ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಸರಿ ಸಮಾನ ವೇತನ 6ನೇ ವೇತನ ಆಯೋಗದಂತೆ ನೀಡುತ್ತೇವೆ ಎಂದು ಸಚಿವರು ಆಡಳಿತ ಮಂಡಳಿ ಹೇಳಿಲ್ಲ ಎಂದು ನೌಕರರ ದಾರಿ ತಪ್ಪುಸುವ ಹೇಳಿಕೆ ನೀಡುತ್ತಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಗಮಗಳಿಂದ ಹೊರಡಿಸಲಾದ ದಾಖಲೆಗಳನ್ನು ನೋಡುವ ಅಭ್ಯಾಸ ಇಲ್ಲ ಎಂಬುವುದು ಇದರಿಂದ ಸ್ಟಷ್ಟವಾಯಿತು.
ಮೊನ್ನೆ ಅಂದರೆ ಇದೇ ಸೆ.12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ 2024ರ ವೇತನ ಪರಿಷ್ಕರಣೆ ಸಂಬಂಧ ನಡೆದ ಧರಣಿಯಲ್ಲಿ ಮಹಾನುಭವರೊಬ್ಬರು ವಿಜಯಪಥ ಮೀಡಿಯಾವನ್ನು ಉಲ್ಲೇಖಿಸಿ, ಸರಿ ಸಮಾನ ವೇತನ ಕೊಡುವುದಕ್ಕೆ ಸರ್ಕಾರ ಮತ್ತು ಆಡಳಿತ ಮಂಡಳಿ ಒಪ್ಪಿದೆ ಆದರೆ ಕೆಲ ಸಂಘಟನೆಗಳು ಒಪ್ಪಿತ್ತಿಲ್ಲ ಎಂದು ಸುಳ್ಳು ವರದಿ ಮಾಡಿದೆ ಎಂದು ಹೇಳಿದ್ದಾರೆ.
ಅಲ್ಲದೆ ಸರ್ಕಾರ ಮತ್ತು ಆಡಳಿತ ಮಂಡಳಿ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಎಲ್ಲಿ ಹೇಳಿವೆ ಎಂದು ಪ್ರಶ್ನಿಸಿದ್ದಾರೆ. ಆ ಮಹಾನುಭವರಿಗೆ ಕೇಳ ಬಯಸುತ್ತೇವೆ. ಒಂದು ಮಾಧ್ಯಮದಲ್ಲಿ ಬಂದ ಸುದ್ದಿಯ ಬಗ್ಗೆ ತಿಳಿದುಕೊಳ್ಳದೆ ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ಧರಣಿ ವೇಳೆ ನೌಕರರನ್ನು ನಂಬಿಸುವ ಭಾಷಣ ಮಾಡುವುದು ನಿಮಗೆ ಶೋಭೆ ತರುತ್ತದೆಯೇ ಅದನ್ನು ಮೊದಲು ಹೇಳಿ?
ಸಾರಿಗೆಯ ನಾಲ್ಕೂ ನಿಗಮಗಳ ಸಮಸ್ತ ನೌಕರರು ನಮಗೆ ಸರ್ಕಾರಿ ನೌರರಿಗೆ ಸರಿ ಸಮಾನ ವೇತನ ಬೇಕು. ಅದನ್ನು ಬಿಟ್ಟು ನಾಲ್ಕು ವರ್ಷಕೊಮ್ಮೆ ನಡೆಯುವ ಈ ಹಗ್ಗಜಗ್ಗಾಟ ಮತ್ತು ಒಳಒಪ್ಪಂದ ನಮಗೆ ಬೇಡ ಎಂದು 2020ರಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ, ನೀವು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಇದು ಬೇಡ. ನಾವು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಕೊಡಿಸುತ್ತೇವೆ ಎಂದು ಬೊಬ್ಬೆ ಹೊಡೆದುಕೊಂಡು ನೌಕರರನ್ನು ಬೀದಿಗಳಿಸಿ ವಜಾ, ವಾರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಅವರ ಮನೆ ನಾಶಮಾಡುವ ವ್ಯವಸ್ಥೆಗೆ ಏಕೆ ಅಂಟಿಕೊಂಡಿದ್ದೀರಿ. ಇದಕ್ಕೆ ಸಮಂಜಸವಾದ ಉತ್ತರ ಕೊಡಲು ನಿಗಮಗೆ ಸಾಧ್ಯವಿದೆಯೇ?
