NEWSದೇಶ-ವಿದೇಶನಮ್ಮರಾಜ್ಯ

ಟ್ರಂಪ್‌ ಕದನ ವಿರಾಮ ಘೋಷಣೆ ಬೆನ್ನಲ್ಲೇ ಇಳಿಕೆಯಾಗಿದ್ದ ಕಚ್ಚಾ ತೈಲ ಬೆಲೆ ಮತ್ತೆ ಏರಿಕೆ

ವಿಜಯಪಥ ಸಮಗ್ರ ಸುದ್ದಿ

ಲಂಡನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 5 ದಿನದ ಕದನ ವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಒಂದು ಬ್ಯಾರೆಲ್‌ ಕಚ್ಚಾ ತೈಲದ (159 ಲೀಟರ್‌) ದರ ಶೇ.11ರಷ್ಟು ಇಳಿಕೆಯಾಗಿತ್ತು. ಆದರೆ, ಯಾವುದೇ ಸಂಧಾನ ಆಗಿಲ್ಲ ಎಂದು ತಿಳಿದ ಬಳಿಕ ಮತ್ತೆ ಏರಿಕೆಯತ್ತ ಸಾಗಿದೆ.

ಇಂದು ಒಂದು ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 109.91 ಡಾಲರ್‌ಗೆ (10,220 ರೂ.) ಏರಿಕೆಯಾಗಿತ್ತು. ಆದರೆ ಟ್ರಂಪ್‌ ಇರಾನ್‌ ಜತೆಗಿನ ಶಾಂತಿ ಮಾತುಕತೆ ಮತ್ತು ಕದನ ವಿರಾಮ ಕುರಿತ ಸುದ್ದಿ ಪ್ರಕಟಿಸಿದ ನಂತರ ಕಚ್ಚಾ ತೈಲ (Crude Oil) ಬೆಲೆ 93 ಡಾಲರ್‌ಗೆ (8,660 ರೂ.) ಇಳಿಕೆಯಾಗಿತ್ತು.

ಟ್ರಂಪ್‌ ಘೋಷಣೆ ಪ್ರಕಟವಾದ ನಂತರ ಯಾವುದೇ ಶಾಂತಿ ಮಾತುಕತೆ ಅಮರಿಕದ ಜತೆ ನಡೆದಿಲ್ಲ ಎಂದು ಇರಾನ್‌ (Iran) ಪ್ರತಿಕ್ರಿಯೆ ನೀಡಿದ ಬಳಿಕ ಮತ್ತೆ ಕಚ್ಚಾ ತೈಲದ ದರ ಏರಿಕೆ ಕಾಣತೊಡಗಿದದು, ಈಗ 96 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದೆ.

ಅಮೆರಿಕ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿ (Hormuz Strait) ಇರಾನ್‌ ಬಂದ್‌ ಮಾಡಿದೆ. ಅಷ್ಟೇ ಅಲ್ಲದೇ ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ 18 ಕೋಟಿ ರೂ. ಶುಲ್ಕ ವಿಧಿಸುವ ತೀರ್ಮಾನ ತೆಗೆದುಕೊಂಡಿದೆ.

ಅಮೆರಿಕ, ಇಸ್ರೇಲ್‌ ಮಿತ್ರ ದೇಶಗಳ ಹಡಗುಗಳು ಈ ಜಲಸಂಧಿ ಬಳಸಲು ಅವಕಾಶ ನೀಡುವುದಿಲ್ಲ. ತನ್ನ ಮಿತ್ರ ದೇಶಗಳ ಹಡಗುಗಳಿಗೆ ಮಾತ್ರ ಅನುಮತಿ ನೀಡುವುದಾಗಿ ಹೇಳಿತ್ತು. ಸದ್ಯ ಈಗ ಭಾರತ, ಚೀನಾ, ಪಾಕಿಸ್ತಾನ, ಟರ್ಕಿ, ಇರಾಕ್‌ ದೇಶದ ಹಡಗುಗಳಿಗೆ ಮಾತ್ರ ಸಂಚರಿಸಲು ಇರಾನ್‌ ಅನುಮತಿ ನೀಡಿದೆ.

Megha
the authorMegha

Leave a Reply

error: Content is protected !!
Latest news
ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌ KSRTC ನೌಕರರ ಕೂಟ- ಜಂಟಿ ಸಮಿತಿ ಸಭೆ ಸೇರುವ ಬಗ್ಗೆ ಎರಡು ದಿನದಲ್ಲಿ ನಿರ್ಣಯ: ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾ... ರಾಜೀನಾಮೆ ನೀಡದೇ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ- ಸರ್ಕಾರ ವಜಾಗೊಳಿಸಿದ ರಾಜ್ಯಪಾಲ KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪ... ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕ... ಬಸ್–ತೈಲ ಟ್ಯಾಂಕರ್ ನಡುವೆ ಡಿಕ್ಕಿ: 16 ಮಂದಿ ಸಜೀವ ದಹನ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನಗಳು KSRTC ಸಂಸ್ಥೆಯ ನೌಕರರ ಬಾಳು ಹಸನು ಮಾಡಲು ಸಂಘಟನೆಗಳ ನಾಯಕರು ಒಗ್ಗಟ್ಟಾಗಿ: ಜೀವನ್ ಮಾರ್ಟಿಸ್ ಮನವಿ ಟನ್‌ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ ಟನ್‌ ಕಬ್ಬಿಗೆ 3650 ರೂ. ಎಫ್ಆರ್‌ಪಿ ದರ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸಲ್ಲ- 4500 ರೂ. ನಿಗದಿಗೊಳಿಸಬೇಕು: ಕ...