ಕಲಬುರಗಿ: ಜೇವರ್ಗಿಯ ಕಾಂಗ್ರೆಸ್ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ನಿವಾಸದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಶರಣ ನಗರದಲ್ಲಿರುವ ಶಾಸಕ ಡಾ. ಅಜಯ್ ಸಿಂಗ್ ನಿವಾಸದ ಅಂಗಳದಲ್ಲಿರುವ ಮರಕ್ಕೆ ದೇವೀಂದ್ರ (32) ಎಂಬಾತ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಈತ ಅಜಯ್ ಸಿಂಗ್ ನಿವಾಸದಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಬುಧವಾರ ರಾತ್ರಿವರೆಗೂ ಕೆಲಸ ಮಾಡುತ್ತಿದ್ದ ಈತ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬ್ರಹ್ಮಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪ್ರಕರಣ ದಾಖಿಲಿಸಿಕೊಂಡಿದ್ದಾರೆ.
ಹಳ್ಳಿಯಿಂದ ಬಂದು ವಾಚ್‌ಮನ್ : ದೇವೀಂದ್ರ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ವಾಸಿಯಾಗಿದ್ದು, ಅವನು ಅಜಯ್ ಸಿಂಗ್ ಮನೆಯಲ್ಲಿ ಕಳೆದ 4-5 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದ. ಊರಿನಲ್ಲಿ ದೇವೀಂದ್ರನ ಹೆತ್ತವರು ಮತ್ತು ಅಣ್ಣ- ಅತ್ತಿಗೆ ಇದ್ದಾರೆ ಎಂದು ಆತನ ಸಹೋದರಿ ಸಂಗೀತಾ ತಿಳಿಸಿದ್ದಾರೆ.
ದೇವೀಂದ್ರನಿಗೆ ಐದು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಹೆರಿಗೆಯ ವೇಳೆ ಮೃತಪಟ್ಟಿದ್ದರು. ಮಗು ಕೂಡಾ ಪ್ರಾಣ ಕಳೆದುಕೊಂಡಿತ್ತು. ಅದಕ್ಕಿಂತ ಮೊದಲೇ ನಗರದಲ್ಲಿದ್ದ ದೇವೀಂದ್ರ ಬಳಿಕ ಹೆಚ್ಚಾಗಿ ಕಲಬುರಗಿಯಲ್ಲೇ ಇದ್ದ. ಏನಾದರೂ ಕೆಲಸವಿದ್ದರೆ ಮಾತ್ರ ಊರಿಗೆ ಹೋಗುತ್ತಿದ್ದ. ಕಳೆದ ಒಂದೆರಡು ವರ್ಷದಿಂದ ಆತನಿಗೆ ಮದುವೆ ಮಾಡುವ ಸಲುವಾಗಿ ಕನ್ಯ ನೋಡುತ್ತಿದ್ದರು.
ದೇವೀಂದ್ರನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗುತ್ತಿಲ್ಲ ಎಂದು ಸಗೀತಾ ಹೇಳಿದ್ದಾರೆ. ದೇವೀಂದ್ರನ ಸಾವಿಗೆ ಏನು ಕಾರಣದ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದು, ಅಸಜ ಸವಾಗಿದ್ದರೆ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.