CRIMENEWSನಮ್ಮರಾಜ್ಯ

ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ

ವಿಜಯಪಥ ಸಮಗ್ರ ಸುದ್ದಿ

ಅಮರಾವತಿ: ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ 10 ಮಂದಿ ಪ್ರಯಾಣಿಕರು ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಸಮೀಪ ನಡೆದಿದೆ

ಇಂದು ಬೆಳಗಿನ ಜಾವ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಾಯವರಂ ಬಳಿಯ ಪಲಕಲಾ ಎಂಬಲ್ಲಿ ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಎರಡೂ ವಾಹನಗಳಿಗೂ ಬೆಂಕಿಹೊತ್ತಿಕೊಂಡಿದೆ. ಇದರ ಪರಿಣಾಮ ಬಸ್‌ನಲ್ಲಿದ್ದ 10 ಪ್ರಯಾಣಿಕರು ಸಜೀವ ದಹನವಾದರೆ, 18 ಮಂದಿ ಗಾಯಗೊಂಡಿದ್ದಾರೆ.

ಖಾಸಗಿ ಬಸ್‌ ಹೈದರಾಬಾದ್‌ನಿಂದ ಕಾಕಿನಾಡ ಕಡೆಗೆ ತೆರಳುತ್ತಿದ್ದಾಗ ಎದುರುಗಡೆಯಿಂದ ವೇಗವಾಗಿ ಬಂದ ಟಿಪ್ಪ‌ರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ನಿದ್ರೆಯಲ್ಲಿದ್ದ ಕಾರಣ, ಹೊರಬರಲು ಸಾಧ್ಯವಾಗದೆ ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವವಾಗಿ ದಹನಗೊಂಡಿದ್ದಾರೆ.

18 ಮಂದಿಗೆ ಸುಟ್ಟಗಾಯಗಳಾಗಿದ್ದು ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮಾರ್ಕಪುರಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಸ್ ಮತ್ತು ಟಿಪ್ಪರ್ ಎರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಬಸ್‌ನಲ್ಲಿ ಹಿಂಭಾಗ ಕುಳಿತಿದ್ದ ಹಲವರು ಸಾವನ್ನಪ್ಪಿದ್ದಾರೆ. ಮುಂಭಾಗ ಕುಳಿತಿದ್ದ ಸುಮಾರು 10 ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅತಿಯಾದ ವೇಗ ಮತ್ತು ಚಾಲಕನ ಅಜಾಗರೂಕತೆಯೇ ಈ ಭೀಕರ ಅವಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Megha
the authorMegha

Leave a Reply

error: Content is protected !!
Latest news
ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ BMTC-KSRTC: ನಾಳೆ EPS ಪಿಂಚಣಿದಾರರ ಕನಿಷ್ಠ ಪಿಂಚಣಿ ₹7,500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ... KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಟ್ರಂಪ್‌ ಕದನ ವಿರಾಮ ಘೋಷಣೆ ಬೆನ್ನಲ್ಲೇ ಇಳಿಕೆಯಾಗಿದ್ದ ಕಚ್ಚಾ ತೈಲ ಬೆಲೆ ಮತ್ತೆ ಏರಿಕೆ GBA ಉತ್ತರ- ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರಿಗೆ ದಂಡ: ಆಯುಕ್ತ P.S.ಕುಮಾರ್ ಎಚ್ಚರಿಕೆ ನೌಕರರಿಗೆ ಗುಡ್‌ ನ್ಯೂಸ್: ಏ.1ರಿಂದ ಬದಲಾಗಲಿದೆ ನಿಮ್ಮ ಸಂಬಳ, ಲಾಭ ಹೆಚ್ಚು! ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರ ರೈತರು