ಸಾಧ್ಯ ಎಂದಾದರೆ ಮೊದಲು ನೀವು ವೇತನ ಪರಿಷ್ಕರಣೆ ವೇಳೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಡುವ ಹೈಡ್ರಾಮಾವನ್ನು ಬಿಟ್ಟು ಸರ್ಕಾರ ಸಂಘಟನೆಗಳ ಜಂಟಿ ಒಪ್ಪಿಗೆ ಮೇರೆಗೆ ವೇತನ ಪರಿಷ್ಕರಣೆ ಮಾಡಿದ್ದೇವೆ ಎಂದು ಘಂಟಾಘೋಷವಾಗಿ ಹೇಳುವಂತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿ?
ಇನ್ನು ಸರ್ಕಾರ ವೇತನ ಪರಿಷ್ಕರಣೆ ವೇಳೆ ಸಂಘಟನೆಗಳ ಮಾತನ್ನು ಕೇಳದೆ ಏಕ ಪಕ್ಷೀಯ ನಿರ್ಧಾರ ಎಂದು ಸರ್ಕಾರ ಘೋಷಣೆ ಮಾಡುವ ವೇತನ ಪರಿಷ್ಕರಣೆಯನ್ನು ಒಪ್ಪದೆ ಬಳಿಕ ಮುಖ್ಯಮಂತ್ರಿಗೆ ಹೋಗಿ ಹೂವಿನ ಹಾರತುರಾಯಿ ಹಾಕಿ ಕೈ ಕುಲುಕಿ ನೀವು ಮಾಡಿದ್ದೆ ಸರಿ ಎಂದು ಸಿಎಂ ತೆಗೆದುಕೊಂಡ ನಿರ್ಧಾರವನ್ನೇ ಬೆಂಬಲಿಸುವ ಈ ಕೀಳು ಮನೋಭಾವನೆಯ ನಿಮಗೆ ಏನು ಹೇಳಬೇಕು ಹೇಳಿ? ನಿಮ್ಮಲ್ಲಿ ಏಕೆ ಈ ದೋರಣೆ ಇದೆ? ಈ ಬಗ್ಗೆ ನೌಕರರಿಗೆ ಸಮಂಜಸವಾದ ಉತ್ತರ ಕೊಡುವಿರ ಸ್ವಾಮಿ?
ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಸಿಗುವುದಾದರೆ ನಿಮ್ಮಂತೆ ನಮಗೂ ತುಂಬ ಸಂತೋಷವೆ. ಆದರೆ ನೀವು ಹೇಳುವುದೊಂದು ಮಾಡುವುದೊಂದು ಎಂಬ ಸಂಸ್ಕೃತಿ ಬೆಳೆಸಿಕೊಂಡು ನೌಕರರ ಮುಂದೆ ಡ್ರಾಮಾ ಮಾಡುವುದನ್ನು ನಿಲ್ಲಿಸಿ. ಜತೆಗೆ ಸತ್ಯವನ್ನು ನೌಕರರಿಗೆ ತಿಳಿಸುವ ಕೆಲಸ ಮಾಡಿ. ನೀವು ಮಾಡುವ ಆ ಕೆಲಸ ನೌಕರರಿಗೂ ಗೊತ್ತಾಗುತ್ತದೆ. ಅವರೇನು ದಡ್ಡರಲ್ಲ ಅದನ್ನು ವಿರೋಧಿಸಿ ವರದಿ ಮಾಡಿದರೆ ವಿಜಯಪಥ ನಂಬುವುದಕ್ಕೆ.
ಈ ನಿಟ್ಟಿನಲ್ಲಿ ನೀವು ಕೆಲಸ ಮಾಡಿದರೆ ವಿಜಯಪಥ ಯಾವುದೆ ಮುಲಾಜಿಲ್ಲದೆ ನಿಮ್ಮ ಒಳ್ಳೆಯ ಕೆಲಸವನ್ನು ನೌಕರರಿಗೆ ತಿಳಿಸುವ ನಿಟ್ಟಿನಲ್ಲಿ ಮುಂದಾಗುತ್ತದೆ. ಆದರೆ, ಇತ್ತೀಚೆಗೆ ನೀವು ನಡೆದುಕೊಳ್ಳುತ್ತಿರುವುದು ಒಂದು ರೀತಿ ಊಸರವಳ್ಳಿಯಂತೆ ಕಾಣುತ್ತಿದೆ ಆ ನಿಮ್ಮ ನಡೆಗೆ ನಮ್ಮ ವಿರೋಧವಿದೆಯೇ ಹೊರತು ವ್ಯಕ್ತಿ ದ್ವೇಷವೇನು ಇಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇವೆ.
