NEWSದೇಶ-ವಿದೇಶರಾಜಕೀಯ

ಬಿಹಾರಿಗಳಿಗೆ ಪ್ರಣಾಳಿಕೆಯಲ್ಲಿ ಎನ್‌ಡಿಎ ಕೊಟ್ಟ ಗಿಫ್ಟ್‌- ಕೋಟಿ ಲಖ್‌ಪತಿ ದೀದಿಗಳಿಗೆ ಲಕ್ಷ ಲಕ್ಷ ನೆರವು- 1ಕೋಟಿ ಉದ್ಯೋಗ ಸೃಷ್ಟಿ

ವಿಜಯಪಥ ಸಮಗ್ರ ಸುದ್ದಿ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಕಾವು ಏರುತ್ತಿದ್ದು, ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದೆ. ಹೀಗಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು ಎಂದು ಪಣತೊಟ್ಟಿರುವ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಮತರಾರರಿಗೆ ಅಪಾರ ಕೊಡೆಗಳನ್ನು ಘೋಷಿಸುತ್ತಿವೆ.

ಅದರಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾಮೂಹಿಕ ವಲಸೆಗೆ ಹೆಸರುವಾಸಿಯಾದ ರಾಜ್ಯದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಮೆಗಾ ಭರವಸೆ ನೀಡಿದೆ.

ಹೌದು! ಎನ್‌ಡಿಎ ‘ಸಂಕಲ್ಪ ಪತ್ರ’ವನ್ನು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಬೆಳಗ್ಗೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಮಹಿಳಾ ಸಬಲೀಕರಣ ಯೋಜನೆಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಬಿಹಾರದಲ್ಲಿ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಏಳು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೂಲಸೌಕರ್ಯ ಅಭಿಯಾನದ ಜತೆಗೆ, ಒಂದು ಕೋಟಿ ಮಹಿಳೆಯರನ್ನು ‘ಲಕ್ಷಪತಿ ದೀದಿ’ಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಎನ್‌ಡಿಎ ಹೊಂದಿದೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಇನ್ನು ಪ್ರತಿ ವರ್ಷ ಕಾರ್ಮಿಕರ ಬೃಹತ್ ವಲಸೆಯನ್ನು ಕಾಣುವ ರಾಜ್ಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಅತಿದೊಡ್ಡ ಘೋಷಣೆಯಾಗಿತ್ತು. ಮತ್ತೊಮ್ಮೆ ಆಯ್ಕೆಯಾದರೆ, ಬಿಹಾರದ ಪ್ರತಿಯೊಬ್ಬ ಯುವಕರಿಗೂ ಕೌಶಲ್ಯ ಆಧಾರಿತ ಉದ್ಯೋಗವನ್ನು ಒದಗಿಸಲು ಕೌಶಲ್ಯ ಜನಗಣತಿಯನ್ನು ನಡೆಸುವುದಾಗಿ ಎನ್‌ಡಿಎ ಭರವಸೆ ನೀಡಿತ್ತು. ಪ್ರತಿ ಜಿಲ್ಲೆಯಲ್ಲಿ ಮೆಗಾ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿ ಬಿಹಾರವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿ ರೂಪಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯ ಮೂಲಕ ಮಹಿಳೆಯರಿಗೆ 2 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುವುದು. ಎನ್‌ಡಿಎ ಒಂದು ಕೋಟಿ ‘ಲಕ್ಷಪತಿ ದೀದಿ’ಗಳಿಗೆ ನೆರವು ನೀಡುವ ಪ್ರತಿಜ್ಞೆ ಮಾಡಿದೆ. ಇದು ಮಹಿಳೆಯರಿಗೆ ವಾರ್ಷಿಕವಾಗಿ ಒಂದು ಲಕ್ಷ ಸಂಪಾದಿಸಲು ನೆರವಾಗಲಿದೆ. ‘ಮಿಷನ್ ಕೋಟ್ಯಾಧಿಪತಿ’ ಮೂಲಕ ಮಹಿಳಾ ಉದ್ಯಮಿಗಳನ್ನು ಕೋಟ್ಯಾಧಿಪತಿಗಳನ್ನಾಗಿ ಪರಿವರ್ತಿಸುವ ಆಶಯವನ್ನು ಈ ಮೈತ್ರಿಕೂಟ ಹೊಂದಿದೆ.

