ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಅದರ ವಿಚಾರಣೆ ನಾಳೆ ನಡೆಯಬೇಕಿತ್ತು ಆದರೆ, ಕೆಲ ಕಾರಣಗಳಿಂದ ಇದೇ ಜೂನ್ 9ಕ್ಕೆ ಕೋರ್ಟ್ ಹಾಲ್‌ಗೆ ಬರಲಿದೆ ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು 16ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಈ ವೇಳೆ ರಾಜ್ಯ ಸರ್ಕಾರದ ಪರ ಹಾಗೂ ಸಾರಿಗೆ ಸಂಸ್ಥೆಯ ಪರ ವಕೀಲರು ವಕಾಲತ್ತು ಹಾಕಲು ಏಪ್ರಿಲ್ 7ರಂದು 2 ವಾರಗಳ ಕಾಲ ಸಮಯ ಕೇಳಿದ್ದರಿಂದ ನ್ಯಾಯಾಲಯವು ಅವರಿಗೆ ಅವಕಾಶ ಕೊಟ್ಟು ವಿಚಾರಣೆಯನ್ನು ಮುಂದೂಡಿತ್ತು. ಆದರೆ, ಈ ನಡುವೆ ನ್ಯಾಯಾಲಯದಿಂದ ಜನರೇಟರ್ ಆಗಿರುವ ದಿನಾಂಕದವರೆಗೆ ನೌಕರರ ಪರ ವಕೀಲರು ಕಾಯುವ ಅಗತ್ಯವಿಲ್ಲ ಎಂದು ಈ ಹಿಂದೆ ವಕೀಲರು ಹೇಳಿದ್ದರು.
ಅಂದರೆ ವೇತನ ಸೌಲಭ್ಯ ಸಂಬಂಧ ನೌಕರರ ಪರವಾಗಿ ಪ್ರಕರಣವನ್ನು ದಾಖಲು ಮಾಡಿರುವ ವಕೀಲ ಎಚ್.ಬಿ.ಶಿವರಾಜು ಅವರು ಪ್ರಕರಣದ ತುರ್ತು ವಿಚಾರಣೆಗಾಗಿ ಮೆಮೋ ಸಲ್ಲಿಸಿದ್ದೇ ಆದಲ್ಲಿ ಪ್ರಕರಣವನ್ನು ಈ ಎರಡು ವಾರಗಳ ನಡುವೆ ಯಾವಾಗಬೇಕಾದರೂ ನ್ಯಾಯಾಲಯ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಿದ್ದರು.
ಅದರಂತೆ ಏ.22ರಂದು ಪ್ರಕರಣದ ವಿಚಾರಣೆಗೆ ಬಂದಿತ್ತು. ನೌಕರರ ಪರ ವಕೀಲರು ಪ್ರಕರಣವನ್ನು ತುರ್ತು ವಿಚಾರಣೆ ಮಾಡುವಂತೆ ಮತ್ತೆ ಮನವಿ ಮಾಡಿದ್ದರಿಂದ ಜೂ.4ರಂದು ಪ್ರಕರಣ ವಿಚಾರಣೆ ಮಾಡಲು ತಿಳಿಸಿದ್ದರು,ಆದರೆ ಹೊಸ ನ್ಯಾಯಮೂರ್ತಿಗಳು ಬಂದಿರುವುದರಿಂದ ಜೂ.9ರಂದು ವಿಚಾರಣೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್ 10ರಂದು ಈ ಸಂಬಂಧ ಹೈ ಕೋರ್ಟ್‌ನಲ್ಲಿ ಶಿವರಾಜು ಹಾಗೂ ಅವರ ವಕೀಲರ ತಂಡ ಅರ್ಜಿ ಹಾಕಿದೆ. ಅರ್ಜಿಯನ್ನು ಮಾ.11ರಂದು ಮಾನ್ಯಮಾಡಿದ ಹೈ ಕೋರ್ಟ್ ಸಂಬಂಧಪಟ್ಟ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತ್ತು. ಆ ವಿಚಾರಣೆ ಏ.7ರಂದು ನಡೆದಿದ್ದು, ನೌಕರರ ಪರವಾಗಿ ಶಿವರಾಜು ಹಾಗೂ ಕೆಲ ಹಿರಿಯ ವಕೀಲರು ವಾದ ಮಂಡಿಸಿದ್ದರು.
ಪ್ರಕರಣವೇನು?: ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರ ಸಹಿಯೊಂದಿಗೆ ಮಾ.10ರಂದು ಪಿಟಿಶನ್ ಫೈಲ್ ಮಾಡಿದ್ದಾರೆ.
ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ.
ಇತ್ತ ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯ ಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ನೌಕರರಿಗೆ ವೇತನಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related

You Might Also Like
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...
KSRTC ನೂತನ ಎಂಡಿ ಅಕ್ರಮ್ ಪಾಷಗೆ ಸ್ವಾಗತ ಕೋರಿದ ನಿಗಮದ ಪ್ರಭಾರ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಕ್ರಮ್ ಪಾಷ ಇಂದು ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ...
ಟೇಕಾಫ್ ಆದ ಕೆಲವೇ ಕ್ಷಣದ ಏರ್ ಇಂಡಿಯಾ ವಿಮಾನ ಪತನ: ಇಬ್ಬರು ಸೇಫ್
ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ 240 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ...
KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಮ್ ಪಾಷ ನೇಮಕ: ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಂಪಾಷಾ ಅವರನ್ನು ನೇಮಿಸಿ ಸರ್ಕಾರ ಗುರುವಾರ (ಜೂ.12) ಆದೇಶ ಹೊರಡಿಸಿದೆ. ಇದೇ ಜೂನ್ 2ರ ಸೋಮವಾರ...
NWKRTC: ವರುಣನ ಅಬ್ಬರಕ್ಕೆ ಕಾರವಾರದ ಬಸ್ ಡಿಪೋ ಜಲಾವೃತ- ಮಳೆ ನೀರಿನಲ್ಲೇ ನಿಂತು ಹೆರಿಗೆ ಮಾಡಿಸಿದ ವೈದ್ಯರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಈ ಮಳೆಗೆ ವಾಯುವ್ಯ ರಸ್ತೆ ಸಾರಿಗೆ ನಿಮಗದ ಘಟಕ ಸಂಪೂರ್ಣ ಜಲಾವೃತವಾಗಿದ್ದು, ಬಸ್ಗಳನ್ನು ತೆಗೆಯುವುದಕ್ಕೂ ಸಿಬ್ಬಂದಿ ಪರದಾಡಿತ...