Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಮಾಜಿ ಮುಖ್ಯಮಂತ್ರಿ ಸಿದ್ದು ಒಂದೇಕಡೆ ನಿಂತರ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ : ಭವಿಷ್ಯ ನುಡಿದ ಮನೆ ದೇವತೆ ಚಿಕ್ಕತಾಯಮ್ಮ

ವಿಜಯಪಥ ಸಮಗ್ರ ಸುದ್ದಿ

ಮಳವಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ನಿಂತರೆ ಗೆಲುವು ಸಾಧಿಸಲಿದ್ದಾರೆ ಎಂದು ಮನೆದೇವರ ಮೊರೆ ಹೋಗಿದ್ದು ಅವರ ಮನೆದೇವರು ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಆಶೀರ್ವಾದ ಮಾಡಿದೆಯಂತೆ.

ಹೌದು! ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ತವರು ಕ್ಷೇತ್ರ ವರುಣಾದಲ್ಲೋ ಅಥವಾ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದ್ದು, ಇದೇ ವೇಳೆಗೆ ಸಿದ್ದು ರಾಜಕೀಯ ಭವಿಷ್ಯವನ್ನು ಮನೆ ದೇವರು ನಿರ್ಧರಿಸಿದೆಯಂತೆ.

ಸಿದ್ದರಾಮಯ್ಯ ಒಂದೇ ಕಡೆ ನಿಂತರೆ ಬಲವಿಲ್ಲ. ಎರಡು ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕತಾಯಮ್ಮ ದೇವಿ ಭವಿಷ್ಯ ನುಡಿದ್ದಾಳೆ. ಈ ದೇವರು ಸಿದ್ದರಾಮಯ್ಯ ಕುಟುಂಬದ ಮೂಲ ಮನೆ ದೇವತೆ.

ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರ್ತೀನಿ ಎಂದು ದೇವರು ಭರವಸೆ ನೀಡಿದೆ.

ನಾನು ನಿಮ್ಮ ಮನೆ ದೇವತೆ ಗೊತ್ತಾ? ನಾನು ಮೂಲದೇವರು. ಬೇಕಾದ್ರೆ ಅವಕಾಶ ಸಿಕ್ಕಿದರೆ ಯಾವಾಗಾದರೂ ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ದೇವಾಲಯದ ಅರ್ಚಕ ಡಾ. ಲಿಂಗಣ್ಣ ಮೈ ಮೇಲೆ ಬಂದ ಶಕ್ತಿ ದೇವತೆ ಹೇಳಿದೆ. ಸಿದ್ದು ಪುತ್ರ ಡಾ.ಯತೀಂದ್ರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ವೇಳೆ ದೇವರು ಈ ಸೂಚನೆ ಕೊಟ್ಟಿದೆ.

ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಜತೆ ದೇವಾಲಯಕ್ಕೆ ಯತೀಂದ್ರ ಭೇಟಿ ನೀಡಿದರು. ದೇವರು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಮೂಲ ಮನೆ ದೇವರ ಸೂಚನೆಯಂತೆ ಎರಡು‌ ಕ್ಷೇತ್ರದಲ್ಲಿ ನಿಲ್ಲುವರಾ ಸಿದ್ದರಾಮಯ್ಯ? ದೇವಾಲಯಕ್ಕೆ ಭೇಟಿನೀಡಿ ಪೂಜೆ ಸಲ್ಲಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಕಾರಣ ಸಿದ್ದರಾಮಯ್ಯ ಅವರು ಹೆಚ್ಚಾಗಿ ದೇವರನ್ನು ನಂಬುವುದಿಲ್ಲ. ಹೀಗಾಗಿ ಅವರ ನಡೆ ಏನು ಎಂಬುವುದರ ಬಗ್ಗೆ ಕಾದು ನೋಡಬೇಕಿದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...