NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ತುಮಕೂರು ವಿಭಾಗದ ತಿಪಟೂರು ಘಟಕದ ಚಾಲಕ ಕಂ ನಿರ್ವಾಹಕರಾದ ಮಂಜುನಾಥ್ ಅವರು ತಮ್ಮ ತಾಯಿ ನಿಧನ ಹೊಂದಿದ ಕಾರಣ ಗೈರು ಹಾಜರಾಗಿದ್ದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ವಿಷಯವನ್ನು ಮಂಜುನಾಥ್ ಅವರು ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಘಟಕದಲ್ಲಿ ಈ ಬಗ್ಗೆ ತಪ್ಪು ವರದಿ ನೀಡಿ ಗೈರುಹಾಜರಿ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಚಾಲಕರಿಗೆ ಮೆಮೋ ನೀಡಲಾಗಿತ್ತು.

ಇನ್ನು ಈ ಎಲ್ಲ ದಾಖಲೆಗಳನ್ನು ವಿಜಯಪಥ ವರರಿಗಾರರು ಕಲೆಹಾಕಿದ ಬಳಿಕ ಎಲ್ಲ ದಾಖಲೆಗಳೊಂದಿಗೆ ವಿವರವಾದ ವರದಿ ಮಾಡಲಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿ ಆದೇಶದಂತೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮಂಜುನಾಥ್ ಅವರಿಗೆ 20 ದಿನಗಳ ರಜೆ ಮಂಜೂರು ಮಾಡಿದ್ದಾರೆ.

ವಿಜಯಪಥ.ಇನ್‌ ನಲ್ಲಿ ವರದಿ ಬಂದಿದ್ದರಿಂದ ಕೇಂದ್ರ ಕಚೇರಿಯಲ್ಲಿರುವ ಉನ್ನತ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ವಿಷಯ ತಿಳಿದು ಸತ್ಯಾಸತ್ಯತೆ ಪರಿಶೀಲಿಸಿದಾಗ ಮಂಜುನಾಥ್ ಅವರ ಅಮ್ಮ ನಿಧನರಾಗಿರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ಗೈರು ಹಾಜರಿ ಎಂದು ತೋರಿಸಿರುವುದುದನ್ನು ಬಿಟ್ಟು ರಜೆ ಮಂಜೂರು ಮಾಡಿ ವೇತನ ಕೊಡಬೇಕು ಎಂಬ ಕೇಂದ್ರ ಕಚೇರಿ ಆದೇಶದಂತೆ ಡಿಸಿ ಅವರು ರಜೆ ಮಂಜೂರು ಮಾಡಿದ್ದಾರೆ ಡಿಸಿ.

ಅಭಿನಂದನೆ: ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದರಿಂದ ರಜೆ ಮಂಜೂರು ಆಗಿದೆ ಎಂದು ಚಾಲಕ ಹಾಗೂ ತಿಪಟೂರು ಘಟಕದ ಸಾರಿಗೆ ಸಿಬ್ಬಂದಿಗಳು ವಿಜಯಪಥಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನು ಓದಿ: KSRTC ತುಮಕೂರು: ಅಮ್ಮ ನಿಧನರಾಗಿದ್ದಕ್ಕೆ  ನೌಕರನಿಗೆ ರಜೆ ಬದಲು ಮೆಮೋ ಕೊಟ್ಟು ಅಮಾನವೀಯ ವರ್ತನೆ ತೋರಿದ  ಡಿಸಿ

1 Comment

  • ವಿಜಯಪಥ ಪತ್ರಿಕೆ ಸಂಪಾದಕರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🌹🌹

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !