Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ನೌಕರರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಏಕಕಾಲಕ್ಕೆ ಸಾರ್ವಜನಿಕ ಸೇವೆ ಬಂದ್‌ : ಷಡಕ್ಷರಿ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಸರ್ಕಾರಿ ನೌಕರರ ಸಂಘಟನೆ ರಾಜ್ಯದಲ್ಲಿ ಬಲಗೊಳ್ಳುತ್ತಿದ್ದು, ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಉದ್ಯಾನವನದಲ್ಲಿ ಧರಣಿ ಕೂರಲ್ಲ, ಪ್ರತಿಭಟನಾ ಜಾಥಾ ನಡೆಸಲ್ಲ ಸರ್ಕಾರ ನೌಕರರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಏಕಕಾಲಕ್ಕೆ ಸಾರ್ವಜನಿಕ ಸೇವೆ ಬಂದ್‌ ಮಾಡಲಾಗುವುದು ಎಂದು ರಾಜ್ಯಧ್ಯಕ್ಷ ಎಸ್‌. ಷಡಕ್ಷರಿ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೌಕರರ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನೌಕರರ ಸಂಘ ಹೋರಾಟಕ್ಕೂ ಸಿದ್ಧ. ಸರ್ಕಾರದೊಡನೆ ಮಾತುಕತೆಗೂ ಬದ್ಧ. ಮುಂಬರುವ ಫೆಬ್ರವರಿ ಅಥವಾ ಮಾರ್ಚ್‌ನೊಳಗೆ ಸರ್ಕಾರ ವೇತನ ಆಯೋಗ ಜಾರಿಗೊಳಿಸಲಿದ್ದು, ನಂತರ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸರ್ಕಾರಿ ನೌಕರರು ಆರ್ಥಿಕ ಸಂಕಷ್ಟ ಅಥವಾ ಅನಾರೋಗ್ಯಕ್ಕೆ ಒಳಗಾಗಿ ಬೇರೊಬ್ಬರ ಮುಂದೆ ಮಂಡಿಯೂರಬಾರದು ಎಂಬ ಉದ್ದೇಶದಿಂದ 25 ವರ್ಷಗಳಲ್ಲಿ ಆಗದಿದ್ದ 25 ಆದೇಶಗಳನ್ನು ಸರ್ಕಾರದಿಂದ ಹೊರಡಿಸಿದ್ದೇವೆ. 1256 ಕಾಯಿಲೆಗಳಿಗೆ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು 1500 ಕೋಟಿ ರೂ. ವೆಚ್ಚದ ವಿನೂತನ ಯೋಜನೆಗೆ ಸದ್ಯದಲ್ಲೇ ಸರ್ಕಾರ ಚಾಲನೆ ನೀಡಲಿದೆ. ನೋಂದಾಯಿತ ಕಾರ್ಡ್ ಪಡೆದ ನೌಕರರು 50 ಲಕ್ಷದಿಂದ ಕೋಟಿ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬ ಹುದು. ನೌಕರರ ಹಿತ ಕಾಪಾಡಲು ಬದ್ಧನಾಗಿದ್ದೇನೆ. ಎರಡೂವರೆ ವರ್ಷಗಳ ಅಧಿಕಾರವಧಿಯಲ್ಲಿ ನೌಕರರ ಹಿತ ಕಾಪಾಡಿದ್ದೇನೆ ಎಂದರು.

ಪಟ್ಟಣದಲ್ಲಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ನೌಕರರ ಭವನಕ್ಕೆ ಸ್ಥಳೀಯ ಶಾಸಕರಿಬ್ಬರಿಂದ ತಲಾ 20 ಲಕ್ಷ ರೂ. ಅನುದಾನ ಪಡೆಯೋಣ. ಇನ್ನುಳಿದ 60 ಲಕ್ಷ ರೂ.ಗಳನ್ನು ವಿವಿಧ ಮೂಲ 3 ಗಳಿಂದ ಕಲ್ಪಿಸುತ್ತೇನೆ ಎಂದರು.

