ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗುವಂತೆ 2023ರ ಮಾರ್ಚ್‌ನಲ್ಲಿ ಶೇ.15ರಷ್ಟು ವೇತನ ಹೆಚ್ಚಳವಾಗಿದೆ. ಹೀಗಾಗಿ 38 ತಿಂಗಳ ಈ ಹೆಚ್ಚಳದ ಬಾಕಿ ಕೊಡುಬೇಕು ಎಂಬುವುದು ಯಾವಾಗಲು ನನ್ನ ತಲೆಯಲ್ಲಿ ಕೊರೆಯುತ್ತಲೇ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
38 ತಿಂಗಳ ವೆತನ ಹೆಚ್ಚಳದ ಹಿಂಬಾಕಿ ಕೊಡುವ ಸಂಬಂಧ ಅನೇಕ ಬಾರಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಪದೇಪದೇ ಅವರ ಗಮನಕ್ಕೆ ತಂದಿದ್ದೇನೆ ಇದೊಂದು ಸೆಟಲ್‌ಮೆಂಟ್ ಆಗಿಬಿಟ್ಟರೆ ನನಗೂ ಸಮಾಧಾನ. ಏಕೆಂದರೆ ಬಹಳ ಮುಖ್ಯವಾಗಿ ನನ್ನ ತಲೆಯಲ್ಲಿ ಯಾವಾಗಲು ಕೊರೆಯುತ್ತಿರುತ್ತೆ. ಅದೊಂದು ಸೆಟಲ್‌ಮೆಂಟ್ ಬೇಗ ಆಗಬೇಕು ಎಂದು ಹೇಳಿದರು.
ಇನ್ನು ಉಳಿದಂತೆ 4 ವರ್ಷಕ್ಕೊಮ್ಮೆ ಆಗುತ್ತಿರುವ ಅಗ್ರಿಮೆಂಟ್ ಬೇಡ ಸರ್ಕಾರದಲ್ಲಿ ಏನು ಸರ್ಕಾರಿ ನೌಕರರಿಗೆ ಕೊಡುತ್ತಿದ್ದೀರೋ ಅದೇ ರೀತಿ ಸರಿ ಸಮಾನ ವೇತನ, ಸವಲತ್ತುಗಳು ಸಿಗಬೇಕು ಎಂದು ಏನು ಹೇಳಿದ್ದಾರಲ್ಲ ಅದರ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆ ಚರ್ಚಿಸಿಸುತ್ತೇನೆ. ನಾನೆ ಮಾಡುತ್ತೇನೆ ಎಂದು ಹೇಳಿದರೆ ತಪ್ಪಾಗುತ್ತೆ. ಹೀಗಾಗಿ ಸಿಎಂ ಜತೆ ಚರ್ಚಿಸಿ ನಿಮ್ಮ ಬೇಡಿಕೆ ಈಡೇರಿಕೆಗೆ ಹೆಚ್ಚು ಗಮನ ಕೊಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ನೌಕರರ ಸಂಘಟನೆಗಳ ಚುನಾವಣೆ ಆಗಲೇಬೇಕು ಎಂದು ನೌಕರರು ಹಠ ಹಿಡಿದರು. ಅದಕ್ಕೆ ನಾನು 2013-17ರವೆಗೂ ಸಾರಿಗೆ ಸಚಿವರಾಗಿದ್ದಾಗಲೂ ಈ ಬೇಡಿಕೆ ಇದೆ. ಎಲ್ಲದಕ್ಕೂ ಸಮಯ ಬರುತ್ತದೆ ಸಮಯ ಬಂದಾಗ ಎಲ್ಲ ತನಗೆತಾನೇ ಆಗುತ್ತೆ ಎಂದು ಹೇಳಿದರು.
ಇನ್ನು ಬಹಳ ಮುಖ್ಯವಾಗಿ ರಾಜ್ಯದ 4 ಸಾರಿಗೆ ನಿಗಮಗಳ ಸಿಬಂದಿಗೆ ಸರ್ಕಾರಿ ನೌಕರರಂತೆಯೇ ಸಲವತ್ತು ಪರಿಷ್ಕೃತ ಸಮಾನ ವೇತನ ನೀಡಲು ಆಯೋಗ ರಚನೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ‘ಶಕ್ತಿ’ಯೋಜನೆ ಜಾರಿ ಬಳಿಕ ನಿಗಮಗಳ ಬಸ್‌ಗಳಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಮಹಿಳೆಯರು ಪ್ರಯಾಣಿಸಿದ್ದು ಸಶಕ್ತಿಕರಣಕ್ಕೆ ನಾಂದಿಯಾಗಿದೆ. 2020ರ ಬಿಜೆಪಿ ಆಡಳಿತದಲ್ಲಿ 3,800 ಬಸ್‌ಗಳು ಸ್ಥಗಿತಗೊಂಡಿದ್ದವು. ಬಿಎಂಟಿಸಿ ಹೊರತುಪಡಿಸಿ ನಾಲ್ಕು ವರ್ಷ ಯಾವುದೇ ಹೊಸ ಬಸ್ ಖರೀದಿಸಿರಲಿಲ್ಲ. 14 ಸಾವಿರ ಮಂದಿ ನಿವೃತ್ತಿ ಯಾದರೂ ನೇಮಕಾತಿ ಪ್ರಕ್ರಿಯೆಯಾಗಿರಲಿಲ್ಲ.
ಆದರೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ 6,200 ಬಸ್‌ಗಳ ಪೈಕಿ 3 ಸಾವಿರ ಹೊಸ ಬಸ್ ಖರೀದಿಸಿ ಸಂಚಾರ ಆರಂಭಿಸಿವೆ. ವಾಯವ್ಯ, ಕಲ್ಯಾಣ, ಬಿಎಂಟಿಸಿ ಒಳಗೊಂಡಂತೆ ನಿಗಮಗಳಲ್ಲಿ 7,500 ಮಂದಿ ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಉದ್ಯೋಗ ಸೃಷ್ಟಿ, ನೇಮಕಾತಿ ಹೊಸ ಉದ್ದಿಮೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.
ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಸಿಗಬೇಕು. ವೇತನ ಪರಿಷ್ಕರಣೆಗೆ ಆಯೋಗ ರಚಿಸಬೇಕು. ಸಿಬಂದಿಗಳ ಒಪ್ಪಂದ ಆಧಾರಿತ ನೇಮಕಾತಿ ಪದ್ಧತಿ ರದ್ದುಪಡಿಸುವುದು. ಉಚಿತ ಆರೋಗ್ಯ ಸೇವೆ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಕೇಂದ್ರ ಸರ್ಕಾರದ ಒಂದು ಪಾಲಿಸಿಯಾಗಿದ್ದು ಸಾರಿಗೆ ನಿಗಮಗಳನ್ನು ಖಾಸಗೀಕರಣಗೊಳಿಸುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.