NEWSನಮ್ಮಜಿಲ್ಲೆನಮ್ಮರಾಜ್ಯ

BMTC ಬಸ್‌ನಲ್ಲಿ ಕಳೆದುಕೊಂಡಿದ್ದ ಲ್ಯಾಪ್‌ಟಾಪ್‌ಅನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಂಗೇರಿ – ಬನಶಂಕರಿ ನಡುವೆ ಸಂಚರಿಸುವ ( ಮಾರ್ಗ ಸಂಖ್ಯೆ 375) ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಲ್ಯಾಪ್‌ಟಾಪ್‌ ಮತ್ತು ಬ್ಯಾಗನ್ನು ಮತ್ತೆ ಅವರಿಗೆ ತಲುಪಿಸುವ ಮೂಲಕ ಬಿಎಂಟಿಸಿ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ.

ಸಾರಿಗೆ ನೌಕರರು ಇಂಥ ಹಲವಾರು ಪ್ರಾಮಾಣಿಕ ಸೇವೆ ಮಾಡುತ್ತಿರುತ್ತಾರೆ. ಆದರೆ ಅವುಗಳಲ್ಲಿ ಬೆಳಕಿಗೆ ಬರುವುದು ತೀರ ಕಡಿಮೆ. ಜತೆಗೆ ಅವರಿಗೆ ಕೊಡುತ್ತಿರುವ ವೇತನವೂ ಅಷ್ಟೇ ಕಡಿಮೆ ಇದೆ. ಆದರೂ ನೌಕರರು ಪ್ರಾಮಾಣಿಕತೆ ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತುತಲೇ ಇರುತ್ತದೆ.

ಹೌದು ! ಇಂದು (ನ.28) ಕೆಂಗೇರಿ – ಬನಶಂಕರಿ ನಡುವೆ ಸಂಚರಿಸುವ ಮಾರ್ಗ ಸಂಖ್ಯೆ 375 ರಲ್ಲಿ ಅಶ್ವಿನಿ ಎಂಬುವವರು ಪ್ರಯಾಣಿಸುವಾಗ ಮರೆತು ಬ್ಯಾಗು ಮತ್ತು ಲ್ಯಾಪ್‌ಟಾಪ್‌ ಬಿಟ್ಟುಹೋಗಿದ್ದರು. ಈ ವೇಳೆ ಅದನ್ನು ಗಮನಿಸಿದ ನಿರ್ವಾಹಕರು ಮತ್ತು ಚಾಲಕರು ಆ ಬ್ಯಾಗು ಮತ್ತು ಲ್ಯಾಪ್‌ಟಾಪ್‌ಅನ್ನು ಬನಶಂಕರಿ ಬಸ್ ನಿಲ್ದಾಣದಲ್ಲಿದ್ದ ಅಧಿಕಾರಿಗಳಿಗೆ ತಲುಪಿಸಿದರು.

ಆ ಬಳಿಕ ಬ್ಯಾಗ್‌ನಲ್ಲಿ ಇದ್ದ ಫೋನ್‌ಮೂಲಕ ಅಶ್ವಿನಿಯವರನ್ನು ಸಂಪರ್ಕಿಸಿದ ಅಧಿಕಾರಿಗಳು ಬಳಿಕ ಅದನ್ನು ಆಕೆಗೆ ರಾತ್ರಿ 7.30ರಲ್ಲಿ ತಲುಪಿಸಿದ್ದಾರೆ. ಈ ವೇಳೆ ನಿಲ್ದಾಣಾಧಿಕಾರಿ ಮಹಾದೇವಯ್ಯ ಹಾಗೂ ಮೆಕ್ಯಾನಿಕ್ ಲಕ್ಕಪ್ಪ ಅವರು ಅಶ್ವಿನಿ ಅವರಿಗೆ ಬ್ಯಾಗು ಮತ್ತು ಲ್ಯಾಪ್‌ಟಾಪ್‌ಅನ್ನು ಮರಳಿಸಿದ್ದಾರೆ.

ಈ ವೇಳೆ ಮಾತನಾಡಿದ ಅಶ್ವಿನಿ, ಬಿಎಂಟಿಸಿಯ ಪ್ರಾಮಾಣಿಕ ನೌಕರರ ಸೇವೆಯನ್ನು ಶ್ಲಾಘಿಸಿದ್ದು ಸಂಸ್ಥೆಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

ಇನ್ನು ಇಂತಹ ಶ್ಲಾಘನೀಯ ಕಾರ್ಯಗಳು ಎಲ್ಲರಿಗೂ ಮಾರ್ಗದರ್ಶನವಾಗಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ನಮ್ಮ ನೌಕರರು ಹಿಂದೆ ಸರಿಯುವುದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಸಂತಸ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