NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನೌಕರರ ಪರ ಕಾನೂನು ಹೋರಾಟಕ್ಕೆ ನಿಂತ ಬೆಳಗಾವಿ ಸಾರಿಗೆ ಡಿಸಿ-ಇತರ ವಿಭಾಗಗಳಿಗೆ ಮಾದರಿಯಾದ ಡಿಸಿ ನಡೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ನೌಕರರಿಗೆ ಅನುಕೂಲಕರವಾದ ರೀತಿಯಲ್ಲಿ ಸುತ್ತೋಲೆವೊಂದನ್ನು ಹೊರಡಿಸಿದ್ದು ಇದರಂತೆ ನಮ್ಮ ವಿಭಾಗದಲ್ಲೂ ಹೊರಡಿಸಿ ಎಂದು ನೌಕರರು ಧಾರವಾಡ ಡಿಸಿಯಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ ಸಾರಿಗೆ ಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಅಂತ ಮಹತ್ವ ಏನಿದೆ ಎಂದು ನೌಕರರಿಗೆ ಕುತೂಹಲವಿರಬಹುದು. ಹೌದು! ಈ ಸಾರಿಗೆ ಡಿಸಿ ನೌಕರರಿಗೆ ಆಗುತ್ತಿರುವ ಕಾನೂನು ತೊಡಕುಗಳ ನಿವಾರಣೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಅದೇರೀತಿ ನಮ್ಮ ಧಾರವಾಡ ಗ್ರಾಮೀಣ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಲ್ಲಿ ನೌಕರರ ಪರವಾಗಿ ಒಂದು ಮನವಿ ಮಾಡುತ್ತಿದ್ದೇವೆ. ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯಂತೆ ನಮ್ಮ ವಿಭಾಗದಲ್ಲಿ ಕೂಡ ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ನೀವು ಸುತ್ತೋಲೆ ಹೊರಡಿಸಿ ಎಂದು ಮನವಿ ಮಾಡಿದ್ದಾರೆ.

ಅದು ಡ್ಯೂಟಿ ಮೇಲೆ ಚಾಲನಾ ಸಿಬ್ಬಂದಿಯ ತಪ್ಪಿಲ್ಲದಿದ್ದರೂ ಆಗುವ ಸಣ್ಣ ಪುಟ್ಟ ಅಪಘಾತಗಳಿಗೆ ನೌಕರರನ್ನೇ ಹೊಣೆ ಮಾಡಲಾಗುತ್ತಿದೆ. ಇನ್ನು ನೌಕರರ ತಪ್ಪು ಇಲ್ಲದಿದ್ದರೂ ಕೂಡ ದೂರು ತೆಗೆದುಕೊಳ್ಳುವಾಗ ಪೊಲೀಸ್ ಠಾಣೆಯಲ್ಲಿ ನಿರಾಕರಿಸುವ ಸಂಭವ ಜಾಸ್ತಿ ಇದೆ.

ಅಲ್ಲದೆ ಕಾನೂನು ರೀತಿಯಲ್ಲಿ ಹೋರಾಡಲು ನಮ್ಮ ನೌಕರರಿಗೆ ಇದರಿಂದ ಭಾರಿ ತೊಡಕಾಗುತ್ತಿದೆ. ಹೀಗಾಗಿ ನೌಕರರಿಗೆ ಸಹಾಯವಾಗುವ ರೀತಿಯಲ್ಲಿ ಸಂಸ್ಥೆಯ ವತಿಯಿಂದಲೇ ವಕೀಲರನ್ನು ಗುರುತಿಸಿ ಆ ವಕೀಲರ ಹೆಸರುಗಳನ್ನು ಘಟಕಗಳ ನೋಟಿಸ್ ಬೋರ್ಡ್‌ಗಳಲ್ಲಿ ಹಾಕಿಸಿದ್ದಾರೆ ಬೆಳಗಾವಿಯ ಡಿಸಿ.

ಈ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತೆಗೆದುಕೊಂಡಿರುವ ನೌಕರರ ಪರ ನಿರ್ಧಾರದಂತೆ ಧಾರವಾಡ ಗ್ರಾಮೀಣ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ತಾವು ಕೂಡ ನಿಮ್ಮ ನೌಕರರ ಪರವಾಗಿ ಇಂಥ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ನೌಕರರೊಬ್ಬರು ಕಳಕಳಿಯ ಮನವಿ ಮಾಡಿದ್ದಾರೆ.

ಇನ್ನು ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ನೌಕರರಿಗೆ ಕಾನೂನು ಹೋರಾಟಕ್ಕೆ ಅನುಕೂಲವಾಗುವಂತೆ ತಮ್ಮ ವಿಭಾಗ ವ್ಯಾಪ್ತಿಗೆ ಬರುವ ಎಲ್ಲ ಡಿಪೋಗಳ ಘಟಕ ವ್ಯವಸ್ಥಾಪಕರಿಗೆ ಒಂದು ಸೂಚನೆ ಹೊರಡಿಸಿದ್ದು, ಘಟಕಗಳ ಸೂಚನಾ ಫಲಕದಲ್ಲಿ ಘಟಕ ವ್ಯಾಪ್ತಿಯಲ್ಲಿ ಬರುವ ವಕೀಲರ ಹೆಸರುಗಳು ಫೋನ್‌ ನಂಬರ್‌ ಸಹಿತ ಹಾಕಬೇಕು ಎಂದು ತಿಳಿಸಿದ್ದಾರೆ.

ಅಲ್ಲದೆ ಈ ವಕೀಲರಿಂದ ಕಾನೂನು ಸಲಹೆ ಪಡೆದು ನೌಕರರು ಮಾಡದ ಅಪಘಾತದ ವೇಳೆ ನೌಕರರ ವಿರುದ್ಧ ದಾಖಲಾಗುವ ಪ್ರಕರಣಗಳಿಗೆ ಪ್ರತಿದೂರು ದಾಖಲಿಸುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಈ ರೀತಿಯ ಸುತ್ತೋಲೆ ಹೊರಡಿಸಿರುವ ಡಿಸಿ ನಡೆಯನ್ನು ನೌಕರರು ಮುಕ್ತಕಂಠದಿಂದ ಹೊಗಳಿದ್ದಾರೆ. ಅಲ್ಲದೆ ಇವರಂತೆ ಎಲ್ಲ ವಿಭಾಗಗದ ಅಧಿಕಾರಿಗಳಿಗೂ ಇವರ ಸುತ್ತೋಲೆ ಮಾದರಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಜತೆಗೆ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಕೂಡ ಇದನ್ನು ಬೆಂಬಲಿಸಿ ಎಲ್ಲ ವಿಭಾಗಗಳಿಗೂ ಹಾಗೂ ಘಟಕಗಳಿಗೂ ಇದೇರೀತಿ ಸುತ್ತೋಲೆ ಹೊರಡಿಸುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ನೌಕರರ 18 ತಿಂಗಳ ಬಾಕಿ ಹಣ 6 ಕಂತುಗಳಲ್ಲಿ ನೀಡಲಾಗುವುದು: ವಿತ್ತ ಸಚಿವರ ಭರವಸೆ KSRTC ಕೋಲಾರ ವಿಭಾಗದ ಅಧಿಕಾರಿಗಳ ದರ್ಪ- ಚಾಲಕರ ಹೆದರಿಸಿ ವಿಶ್ರಾಂತಿ ರಹಿತ ಡಬಲ್‌ ಡ್ಯೂಟಿ, ಸಿಂಗಲ್‌ ಪೇಮೆಂಟ್‌, ಒಟಿ ... BMTC: ಕರ್ತವ್ಯದಲಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಾವು- ಪರಿಹಾರಕ್ಕೆ ಆಗ್ರಹಿಸಿ ಚಾಲಕರಿಂದ ಡಿಪೋ ಬಳಿ ಪ್ರತಿಭಟನೆ ಮಾತುಕತೆ ಯಶಸ್ವಿ: ಆರ್‌ಟಿಸಿ ಮುಷ್ಕರ ಅಂತ್ಯ-ಇಂದಿನಿಂದ ಬಸ್ ಸೇವೆ ಪುನಾರಂಭ ಏ.27ರಂದು ಪಿಎಫ್ ಕಚೇರಿ ಮುಂದೆ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ : ನಂಜುಂಡೇಗೌಡ BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ... NWKRTC: ಬ್ಯಾಡಗಿ ಬಸ್‌ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಧ್ಯೆ ಸಿಲುಕಿದ ಕಾಲೇಜು ವಿದ್ಯಾರ್ಥಿ- ಚಿಂತಾಜನಕ ಸ್ಥಿತಿ ಸಾರಿಗೆ ನೌಕರರ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ನರಸಂಪೇಟೆ ಡಿಪೋ ಚಾಲಕ ಶಂಕರ್ ಗೌಡ್ ಚಿಕಿತ್ಸೆ ಫಲಿಸದೆ ಮೃತ ಬೇಡಿಕೆ ಈಡೇರಿಸದ ಸರ್ಕಾರ: ಸಾರಿಗೆ ನೌಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ- ಸಾವು ಬದುಕಿನ ನಡುವೆ ಹೋರಾಟ KSRTC ನೌಕರರ ಏಪ್ರಿಲ್‌ ತಿಂಗಳ ವೇತನ ಏ.30ರಂದೆ ಪಾವತಿಸಲು ಎಂಡಿ ಆದೇಶ