CrimeNEWSನಮ್ಮರಾಜ್ಯಬೆಂಗಳೂರು

ಲಾಡ್ಜ್​​ನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಪೊಲೀಸರಿಂದ ಚಿತ್ರಹಿಂಸೆ:  ಕಮಿಷನರ್, ಮಾನವ ಹಕ್ಕುಗಳ ಆಯೋಗಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾರೋ ಮಾಡಿದ ತಪ್ಪಿಗೆ ಅಮಾಯಕನನ್ನು ಲಾಡ್ಜ್​​ನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಕಾಟನ್​ಪೇಟೆ ಪೊಲೀಸರ ಚಿತ್ರಹಿಂಸೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಹಲ್ಲೆ ಆರೋಪವನ್ನು ಕಾಟನ್​ಪೇಟೆ ಪೊಲೀಸರ ವಿರುದ್ಧ ವೆಂಕಟ್ ಎಂಬುವರು ಮಾಡಿದ್ದಾರೆ. ನನ್ನನ್ನು ಠಾಣೆಗೂ ಕರೆದೊಯ್ಯದೇ ಲಾಡ್ಜ್​​ನಲ್ಲಿ ಮೂರು ದಿನಗಳ ಕಾಲ ಕೂಡಿಟ್ಟು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ವೆಂಕಟ್‌ ದೂರು ನೀಡಿದ್ದಾರೆ.

ಯಾರ ವಿರುದ್ಧ ಆರೋಪ..? ಕಾಟನ್ ಪೇಟೆ ಸಬ್ ಇನ್ಸ್​​ಪೆಕ್ಟರ್ ಸಂತೋಷ್ ಗೌಡ, ಸಿಬ್ಬಂದಿಯಾದ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ಧ ಪೊಲೀಸ್ ಕಮಿಷನರ್ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದು, ಸದ್ಯ ಪೊಲೀಸರ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಏನಿದು ಪ್ರಕರಣ..?: ಜನವರಿ 12 ರಂದು ವೆಂಕಟ್ ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗಿದ್ದರು. ಅಲ್ಲಿಂದ ಹುಟ್ಟೂರಾದ ಬೇವಳ್ಳಿಗೆ ಹೋಗಲು ಅಪರಿಚಿತ ಮಣಿ ಎಂಬಾತನಿಂದ ಡ್ರಾಪ್ ಪಡೆಯುತ್ತಿದ್ದರು. ಡ್ರಾಪ್ ಪಡೆಯುತ್ತಿದ್ದ ವ್ಯಕ್ತಿ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 420 ಅಡಿ ಕೇಸ್ ದಾಖಲಾಗಿತ್ತು.

ಮಣಿಯನ್ನು ಹುಡುಕಾಡುತ್ತಿದ್ದ ಕಾಟನ್ ಪೇಟೆ ಪೊಲೀಸರಿಗೆ ಮಣಿ ಲೊಕೇಷನ್ ಮುಳಬಾಗಿಲು ತೋರಿಸಿತ್ತು. ಪೊಲೀಸರು ಮುಳಬಾಗಿಲಿನ ಕೂತಂಡಹಳ್ಳಿ ಕೆರೆ ಬಳಿ ದಾಳಿ ಮಾಡಿ ಮಣಿ ಜತೆ ವೆಂಕಟ್ ಅವ​​ರನ್ನು ಕರೆದೊಯ್ದಿದ್ದಾರೆ. ಆದರೆ ಇಲ್ಲಿ ಮಣಿ ಮೇಲಿದ್ದ ಕೇಸ್​ಗೂ ವೆಂಕಟ್ ಅವ​​ರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗಿದೆ.

ವೆಂಕಟ್ ಆರೋಪ ಏನು..?: ಮುಳಬಾಗಿಲಿನಿಂದ ಕೆರೆದುಕೊಂಡು ಬಂದು ಜನವರಿ 13ರ ಬೆಳಗ್ಗೆ ಕಾಟನ್ ಪೇಟೆಯ ಲಾಡ್ಜ್ ಒಂದರಲ್ಲಿ ನನ್ನನ್ನು ಇರಿಸಿದ್ದರು. ನಾನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದೆ. ಸುಮ್ನೆ ಇರಬೇಕು, ಇಲ್ಲವಾದರೆ ಎನ್​ಕೌಂಟ್ ಮಾಡ್ತೀವಿ, ಇರೋ ಕೆಲಸನೂ ಕಳೆದುಕೊಳ್ಳುವ ಹಾಗೆ ಮಾಡ್ತೀವಿ ಎಂದು ಆವಾಜ್ ಹಾಕಿದರು. ಮೂರು ದಿನಗಳ ಕಾಲ ಪೊಲೀಸ್ ಠಾಣೆಗೆ ಕರೆದೊಯ್ಯದೇ ಲಾಡ್ಜ್​ನಲ್ಲಿ ಇಟ್ಟಿದ್ದರು.

