NEWSಉದ್ಯೋಗನಮ್ಮರಾಜ್ಯ

ಮೂಲ ವೇತನ 20,000 ರೂ. ಇದ್ರೆ, ಗ್ರಾಚ್ಯುಟಿ ಹಣ ಎಷ್ಟು ಸಿಗುತ್ತೆ- ನೀವೆ ಮನೆಲೇ ಕೂತು ಸಿಂಪಲ್ಲಾಗಿ ಲೆಕ್ಕಮಾಡಿ ತಿಳಿದುಕೊಳ್ಳಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾವು ಯಾವುದಾದರೂ ಕಂಪನಿಯಲ್ಲಿ ಕೆಲಸ (Job) ಮಾಡೋದು ಬರೀ ತಿಂಗಳ ಸಂಬಳಕ್ಕೆ (Salary) ಮಾತ್ರ ಅಲ್ಲ? ಅದರ ಜತೆಗೆ ಸಿಗೋ ಗ್ರಾಚ್ಯುಟಿ (Gratuity) ಕೂಡ ನಮ್ಮ ಭವಿಷ್ಯಕ್ಕೆ ತುಂಬಾನೇ ಮುಖ್ಯ.

ಇನ್ನು ಕೆಲಸ ಬಿಟ್ಟಾಗ ಅಥವಾ ನಿವೃತ್ತಿ (Retirement) ಆದಾಗ ಕೈಗೆ ಬರೋ ಈ ದುಡ್ಡು ಎಷ್ಟೋ ಜನರಿಗೆ ಸಂಜೀವಿನಿಯಿದ್ದಂತೆ ಆಗಿರುತ್ತದೆ. ಇದೀಗ ಬಂದಿರೋ ಹೊಸ ಕಾರ್ಮಿಕ ಸಂಹಿತೆಗಳ (New Labor Codes) ಪ್ರಕಾರ, ನಿಮ್ಮ ಮೂಲ ವೇತನ (Basic Pay) 20,000 ರೂ. ಇದ್ರೆ, ನಿಮಗೆಷ್ಟು ಗ್ರಾಚ್ಯುಟಿ ಹಣ ಸಿಗುತ್ತೆ ಅನ್ನೋದನು ಈಗ ನೀವೇ ಸಿಂಪಲ್ಲಾಗಿ ಮನೆಯಲ್ಲೇ ಕೂತು ಲೆಕ್ಕ ಹಾಕಬಹುದು.

ಅದಕ್ಕೆ ಸರ್ಕಾರ ಫಿಕ್ಸ್ ಮಾಡಿರೋ ಸೂತ್ರ (Formula) ಏನು? ಉದ್ಯೋಗಿಗಳಿಗೆ (Employees) ಇದರಿಂದ ಏನೆಲ್ಲ ಲಾಭ ಇದೆ ಅನ್ನೋದನ್ನು ನಾವು ನಿಮಗೆ ಕ್ಲಿಯರ್ ಆಗಿ ತಿಳಿಸಿಕೊಡುತ್ತಿದ್ದೇವೆ ನೋಡಿ.

ಏನಿದು ಗ್ರಾಚ್ಯುಟಿ?: ಸರಳವಾಗಿ ಹೇಳಬೇಕೆಂದರೆ ಗ್ರಾಚ್ಯುಟಿ ಅನ್ನೋದು ಕಂಪನಿ ತನ್ನ ಉದ್ಯೋಗಿಗಳಿಗೆ ಹೇಳೋ ಒಂದು “ಥ್ಯಾಂಕ್ಸ್” ಪೇಮೆಂಟ್. ನೀವು ಒಂದು ಕಂಪನಿಯಲ್ಲಿ ಕನಿಷ್ಠ ಒಂದು ವರ್ಷ ನಿರಂತರವಾಗಿ ಕೆಲಸ ಮಾಡಿದ್ರೆ ಸಾಕು, ಈ ದುಡ್ಡು ಪಡೆಯೋಕೆ ನೀವು ಅರ್ಹರಾಗಿರ್ತೀರಾ. ಹಳೆ ನಿಯಮ ಏನೇ ಇದ್ರೂ, ಹೊಸ ರೂಲ್ಸ್ ಪ್ರಕಾರ ಕೇವಲ ಒಂದು ವರ್ಷ ಕಂಪ್ಲೀಟ್ ಮಾಡಿದ್ರೂ ಗ್ರಾಚ್ಯುಟಿ ಸಿಗುತ್ತೆ ಅನ್ನೋದು ಉದ್ಯೋಗಿಗಳಿಗೆ ಸಿಕ್ಕಿರೋ ಸಿಹಿ ಸುದ್ದಿ.

