CrimeNEWSನಮ್ಮಜಿಲ್ಲೆ

ಪೊಲೀಸರ ಕ್ಷಪ್ರ ಕಾರ್ಯಾಚರಣೆ: 30 ಗಂಟೆಯೊಳಗೇ ಟೀಚರ್ ಕೊಲೆ ಆರೋಪಿ ಸೆರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿ ದೀಪಿಕಾ ಹತ್ಯೆ ಕೇಸ್‌ನಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುವ ಮೂಲಕ ಪ್ರಕರಣ ಬೆಳಕಿಗೆ ಬಂದ 30 ಗಂಟೆಯೊಳಗೇ ತಲೆಮರೆಸಿಕೂಂಡಿದ್ದ ಆರೋಪಿ 22 ವರ್ಷದ ನಿತೀಶ್‌ನನ್ನು ಬಂಧಿಸಿದ್ದಾರೆ.

ಆರೋಪಿ ನಿತೀಶ್‌ ಕೊಲೆಯಾದ ಟೀಚರ್ ದೀಪಿಕಾ ಜತೆ ಸಲುಗೆಯಿಂದ ಇದ್ದ. ಅಕ್ಕ, ಅಕ್ಕ ಎನ್ನುತ್ತಲೇ ಕೊಲೆ ಮಾಡಿ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯನ್ನು ಶವ ಹೂತಿಟ್ಟಿದ್ದನು ಎಂದು ಹೇಳಲಾಗುತ್ತಿದೆ.

ಘಟನೆ ವಿವರ: ಜನವರಿ 20ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ ಶಿಕ್ಷಕಿ ದೀಪಿಕಾ (28) ಅವರ ಕೊಲೆಯಾಗಿತ್ತು. ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಅಲ್ಲದೆ ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಅವರ ಸ್ಕೂಟರ್ ಪತ್ತೆಯಾಗಿತ್ತು.

ಮೇಲುಕೋಟೆಯಲ್ಲಿ ದೀಪಿಕಾ ಅವರನ್ನು ಎಳೆದಾಡುತ್ತಿದ್ದ ದೃಶ್ಯವನ್ನು ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಆರೋಪಿ ನಿತೀಶ್ ಅವರು ದೀಪಿಕಾಗೆ ಕಡೆಯದಾಗಿ ಫೋನ್ ಕೂಡ ಮಾಡಿದ್ದ.

ಈ ನಡುವೆ ಕಳೆದ ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಎಸ್ಕೇಪ್ ಆಗಿದ್ದ. ಇದರಿಂದ ಅನುಮಾನಗೊಂಡ ದೀಪಿಕಾ ಪತಿ ಲೋಕೇಶ್ ಅವರು ನಿತೀಶನೆ ಕೊಲೆಗಾರ ಎಂದು ಆರೋಪಿಸಿದ್ದರು.

ಈ ಎಲ್ಲ ಆಧಾರದ ಮೇರೆಗೆ ದೀಪಿಕಾ ಮೃತದೇಹ ಸಿಕ್ಕ 30 ಗಂಟೆಯೊಳಗೇ ಆರೋಪಿ ನಿತೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

DYSP ಮುರುಳಿ ನೇತೃತ್ವದಲ್ಲಿ ಹಂತಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ನಿತೀಶ್‌ನನ್ನು ಬಂಧಿಸಿರುವ ಪೊಲೀಸರು ಇಂದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬಳಿಕ ರೀಲ್ಸ್ ಟೀಚರ್ ಕೊಲೆಗೆ ಕಾರಣವೇನು ಅನ್ನೋದರ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

Leave a Reply

error: Content is protected !!
LATEST
ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