
ಬೆಂಗಳೂರು ಗ್ರಾಮಾಂತರ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯ ಜೀವಹಾನಿ ಆಗಬಾರದು ಹಾಗೂ ಜಾನುವಾರುಗಳನ್ನು ರಕ್ಷಿಸುವ ಸಲುವಾಗಿ ಸಹಾಯವಾಣಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಬಸವರಾಜು ತಿಳಿಸಿದ್ದಾರೆ.
ಇನ್ನು ಈ ಬಾರಿ ಮುಂಗಾರು ಮಳೆಯು ಸಮಯಕ್ಕೆ ಮುಂಚಿತವಾಗಿ ಆರಂಭವಾಗಲಿದ್ದು ಮಳೆ, ಗಾಳಿ, ಸಿಡಿಲು, ಗುಡುಗು ಹಾಗೂ ಮಿಂಚಿನಿಂದ ಜನಸಾಮಾನ್ಯರು ತಪ್ಪಿಸಿಕೊಳ್ಳಲು ಕೆ.ಎಸ್.ಎನ್.ಡಿ.ಎಂ.ಸಿ (KSNDMC)ಯಲ್ಲಿ ಚಾಲ್ತಿಯಲ್ಲಿರುವ ವರುಣ ಮಿತ್ರ ಸಹಾಯವಾಣಿ ಸಂಖ್ಯೆ 9243345433 ಗೆ ಸಂಪರ್ಕಿಸುವ ಮೂಲಕ ಹವಾಮಾನ ಮಾಹಿತಿಯನ್ನು ಪಡೆಯಬಹುದು.
ಅದರಂತೆ ಗುಡುಗು ಸಿಡಿಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೆ.ಎಸ್.ಎನ್.ಡಿ.ಎಂ.ಸಿ ಅವರು ಅಭಿವೃದ್ಧಿಪಡಿಸಿರುವ ಸಿಡಿಲು ಅಪ್ಲಿಕೇಶನ್ (Sidilu app), NDMA ಅವರ ದಾಮಿನಿ ಅಪ್ಲಿಕೇಶನ್ (Damini app) ಹಾಗೂ NDMA ಅವರು ನಿರ್ಮಿಸಿರುವ ಸಚೆಟ್ ಅಪ್ಲಿಕೇಶನ್ (Sachet app) ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದ್ದಾರೆ.
ಈ ಅಪ್ಲಿಕೇಶನ್‌ಗಳಲ್ಲಿ ಯಾವ ಪ್ರದೇಶದಲ್ಲಿ ಮಳೆ, ಗುಡುಗು ಮತ್ತು ಸಿಡಿಲು ಬರುವ ಸಾಧ್ಯತೆಯಿದೆ ಎಂಬುದನ್ನು 30 ನಿಮಿಷಗಳ ಮೊದಲೇ ತಿಳಿಸುತ್ತದೆ. ಆದ್ದರಿಂದ ಯಾವುದೇ ರೀತಿಯ ಅಪಾಯಗಳಿಂದ ಜನರು ಪಾರಾಗಬಹುದು, ಹಾಗೇ ಅದಕ್ಕೆ ಬೇಕಾದ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Related









