಾರಣೆ ಮಾಡೋಣ ಎಂದು ಹೇಳಿದೆ.
ಥಗ್ ಲೈಫ್ ಸಿನಿಮಾ ಬಿಡುಗಡೆ ನಿರ್ಬಂಧವನ್ನು ತೆರವು ಮಾಡುವಂತೆ ಕಮಲ್ ಹಾಸನ್ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಮೊದಲು ಕನ್ನಡಿಗರ ಕ್ಷಮೆ ಕೇಳಿ. ಆಮೇಲೆ ಅರ್ಜಿ ವಿಚಾರಣೆ ಮಾಡೋಣ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ಮೊದಲು ಕನ್ನಡಿಗರ ಕ್ಷಮೆ ಕೇಳಿ, ಆನಂತರ ಅರ್ಜಿ ವಿಚಾರಣೆ ನಡೆಸೋಣ. ಕಮಲ್ ಹಾಸನ್ ಯಾರೇ ಇರಲಿ, ನೆಲ- ಜಲ ವಿಚಾರದಲ್ಲಿ ರಾಜಿ ಇಲ್ಲ ಜತೆಗೆ ಕಮಲ್ ಹಾಸನ್ ಅವರ ಭಾಷಾ ತಜ್ಞರ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇನ್ನು ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ನಾಗ ಪ್ರಸನ್ನ ಅವರಿದ್ದ ಏಕಸದಸ್ಯಪೀಠ ಯಾವುದೋ ಭಾಷೆಯಿಂದ ಕನ್ನಡ ಹುಟ್ಟಿದ ಎಂದರೆ ಹೇಗೆ? ಇಂದಿನ ಪರಿಸ್ಥಿತಿಗೆ ಕಮಲ್ ಹಾಸನ್ ನೇರ ಕಾರಣ. ಮೊದಲು ಆ ಬಗ್ಗೆ ಕ್ಷಮೆ ಕೇಳಿ. ಬಳಿಕ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಸಿನಿಮಾ ಬಿಡುಗಡೆಗೆ ತೊಂದರೆ ಆಗುತ್ತದೆ ಎಂದು ಅರ್ಜಿ ಹಾಕಿದ್ದೀರಿ. ನನಗೆ ತಲೆಯಲ್ಲಿ ಬುದ್ಧಿ ಇಲ್ಲದೇ ಆ ರೀತಿ ಮಾತನಾಡಿದೆ ಎಂದು ಕನ್ನಡಿಗರ ಕ್ಷಮೆ ಕೇಳಿ. ಈ ಹಿಂದೆ ರಾಜಗೋಪಾಲಾಚಾರಿ ಕ್ಷಮೆ ಕೇಳಿದ್ದರು. ಬಳಿಕ ಪರಿಸ್ಥಿತಿ ತಣ್ಣಗಾಯ್ತು ಎಂದು ನ್ಯಾಯಮೂರ್ತಿಗಳು ಕಮಲ್ ಹಾಸನ್‌ಗೆ ಮಾತಿನ ಚಾಟಿ ಬೀಸಿದರು.
ಇನ್ನು ಥಗ್ ಲೈಫ್ ಸಿನಿಮಾ ಪ್ರಚಾರದ ವೇಳೆ ಕಮಲ್ ಹಾಸನ್ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದೆ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಥಗ್ ಲೈಫ್ ಸಿನಿಮಾ ಬಿಡುಗಡೆಗೆ ನಿಷೇಧದ ಬೆದರಿಕೆ ಹಾಕಿವೆ.

ಇನ್ನು ಇದೇ ಜೂನ್ 5ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಅದು ರಾಜ್ಯದಲ್ಲೂ ಪ್ರದರ್ಶನಕ್ಕೆ ಥಿಯೇಟರ್‌ಗಳು ಕೂಡ ರೆಡಿಯಾಗಿವೆ. ಆದರೆ, ಅವರು ನೀಡಿರುವ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದೆ ಎಂಬ ಹೇಳಿಕೆಯಿಂದ ಕರ್ನಾಟಕದ ಮಂದಿಗೆ ಭಾರಿ ನೋವಾಗಿದೆ. ಹೀಗಾಗಿ ಕ್ಷಮೆ ಕೇಳಿ ಎಂದು ಪಟ್ಟುಹಿಡಿದಿದ್ದು ಇದಕ್ಕೆ ನಾನು ತಪ್ಪು ಹೇಳಿಕಲ್ಲ ಹಾಗಾಗಿ ಕ್ಷಮೆ ಕೇಳೊಲ್ಲ ಎಂದು ಉದ್ಧಟತನ ಮೆರೆಯುತ್ತಿದ್ದಾರೆ ಕಮಲಹಾಸನ್.
Related