ನಮ್ಮ ಮನೆಯವರಿಗೆ ಈ ವಿಷಯ ಗೊತ್ತಾಗಬಾರದು ಎಂಬ ಕಾರಣಕ್ಕೆ ನನ್ನ ಪತ್ನಿಗೆ ಆಗಾಗ ಫೋನ್ ಮಾಡಿಸಿ ಮತನಾಡಿಸುತ್ತಿದ್ದರು. ಆದರೆ ನಾನು ಆಕೆಗೆ ಎಲ್ಲಿದ್ದೀನಿ ಎಂದು ಹೇಳಲು ಬಿಡುತ್ತಿರಲಿಲ್ಲ. ಹೊರಗಿದ್ದೀನಿ, ನಾಳೆ ಬರ್ತಿನೆಂದು ಹೇಳಿಸುತ್ತಿದ್ದರು. ಆದರೆ ಒಮ್ಮೆ ನನಗೆ ನೋವು ತಡೆಯಲಾಗದೆ ಕಣ್ಣೀರು ಇಟ್ಟಿದ್ದೆ. ಇದರಿಂದ ನನ್ನ ಪತ್ನಿಗೆ ಅನುಮಾನ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆಗ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಇನ್ನು ಇತ್ತ ವೆಂಕಟ್ ಫೋನ್ ತೆಗೆಯದಿದ್ದಾಗ ಉಪ್ಪಾರಪೇಟೆ ಠಾಣೆಯಲ್ಲಿ ಪತಿ ಮಿಸ್ಸಿಂಗ್ ಆಗಿದ್ದಾರ ಎಂದು ಪತ್ನಿ ದೂರು ದಾಖಲಿಸಿದ್ದಳು. ನಾನು ಪತಿಗೆ ಕರೆ ಮಾಡಿದಾಗ ಒಮ್ಮೆ ಮೆಜೆಸ್ಟಿಕ್ ಬಳಿ ಅಂದಿದ್ದರು, ಇನ್ನೊಮ್ಮೆ ಮೈಸೂರು ಬ್ಯಾಂಕ್ ಬಳಿ ಇದ್ದೀನಿ ಎಂದಿದ್ದರು. ಮತ್ತೊಮ್ಮೆ ಮಣಿ ಅನ್ನೋರು ಮುಳಬಾಗಿಲಿನಿಂದ ಊರಿಗೆ ಡ್ರಾಪ್ ಕೊಡ್ತಿದ್ದಾರೆ ಎಂದಿದ್ದರು. ನನಗೆ ಯಾಕೋ ಅನುಮಾನ ಬರುತ್ತಿದೆ ಎಂದು ವೆಂಕಟ್ ಪತ್ನಿ ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.

ಉಪ್ಪಾರ ಪೇಟೆ ಠಾಣೆಯ ಪೊಲೀಸರು ವೆಂಕಟ್‌ ಅವರ ಮೊಬೈಲ್ ಸಿಡಿಆರ್ ತೆಗೆದು ವಿಚಾರಣೆ ನಡೆಸಿದ್ದಾರೆ. ಆಗ ಕಾಟನ್ ಪೇಟೆ ಲಾಡ್ಜ್ ಒಂದರಲ್ಲಿ ಲೋಕೇಷನ್ ತೋರಿಸುತ್ತಿತ್ತು. ಉಪ್ಪಾರಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿ ಅಲ್ಲಿನ ಪೊಲೀಸರು ಎಂಟ್ರಿ ಆಗ್ತಿದ್ದಂತೆ ವೆಂಕಟ್​ನನ್ನು ಲಾಡ್ಜ್​​ನಿಂದ ನಾಲ್ಕನೇ ದಿನಕ್ಕೆ ಬಿಟ್ಟು ಕಳುಹಿಸಿದ್ದಾರೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