
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯು ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ ಕಾಳಜಿಯೇ ಇದೆಯೇ ಎಂಬ ಅನುಮಾನ ಮೂಡುತ್ತಿದೆ.
ಒಂದು ವೇಳೆ ಕಾಳಜಿ ಎಂಬುವುದು ಇದ್ದಿದ್ದರೆ ಇವರು ಸಾರಿಗೆ ಸಿಬ್ಬಂದಿಗಳು/ನೌಕರರನ್ನು ಕಾರ್ಮಿಕರು ಎಂದು ಪದೇಪದೆ ಕರೆಯುತ್ತಿರಲಿಲ್ಲ. ಏನೋ ಹೇಳುತ್ತಾರಲ್ಲ 60 ವರ್ಷವಾದ ಮೇಲೆ ಅರಳುಮರಳು ಎಂಬಂತೆ ಜಂಟಿ ಕ್ರಿಯಾ ಸಮಿತಿಯಲ್ಲಿರುವ ಬಹುತೇಕರು 60ರ ಪ್ರಾಯ ದಾಟಿದವರಾಗಿದ್ದಾರೆ. ಹೀಗಾಗಿಯೇ ಸಾರಿಗೆ ನೌಕರರನ್ನು ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಕಾರ್ಮಿಕರಾಗಿ ಮಾಡಿಕೊಂಡಂತೆಸಂಬೋಧಿಸುತ್ತಿದ್ದಾರೆ.
ನೋಡಿ ಇಡೀ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಯಿಂದ ಪ್ರತಿಯೊಬ್ಬರನ್ನು ನೌಕರರು ಎಂದು ಕರೆಯುತ್ತಾರೆ. ಆದರೆ ಜಂಟಿ ಕ್ರಿಯಾ ಸಮಿತಿಯವರು ಮಾತ್ರ ಕಾರ್ಮಿಕರು ಎಂದು ಕರೆಯುತ್ತಿದ್ದಾರೆ. ಅಂದರೆ ಇವರಿಗೆ ನಿಜವಾಗಲು ನೌಕರರ ಬಗ್ಗೆ ಗೌರ ಎಂಬುವುದೇ ಇಲ್ಲ. ನಾಚಿಕೆಯಾಗಬೇಕು ಇವರಿಗೆ. ಹೀಗೆ ಕರೆದು ಕರೆದೆ ನೌಕರರನ್ನು ಕಳೆದ 3-4 ದಶಕಗಳಿಂದಲೂ ಅಧಿಕಾರಿಗಳು- ನೌಕರರ ನಡುವೆ ಹೊಂದಾಣಿಕೆ ಇಲ್ಲದಂತ ವಾತಾವರಣ ನಿರ್ಮಿಸಿ ಒಡೆದಾಳುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ನೇರವಾಗಿ ಅನಂತ ಸುಬ್ಬರಾವ್ ಅವರಿಗೆ ಕೇಳ ಬಯಸುತ್ತೇವೆ. ಸಾರಿಗೆ ನೌಕರರು ಕಾರ್ಮಿಕ ನೌಕರರ ಎಂಬುದನ್ನು ತಾವು ಸ್ಪಷ್ಟಪಡಿಸಿ. ಇಲ್ಲ ಸಾರಿಗೆ ನೌಕರರು ಕಾರ್ಮಿಕರು ಎಂದು ಕರೆಯುವುದೇ ಸರಿ ಎಂದಾದರೆ ನೀವು ಸಾರಿಗೆ ಕಾರ್ಮಿಕರು (ದಿನಗೂಲಿ) ಎಂದು ಎಲ್ಲ ನಿಮ್ಮ ಮನವಿ ಪತ್ರಗಳಲ್ಲಿ ಹಾಕಿ ಸರ್ಕಾರಕ್ಕೆ ಮತ್ತು ಸಾರಿಗೆ ಆಡಳಿತ ಮಂಡಳಿಗೆ ಕೊಡಿ.
ಏನ್ರಿ ಇದು ಕಳೆದ 40-50 ವರ್ಷದಿಂದಲೂ ನಾವು ಸಾರಿಗೆಯ ನೌಕರರ ಪರವಾಗಿ ಇದ್ದೇವೆ ಎಂದು ಹೇಳುವ ನೀವು ಪದೇಪದೆ ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಮಾಡುವವರಂತೆ ಅವರು ಕಾಣುವ ಮೂಲಕ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ನಮ್ಮನ್ನೇ ಆಶ್ರಯಿಸಬೇಕು ಎಂಬುದನ್ನು ಪಾಲಿಸಿಕೊಂಡು ಬರುತ್ತಿದ್ದೀರಲ್ಲ.
ಏಕೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು/ನೌಕರರ ಕೈಯಲ್ಲಿ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅವರಿಗೆ ನಾವೇ ಬೇಕು ಎಂಬ ಭ್ರಮೆಯಲ್ಲಿದ್ದಾರ? ಒಂದು ವೇಳೆ ಆ ಭ್ರಮೆಯಲ್ಲಿದ್ದರೆ ಇಂದೆ ಬಿಟ್ಟುಬಿಡಿ ನಾವೇಲ್ಲ ಸಾರಿಗೆ ನೌಕರರು ಚಾಲನಾ ಸಿಬ್ಬಂದಿಗಳು ಎಂದರೆ ಸಿ ದರ್ಜೆ ನೌಕರರು ನಾವು ಡಿ. ಗ್ರೂಪ್ ನೌಕರರಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಅನಂತ ಸುಬ್ಬರಾವ್ ಸೇರಿದಂತೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಹೇಳಿಕೆಗೆ ನಮಗೆ ತಾವು ಕೊಟ್ಟಿರುವ ಹಿಂಬರಹದ ಉತ್ತರ ಪತ್ರದಲ್ಲೂ ತಾವು ನಮ್ಮನ್ನು ಕಾರ್ಮಿಕರು ಎಂದೇ ಹಾಕಿದ್ದೀರಿ. ಏಕೆ ನಿಮಗೆ ವಯಸ್ಸಾಗಿದೆ ಎಂಬುದನ್ನಿ ಈ ಮೂಲಕ ನಮಗೆ ನೆನಪಿಸಲು ತಾವು ಈ ರೀತಿ ಕಾರ್ಮಿಕ ಪದ ಬಳಸಿದ್ದೀರಾ ಎಂದು ಒಕ್ಕೂಟದ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಒಟ್ಟಾರೆ ಸಾರಿಗೆ ನೌಕರರನ್ನು ಜಂಟಿಯವರದ ತಾವು ಕಾರ್ಮಿಕರು ಎಂದು ಕರೆಯದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ? ಇನ್ನಾದರೂ ನಾವು ಸಿ ಗ್ರೂಪ್ ನೌಕರರಿದ್ದೇವೆ ಎಂಬುದನ್ನಾದರೂ ತಿಳಿದು ನಮಗೂ ಗೌರವ ಕೊಡುವುದನ್ನು ಮೊದಲು ಕಲಿಯಿರಿ ಅಮೇಲೆ ನಮ್ಮ ನೌಕರರ ಪರವಾಗಿ ಮುಷ್ಕರ ಮಾಡುವಿರಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.