ಇನ್ನು ಲೆಕ್ಕ ಹಾಕೋದು ಹೇಗೆ?: ಇಲ್ಲಿದೆ ಸಿಂಪಲ್ ಫಾರ್ಮುಲಾ ಸರ್ಕಾರನೇ ಇದಕ್ಕೆ ಒಂದು ಫಾರ್ಮುಲಾ ಫಿಕ್ಸ್ ಮಾಡಿದೆ, ಅದು ತುಂಬಾ ಈಸಿ ಇದೆ. ಇದನ್ನು ಕಲಿಯೋಕೆ ನೀವು ಮ್ಯಾತ್ಸ್ ಎಕ್ಸ್‌ಪರ್ಟ್ ಆಗೋ ಅವಶ್ಯಕತೆ ಇಲ್ಲ, ಜಸ್ಟ್ 10 ಸೆಕೆಂಡ್ ಸಾಕು! ಸೂತ್ರ ಇಷ್ಟೇ: ಕೊನೆಯ ಮೂಲ ವೇತನ x (15/26) x ಕೆಲಸ ಮಾಡಿದ ಒಟ್ಟು ವರ್ಷಗಳು. ಇಲ್ಲಿ 15/26 ಯಾಕೆ ಅಂದ್ರೆ, ಒಂದು ತಿಂಗಳಲ್ಲಿ 26 ಕೆಲಸದ ದಿನ ಅಂತ ಲೆಕ್ಕ ಹಾಕಿ, ಪ್ರತಿ ವರ್ಷದ ಸೇವೆಗೆ 15 ದಿನದ ಸಂಬಳನ ಗ್ರಾಚ್ಯುಟಿ ಅಂತ ಕೊಡುತ್ತಾರೆ.

ಉದಾಹರಣೆಗೆ, ಒಬ್ಬರ ಬೇಸಿಕ್ ಸ್ಯಾಲರಿ 20,000 ರೂ.ಗಳು ಇದೆ ಅನ್ಕೊಳ್ಳಿ. ಅವರು ಕಂಪನಿಯಲ್ಲಿ 1 ವರ್ಷ ಕೆಲಸ ಮುಗಿಸಿದ್ದಾರೆ ಅಂದ್ರೆ ಲೆಕ್ಕ ಹೀಗಿರುತ್ತೆ: 20,000 x (15/26) x 1 = 11,538 ರೂಪಾಯಿ. ನೋಡಿದ್ರಾ? ಕೇವಲ ಒಂದು ವರ್ಷ ಕೆಲ್ಸ ಮಾಡಿದ್ರೂ 11,500 ರೂಪಾಯಿಗಿಂತ ಜಾಸ್ತಿ ದುಡ್ಡು ಸಿಗುತ್ತೆ. ನಿಮ್ಮ ಸಂಬಳ ಜಾಸ್ತಿ ಆದ್ರೆ ಅಥವಾ ನೀವು ಹೆಚ್ಚು ವರ್ಷ ಕೆಲಸ ಮಾಡಿದರೆ, ಈ ಮೊತ್ತ ಕೂಡ ಆಟೋಮ್ಯಾಟಿಕ್ ಆಗಿ ಜಾಸ್ತಿ ಆಗುತ್ತದೆ.

ತೆರಿಗೆ ಭಾರವಿಲ್ಲ!: ಇನ್ನೊಂದು ಖುಷಿ ವಿಚಾರ ಏನಪ್ಪ ಅಂದರೆ, ಈ ಗ್ರಾಚ್ಯುಟಿ ದುಡ್ಡಿಗೆ ಯಾವುದೇ ತೆರಿಗೆ ಇರೋದಿಲ್ಲ. ಇದು ಪೂರ್ತಿ ತೆರಿಗೆ ಮುಕ್ತವಾಗಿರುತ್ತದೆ (ಟ್ಯಾಕ್ಸ್ ಫ್ರೀ). ಅದರೆ ಪೂರ್ತಿ ದುಡ್ಡು ನಿಮ್ಮ ಜೇಬಿಗೆ ಸೇರುತ್ತದೆ. ಹಾಗೇನೇ, ಹೊಸ ರೂಲ್ಸ್ ಪ್ರಕಾರ ನೀವು ಆರು ತಿಂಗಳಿಗಿಂತ ಜಾಸ್ತಿ ಕೆಲಸ ಮಾಡಿದ್ದರೆ ಅದನ್ನು ಪೂರ್ತಿ ಒಂದು ವರ್ಷ ಅಂತಾನೇ ಪರಿಗಣಿಸಲಾಗುತ್ತದೆ.

ಇನ್ನು 11 ತಿಂಗಳು ಕೆಲಸ ಮಾಡಿದರೆ ಗ್ರಾಜ್ಯುಟಿ ಸಿಗುತ್ತೆ. ಇದರಿಂದ ಪದೇಪದೆ ಕೆಲಸ ಬದಲಾಯಿಸುವ ಯುವಕರಿಗೆ ಮತ್ತು ಕಾಂಟ್ರಾಕ್ಟ್ ಉದ್ಯೋಗಿಗಳಿಗೆ ಸಖತ್ ಲಾಭ ಇದೆ. ಕೆಲಸ ಬಿಡೋವಾಗ ಈ ಹಣ ದೊಡ್ಡ ಆರ್ಥಿಕ ಸಹಾಯ ಮಾಡುತ್ತದೆ ಅನ್ನೋದರಲ್ಲಿ ಯಾವುದೇ ಡೌಟ್‌ ಇಲ್ಲ.

Megha
the authorMegha

Leave a Reply

error: Content is protected !!