ಕಾರ್ಯಾಂಗ ಹೆಚ್ಚು ಕ್ರಿಯಾಶೀಲವಾದಷ್ಟು ಜನಪ್ರತಿನಿಧಿಗಳ ಹೊರೆ ತಗ್ಗಲಿದೆ: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದ್ದು, ಜನರ ಸಂಪರ್ಕಕ್ಕೆ ಅಧಿಕಾರಿಗಳು ನೇರವಾಗಿ ಸಿಗುವುದರಿಂದ ಕಾರ್ಯಾಂಗ ಹೆಚ್ಚು ಕ್ರಿಯಾಶೀಲವಾದಷ್ಟು ಶಾಸಕಾಂಗದ ಜನಪ್ರತಿನಿಧಿಗಳ ಮೇಲಿನ ಹೊರೆ ತಗ್ಗಿಸಬಹುದು ಎಂದು ಶಾಸಕ ಎಂ.ಅಶ್ವಿನ್‌ ಕುಮಾರ್ ಹೇಳಿದರು.

ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು 5 ವರ್ಷಗಳಿಗೊಮ್ಮೆ ನಾವು ಜನರ ಬಳಿ ಹೋಗಬೇಕು. ಶಿಕ್ಷಣ ಜ್ಞಾನದ ಮೇಲೆ ವಿವಿಧ ಹುದ್ದೆಗಳಿಗೆ ನಿಯೋಜನೆಗೊಳ್ಳುವ ಸರ್ಕಾರಿ ನೌಕರರು ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಬಹುದು, ಸರ್ಕಾರದ ಯೋಜನೆಗಳ ಅನುಷ್ಠಾನ ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಜವಾಬ್ದಾರಿಯಾಗಿದೆ. ಆಡಳಿತ ವ್ಯವಸ್ಥೆ ಹಿನ್ನಲೆ ಯಲ್ಲಿ ಕಾರ್ಯಾಂಗ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರೇವಣ್ಣ, ನೇತ್ರ ತಜ್ಞೆ ಡಾ.ಭಾರತಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎನ್.ಪಂಚಲಿಂಗಪ್ಪ, ಹಿರಿಯ ನ್ಯಾಯಾಧೀಶೆ ಎಂ.ಎಸ್‌.ಅಂಬಿಕಾ, ಕೃಷಿ ಅಧಿಕಾರಿ ಎನ್.ವಿಜಯಲಕ್ಷ್ಮಿ, ಸಾಕ್ಷರತಾ ಇಲಾಖೆ ಪ್ರಥಮ ದರ್ಜೆ ಸಹಾಯಕ ಚೆಲುವರಾಜು, ಗ್ರಾಮ ಲೆಕ್ಕಿಗರಾದ ಅನಿತಾ, ತಾಪಂ ಬೆರಳಚ್ಚುಗಾರರಾದ ಸುಗುಣ, ಪಶು ಸಂಗೋಪನೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ, ಹಿಂದುಳಿದ ವರ್ಗಗಳ ಇಲಾಖೆಯ ಎಂ.ಈಶ್ವ‌ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಯಿತು.

ಗಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ ಆಲಗೂಡು ಗ್ರಾಮದ ಎಂ.ಶಿವ ಕುಮಾರ್, ಸೋಸಲೆ ಗ್ರಾಮದ ಪ್ರಶಾಂತ್‌ ಹಾಗೂ ವಿಶ್ವ ಕೌಸಲ್ಯ ವಿಜೇತ ಬಿ.ಸಿ.ಹಳ್ಳಿ ಗ್ರಾಮದ ಎಸ್‌.ಎಂ ಕಾರ್ತಿಕ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ಕಳೆದ 3 ಶೈಕ್ಷಣಿಕ ವರ್ಷ ಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಸಮಾರಂಭಕ್ಕೂ ಮುನ್ನಾ ಸರ್ಕಾರಿ ನೌಕರರ ಸಂಘದ ಬಳಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಅಲ್ಲದೇ ಆಧುನಿಕರಣಗೊಂಡಿದ್ದ ಕಚೇರಿ ಉದ್ಘಾಟಿಸ ಲಾಯಿತು. ನಂತರ ರಾಜ್ಯಾಧ್ಯಕ್ಷ ಎಸ್‌.ಷಡ ಕ್ಷರಿ ಅವರನ್ನು ತೆರೆದ ಬೆಳ್ಳಿ ವಾಹನದಲ್ಲಿ ವೇದಿಕೆ ಬಳಿಗೆ ಮೆರವಣಿಗೆಯಲ್ಲಿ ಕರೆತರ ಲಾಯಿತು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಎಸ್‌.ಮದನ್ ರಾಜು, ಉಪಾಧ್ಯಕ್ಷೆ ನಾಗರತ್ನ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎ. ಶಿವಶಂಕರಮೂರ್ತಿ, ಕಾರ್ಯದರ್ಶಿ ಸುಬ್ರಹ್ಮಣ, ತಾಪಂ ಆಡಳಿತಾಧಿಕಾರಿ ಬಿ.ಎಂ. ಸವಿತಾ, ಇಒ ಸಿ.ಕೃಷ್ಣ, ತಹಸೀಲ್ದಾರ್ ಸಿ.ಜಿ.ಗೀತಾ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಆರ್.ಮಣಿಕಂಠರಾಜ್ ಗೌಡ, ಉಪನ್ಯಾಸಕರಾದ ಕುಮಾರಸ್ವಾಮಿ, ಸುರೇಶ್, ಸಂಘದ ಗೌರವಾಧ್ಯಕ್ಷ ನಾಗರಾಜು.

ರಾಜ್ಯ ಪರಿಷತ್‌ ಸದಸ್ಯ ಆರ್.ಉಮೇಶ್ ಕುಮಾರ್, ಖಜಾಂಚಿ ಎಚ್‌.ಎನ್‌.ವೆಂಕಟಶೆಟ್ಟಿ ಉಪಾಧ್ಯಕ್ಷ ಎ.ಗಜೇಂದ್ರ ಎಸ್‌.ಎಂ. ಮಂಜುನಾಥ್, ಎಸ್.ರಾಜೇಶ್, ಜೇಮ್ಸ್ ರಾಜರಸ್, ಜಂಟಿ ಕಾರ್ಯದರ್ಶಿಗಳಾದ ಎಚ್‌ .ನಾಗರಾಜು, ಎನ್.ರಂಗಸ್ವಾಮಿ, ಕೆಂಡಗಣ್ಣಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಎಸ್‌. ನಾಗೇಶ್, ಶೋಭಾ, ಬಸವಣ್ಣ, ಲೆಕ್ಕ ಪರಿಶೋಧಕ ಚೆಲುವರಾಜು.

ಸಾಂಖ್ಯಿಕ ಕಾರ್ಯದರ್ಶಿ ಎಸ್.ಟಿ.ಪ್ರಕಾಶ್, ನಿರ್ದೇಶಕರಾದ ಪ್ರಭುರಾಜ್, ನಾಗ, ಎಚ್.ಡಿ.ಮಾದಪ್ಪ, ಪುಟ್ಟಸ್ವಾಮಿ, ಬಿ.ಪುಟ್ಟರಾಜು, ಪರಶಿವಮೂರ್ತಿ, ಪಿ.ಎಸ್.ಸಂದೇಶ, ಟಿ.ಪಿ.ನಾಗೇಂದ್ರ, ಶಿವಮಲ್ಲಪ್ಪ, ಎಂ. ಬಸವನಾಯಕ, ನಾಗು, ಶೋಭಾ, ಎನ್.ರೇವಣ್ಣ, ಆರ್.ಶ್ರೀಕಂಠಯ್ಯ ಪ್ರಭಾಕರ್, ಎನ್ .ನರಸಮ್ಮ ಹಾಗೂ ತಾಲೂಕಿನ ಸರ್ಕಾರಿ ನೌಕರರಿದ್ದರು

Leave a Reply

error: Content is protected !!
LATEST
KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