NEWSನಮ್ಮರಾಜ್ಯರಾಜಕೀಯ

ನವೆಂಬರ್‌ ಮೂರನೇ ವಾರದಲ್ಲೇ ನಾನು ಸಿಎಂ ಆಗಬೇಕು: ಹೈಕಮ್ಯಾಂಡ್, ಸಿದ್ದರಾಮಯ್ಯ ಆಪ್ತರಿಗೆ ಸಂದೇಶ ರವಾಸಿದ ಡಿಕೆಶಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ಸಿದ್ದರಾಮಯ್ಯ ಆಪ್ತರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಅದರ ಜತೆಗೆ ಮುಖ್ಯಮಂತ್ರಿ ಹುದ್ದೆಯನ್ನು ತಮಗೆ ನೀಡಬೇಕೆಂದು ಡೆಡ್ ಲೈನ್ ಕೂಡ ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ನೀಡಿದ್ದಾರೆ. ಸಿಎಂ ಆಪ್ತರೊಬ್ಬರಿಗೆ ಕರೆ ಮಾಡಿ ಡೆಡೆ ಲೈನ್ ದಿನಾಂಕವನ್ನೂ ಕೂಡ ಶಿವಕುಮಾರ್ ತಿಳಿಸಿದ್ದಾರೆ.

ನವೆಂಬರ್ 21ರಂದು ತಾನೇ ಸಿಎಂ ಆಗಬೇಕೆಂದು ಕಡ್ಡಿ ತುಂಡಾಗುವಂತೆ ಡಿಕೆಶಿ ಹೇಳಿದ್ದಾರೆ. ಎಐಸಿಸಿ ನಾಯಕರ ಮೂಲಕ ಹೈಕಮಾಂಡ್‌ಗೂ ಇದೇ ಸಂದೇಶವನ್ನು ರವಾನಿಸಿದ್ದಾರೆ. ನವೆಂಬರ್‌ನಲ್ಲಿ ಮೂರು ದಿನಾಂಕಗಳನ್ನು ಡಿಕೆಶಿ ಅವರು ನಿಗದಿ ಮಾಡಿಕೊಂಡಿದ್ದಾರೆ.

ಜ್ಯೋತಿಷಿಗಳ ಸಲಹೆಯಂತೆ ನವೆಂಬರ್ ಮೂರನೇ ವಾರದಲ್ಲಿ ಮೂರು ದಿನಾಂಕಗಳನ್ನು ಡಿಸಿಎಂ ನಿಗದಿಪಡಿಸಿಕೊಂಡಿದ್ದು, ಆ ಮೂರು ದಿನಾಂಕಗಳಲ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ಸಜ್ಜಾಗಿದ್ದಾರೆ.

ನಿಗದಿತ ದಿನಾಂಕದ ಬಳಿಕ ಸಿಎಂ ಆಗದಿದ್ದರೆ ಮುಂದೇನು ಮಾಡಬೇಕು ಎಂಬುದು ಗೊತ್ತಿದೆ ಎಂದು ಕೂಡ ಶಿವಕುಮಾರ್ ಹೇಳಿದ್ದಾರೆ. ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅತ್ಯಾಪ್ತರ ಬಳಿಯೂ ಇದೇ ಸಂದೇಶವನ್ನು ರವಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಪಾಳಯದಲ್ಲಿ ಡಿಸಿಎಂ ಕೊಟ್ಟಿರುವ ಡೆಡ್ ಲೈನ್ ಹೊಸ ಚರ್ಚೆ ಹುಟ್ಟು ಹಾಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಈಗ ಮುಂದೇನಾಗುತ್ತೆ ಎಂಬುದು ಭಾರಿ ಕುತೂಹಲಕ್ಕೂ ಕಾರಣವಾಗಿದೆ.

ಈ ಹಿಂದೆ 2008-2013ರ ಅವಧಿಯಲ್ಲಿ ಹಾಗೂ 2019-2023ರ ಅವಧಿಯಲ್ಲಿ ಸಿಎಂ ಕುರ್ಚಿಗಾಗಿ ಬಿಜೆಪಿ ಪಕ್ಷದಲ್ಲಿ ನಡೆದ ಬಿರುಸಿನ ಬೆಳವಣಿಗೆಗಳು ಈಗ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವ ಸೂಚನೆಯನ್ನು ಡಿಸಿಎಂ ಡಿಕೆಶಿ ಡೆಡ್ ಲೈನ್ ನೀಡಿದ್ದು ಮುದೇನಾಗುತ್ತದೆ ಎಂಬುದನ್ನು ತಿಳಿಯುವುದಕ್ಕೆ ನವೆಂಬರ್‌ ಮೂರನೆ ವಾರದೊರೆಗೂ ಕಾಯಬೇಕಿದೆ.

Megha
the authorMegha

Leave a Reply

error: Content is protected !!