ಸರ್ಕಾರವು ಏಳು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲು ಮತ್ತು 3,600 ಕಿ.ಮೀ ರೈಲು ಹಳಿಗಳನ್ನು ಆಧುನೀಕರಿಸಲು ಯೋಜಿಸಿದೆ. ಜತೆಗೆ ಪಾಟ್ನಾ, ದರ್ಭಂಗಾ, ಪೂರ್ಣಿಯಾ ಮತ್ತು ಭಾಗಲ್ಪುರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಮತ್ತು ನಾಲ್ಕು ನಗರಗಳಲ್ಲಿ ಮೆಟ್ರೋ ಜಾಲವನ್ನು ಸ್ಥಾಪಿಸಲು ಯೋಜಿಸಿದೆ.

ಪ್ರತಿ ಜಿಲ್ಲೆಯಲ್ಲಿ ಕಾರ್ಖಾನೆಗಳು ಮತ್ತು 10 ಹೊಸ ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣವೂ ಎನ್‌ಡಿಎ ಭರವಸೆಗಳಲ್ಲಿ ಸೇರಿದೆ. ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಕನಿಷ್ಠ 100 MSME ಪಾರ್ಕ್‌ಗಳು ಮತ್ತು 50,000 ಕ್ಕೂ ಹೆಚ್ಚು ಗುಡಿಸಿಲು ಉದ್ಯಮಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದೆ.

ಪ್ರತಿ ಜಿಲ್ಲೆಯಲ್ಲಿ ವಿಶ್ವ ದರ್ಜೆಯ ವೈದ್ಯಕೀಯ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜಿನ ಜತೆಗೆ ರಕ್ಷಣಾ ಕಾರಿಡಾರ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಪಾರ್ಕ್ ನಿರ್ಮಾಣದ ಭರವಸೆ ನೀಡಲಾಗಿದೆ. ಬಿಹಾರವನ್ನು ದಕ್ಷಿಣ ಏಷ್ಯಾದ ಜವಳಿ ಮತ್ತು ರೇಷ್ಮೆ ಕೇಂದ್ರವಾಗಿ ಸ್ಥಾಪಿಸುವುದಾಗಿ ಎನ್‌ಡಿಎ ಪ್ರಣಾಳಿಕೆಯಲ್ಲಿ ಪ್ರತಿಜ್ಞೆ ಮಾಡಿದೆ.

ಈ ಪ್ರಣಾಳಿಕೆಯು ರೈತರಿಗೆ ಪ್ರಮುಖ ಭರವಸೆಗಳನ್ನು ನೀಡಿದೆ. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಯ ಜತೆಗೆ, ಕಿಸಾನ್ ಸಮ್ಮಾನ್ ನಿಧಿಯನ್ನು 6,000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗುವುದು. ಮೀನುಗಾರರಿಗೆ ಸಹಾಯವನ್ನು 4,500 ರೂ.ಗಳಿಂದ 9,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದಲ್ಲದೆ, ರಾಜ್ಯದ ಕೃಷಿ-ಮೂಲಸೌಕರ್ಯದಲ್ಲಿ ಸರ್ಕಾರವು 1 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂಬ ಭರವಸೆ ನೀಡಿದೆ.

ತಾಯಿ ಜಾನಕಿ ಅಥವಾ ಸೀತೆಯ ಜನ್ಮಸ್ಥಳವ ‘ಸೀತಾಪುರಂ’ ಅನ್ನು ವಿಶ್ವ ದರ್ಜೆಯ ಆಧ್ಯಾತ್ಮಿಕ ನಗರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಎನ್‌ಡಿಎ ಭರವಸೆ ನೀಡಿದೆ. ವಿಷ್ಣುಪಾದ ಮತ್ತು ಮಹಾಬೋಧಿ ಕಾರಿಡಾರ್‌ಗಳ ನಿರ್ಮಾಣ ಮತ್ತು ರಾಮಾಯಣ, ಜೈನ, ಬೌದ್ಧ ಮತ್ತು ಗಂಗಾ ಸರ್ಕ್ಯೂಟ್‌ಗಳು ಸಹ ಎನ್‌ಡಿಎಯ ಚುನಾವಣಾ ಪ್ರತಿಜ್ಞೆಗಳಲ್ಲಿ ಸೇರಿವೆ.

Megha
the authorMegha

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...