NEWSನಮ್ಮಜಿಲ್ಲೆಬೆಂಗಳೂರು

ಪೌರಕಾರ್ಮಿಕರು ಕಾಯಂ ಪ್ರಕ್ರಿಯೆಗೆ ಲಂಚ ಕೊಡಬೇಡಿ: ನವೀನ್ ಕುಮಾರ್ ರಾಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪೌರಕಾರ್ಮಿಕರ ನೇಮಕಾತಿಗೆ ಅಗತ್ಯವಿರುವ ಎಲ್ಲ ದಾಖಲಾತಿಗಳಿಗೆ ತಗಲುವ ವೆಚ್ಚ ಮತ್ತು ಪಾರದರ್ಶಕ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಯಾವುದೇ ಆಮಿಷಗಳಿಗೆ ಒಳಗಾಗದಿರಲು ವಿಶೇಷ ಆಯುಕ್ತರು (ಆಡಳಿತ) ನವೀನ್ ಕುಮಾರ್ ರಾಜು ಮನವಿ ಪೌರ ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಂ ನೇಮಕಾತಿಗೆ ಒಳಪಟ್ಟಿರುವ ಪೌರಕಾರ್ಮಿಕರ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಬೇಕಿರುವ ಇತರೆ ಪ್ರಮಾಣ ಪತ್ರಗಳಿಗೆ ತಗಲುವ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು ಎಂದು ತಿಳಿಸಿದ್ದಾರೆ.

ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ನೇರಪಾವತಿಯಡಿ (ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳ ಪೈಕಿ, ರೋಸ್ಟರ್ ಅಥವಾ ಮೀಸಲಾತಿ ನಿಯಮಾವಳಿಗಳನ್ವಯ 12,692 ಪೌರಕಾರ್ಮಿಕರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು 16ನೇ ನವೆಂಬರ್ 2024 ರಂದು ಪ್ರಚುರಪಡಿಸಲಾಗಿದೆ.

ಈಗಾಗಲೇ ಸುಮಾರು 4,000 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಗಿದ್ದು, ಉಳಿದ ಪೌರಕಾರ್ಮಿಕರಿಗೆ ಅತಿ ಶೀಘ್ರದಲ್ಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಇನ್ನು ನೇಮಕಗೊಂಡ ಪೌರಕಾರ್ಮಿಕ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆಯಬೇಕಿದ್ದು, ಈ ಸಲುವಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಅರ್ಜಿಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವತಿಯಿಂದಲೇ ವೆಚ್ಚ ಭರಿಸಲಾಗುವುದು: ಸೇವಾ ಸಿಂಧು ಅರ್ಜಿದಾರರ ಪ್ರಮಾಣ ಪತ್ರ ಪೋರ್ಟಲ್ ನಲ್ಲಿ ಅರ್ಜಿದಾರರ ಲಾಗಿನ್ ನಿಂದ ಪ್ರಮಾಣ ಪತ್ರ-1 ಹಾಗೂ ಪ್ರಮಾಣ ಪತ್ರ-2 ಆಪ್ಲೋಡ್ ಮಾಡಬೇಕಾಗಿರುತ್ತದೆ. ಈ ಸಂಬಂಧ ಎರಡೂ ಪ್ರಮಾಣ ಪತ್ರಗಳ ಛಾಪಾ ಕಾಗದ ಹಾಗೂ ನೋಟರಿ ಸೇರಿದಂತೆ ಇನ್ನಿತರೆ ದಾಖಲಾತಿಗಳಿಗೆ ತಗಲುವ ವೆಚ್ಚವನ್ನು ನೇಮಕಾತಿ ಆದೇಶ ಪತ್ರಗಳು ನೀಡಿದವರನ್ನು ಹೊರತುಪಡಿಸಿ ಇನ್ನುಳಿದ ಪೌರಕಾರ್ಮಿಕರಿಗೆ ಪಾಲಿಕೆಯಿಂದಲೇ ಭರಿಸಲಾಗುವುದು.

ಪ್ರಮಾಣ ಪತ್ರಗಳಿಗೆ ತಗಲುವ ಮೊತ್ತವನ್ನು ಪ್ರಸಕ್ತ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ ಸಂಖ್ಯೆ: 02-210999 ಇತರೆ ಸಾಮಾನ್ಯ ಮತ್ತು ವಿವಿಧ ವೆಚ್ಚಗಳಡಿ ಭರಿಸುವಂತೆ ಎಲ್ಲ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಯಾವುದೇ ಆಮಿಷಗಳಿಗೆ ಒಳಗಾಗದಿರಿ: ಪೌರಕಾರ್ಮಿಕ ನೇಮಕಾತಿ ವಿಚಾರವಾಗಿ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ, ಅಪ್ಲೋಡ್ ಮಾಡಲು ಪಾಲಿಕೆಯ ಅಧಿಕಾರಿಗಳು ಸಹಕರಿಸಲಿದ್ದು, ಈ ಸಂಬಂಧ ನೇಮಕಗೊಂಡ ಪೌರಕಾರ್ಮಿಕರು ಯಾವುದೇ ಮಧ್ಯವರ್ತಿಗಳನ್ನು ಭೇಟಿ ಮಾಡಕೂಡದು. ಜತೆಗೆ ಯಾವುದೇ ಆಮಿಷಗಳಿಗೆ ಒಳಗಾಗಬಾರದೆಂದು ಪೌರಕಾರ್ಮಿಕ ಹುದ್ದೆಗೆ ಆಯ್ಕೆಯಾಗಿರುವ, ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿರುವವರಲ್ಲಿ ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ಪೌರಕಾರ್ಮಿಕರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ನವೀನ್ ಕುಮಾರ್ ರಾಜು ಕೋರಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