ಈಗಲಾದರೂ ಜಂಟಿ ಕ್ರಿಯಾ ಸಮತಿಯವರು ಈ 4 ವರ್ಷಕೊಮ್ಮೆ ನಡೆಯುವ ಹೋರಾಟಕ್ಕೆ ಶಾಶ್ವತವಾಗಿ ಪೂರ್ಣವಿರಾವಿಟ್ಟು ನೌಕರರಿಗೆ ಕಾಲಕಾಲಕ್ಕೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಿದರೆ ನೌಕರರಿಗೆ ತುಂಬ ಖುಷಿಯಾಗುತ್ತದೆ. ಆ ನಿಟ್ಟಿನಲ್ಲಿ ಮುನ್ನಡೆಯುತ್ತೀರಿ ಎಂದು ಭಾವಿಸಿದ್ದೇವೆ.
ಇನ್ನೊಂದು ಪ್ರಮುಖ ವಿಷಯ ಧರಣಿಯಲ್ಲಿ ವಿಜಯಪಥ ಮೀಡಿಯಾ ಬಗ್ಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಯೊಬ್ಬರು ಮಾತನಾಡುತ್ತ ಕೇಳಿದರು ಸರಿ ಸಮಾನ ವೇತನ ಕೊಡುತ್ತೇವೆ ಎಂದು ಸರ್ಕಾರ, ಸಚಿವರು ಮತ್ತು ಆಡಳಿತ ಮಂಡಳಿ ಎಲ್ಲಿ ಹೇಳಿದೆ ಈ ಬಗ್ಗೆ ವರದಿ ಮಾಡುವ ಮುನ್ನ ತಿಳಿದುಕೊಳ್ಳಬೇಕು ಎಂದು. ಅದಕ್ಕೆ ಸಾಕ್ಷಿಯೊಂದಿಗೆ ನಿಮಗೆ ತಿಳಿಸಲು ವಿಜಯಪಥ ಬಯಸುತ್ತದೆ.
ಸರ್ಕಾರ ಹೇಳಿದ್ದು ಸಚಿವರು ಲಿಖಿತವಾಗಿ ಭರವಸೆ ಕೊಟ್ಟಿದ್ದು ಎಲ್ಲವನ್ನು ನೀವು ನೋಡಿದ್ದೀರಿ ಮತ್ತೆ ಕೇಳಿದ್ದೀರಿ ಆದರೂ ಅದೆಲ್ಲ ಸುಳ್ಳು ಎಂದು ಮತ್ತೊಮ್ಮೆ ತಾವು ಸುಳ್ಳು ಈ ಹೇಳಿಕೆ ನೀಡಿ ನೌಕರರ ಯಾಮಾರಿಸಲು ಹೊರಟಿದ್ದೀರಿ ಹೀಗಾಗಿ ತಮಗೆ ದಾಖಲೆ ಸಹಿತ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದನ್ನು ನೀವೆ ನೋಡಿ.
ದಿನಾಂಕ 20-01-2021ರಂದು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರ ಸರಿಸಮಾನ ವೇತನವಾದ 6ನೇ ವೇತನ ಆಯೋಗದಂತೆ ವೇತನ ನೀಡಲು ತಯಾರಿಸಿದ ವರದಿಗಳ ದಾಖಲೆಗಳಿವು. ಆಗಲೇ ತಾವೆಲ್ಲ ಸಂಘಟನೆ ಮುಖಂಡರು ಏಕಪಕ್ಷೀಯವಾಗಿ ಈ ಶಿಫಾರಸ್ಸಿಗೆ ಆಗ್ರಹಿಸಿ 6ನೇ ವೇತನ ಆಯೋಗದ ವೇತನ ಪಡೆದುಕೊಳ್ಳಬಹುದಿತ್ತು ಆದರೆ ಆ ಕೆಲಸವನ್ನು ನೀವು ಮಾಡಲಿಲ್ಲ.
ಈಗ ತನ್ನಿಂತಾನೇ ಎಲ್ಲ ಸಾರಿಗೆ ನೌಕರರು ಕೂಡ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಅನುಬಂಧ -1ರ ಕೋಷ್ಟಕದಂತೆ ಈಗ 4ನೇ ದರ್ಜೆ ನೌಕರರರ ವೇತನ 17000 ರೂ.ಗಳಿಂದ 27000 ರೂ.ಗೂ, 3ನೇ ದರ್ಜೆ ನೌಕರರ ವೇತನ 21400 ರೂ.ಗಳಿಂದ 34100 ರೂ.ಗೂ , 2ನೇ ದರ್ಜೆ ನೌಕರರ ವೇತನ 36,000 ರೂ.ಗಳಿಂದ 58300 ರೂ.ಗಳಿಗೂ ಮತ್ತು 1ನೇ ದರ್ಜೆ ನೌಕರರ ವೇತನ 50150 ರೂ.ಗಳಿಂದ 76000 ರೂ.ಗಳ ವರೆಗಿನ ವೇತನ ಹೆಚ್ಚಾಗಿದೆ. ಅದನ್ನು ಕೊಡಿಸಿ ಎನ್ನುತ್ತಿದ್ದಾರೆ ಆದರೆ ತಾವು ಬೇಡ ಎನ್ನುತ್ತಿದ್ದೀರಿ ಅಲ್ವಾ?
ಜತೆಗೆ ಇದು ಬೇಡ ಇದಕ್ಕಿಂತ ಹೆಚ್ಚು ವೇತನ ಕೊಡಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಆದರೆ 20-30 ಸಾವಿರ ರೂ.ಗಳ ವರೆಗೆ ವ್ಯತ್ಯಾಸವಿರುವ ವೇತನನ್ನು ಒಂದು ಬಾರಿಗೆ ಮಾಡಿಸಿಕೊಡಲು ನಿಮಗೆ ಸಾಧ್ಯವಿದೆಯೇ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಆದರೂ ನಿಮ್ಮ ದಾರಿಗೆ ಬರುತ್ತೇವೆ ತಾವು ವೇತನ ಪರಿಷ್ಕರಣೆಯನ್ನೆ ಮಾಡಿಸಿ ಹೆಚ್ಚು ವೇತನ ಕೊಡಿಸುವುದು ಬೇಡ ಪರಿಷ್ಕೆಣೆಯಲ್ಲೇ ಸರಿ ಸಮಾನ ವೇತನ ಕೊಡಿಸಲು ನಿಮ್ಮಿಂದ ಆಗುತ್ತದೆಯೇ ಹೇಳಿ?
ಇನ್ನು ವಿಜಯಪಥ ಪೀತ ಪತ್ರಿಕೋದ್ಯಮ ಎಂದು ಹೇಳಿದ್ದೀರಿ ನಾವು ನಿಮ್ಮ ರೀತಿ ಒಳಗೊಂದು ಹೊರಗೊಂದು ಇಟ್ಟುಕೊಂಡು ವರದಿ ಮಾಡುವುದಿಲ್ಲ ನೀವು ಹೇಳಿದನ್ನು ಮತ್ತು ಮಾಡುತ್ತಿರುವುದನ್ನು ಮಾತ್ರ ನೌಕರರಿಗೆ ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೆ.
ಅಷ್ಟಕ್ಕೂ ವಿಜಯಪಥವನ್ನು ಪೀತ ಪತ್ರಿಕೋದ್ಯ ಎಂದು ಹೇಳುವ ನಿಮಗೆ ವಿಜಯಪಥ ಏನು ಮಾಡಿದೆ. ಯಾರಿಗಾದರೂ ದಮ್ಕಿ ಹಾಕಿದೆಯೆ? ಇಲ್ಲ ನಮಗಿಷ್ಟು ಕೊಡಿ ಇಲ್ಲ ಎಂದರೆ ನಿಮ್ಮನ್ನು ಬೆತ್ತಲೇ ಮಾಡುತ್ತೇವೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದೆಯೇ? ಹೋಗಲಿ ನಿಮ್ಮ ಬಳಿ ವಿಜಯಪಥ ಮೀಡಿಯಾದ ಯಾವೊಬ್ಬ ವರದಿಗಾರರಾದರೂ ಬಂದು ಭಯ ಹುಟ್ಟಿಸುವ ರೀತಿ ನಡೆದುಕೊಂಡಿದ್ದಾರೆಯೇ?
ಈ ಯಾವುದೇ ದುಷ್ಕೃತ್ಯಗಳನ್ನು ಮಾಡದಿದ್ದರೂ ಹೇಗೆ ನೀವು ವಿಜಯಪಥವನ್ನು ಪೀತ ಪತ್ರಿಕೋದ್ಯ ಎಂದು ಕರೆದಿರಿ?. ಇದು ನಿಮಗೆ ಶೋಭೆ ತರುತ್ತದೆಯೇ ಹೇಳಿ? ನಾವು ನೌಕರರು ಹೇಳಿದನ್ನು ಮತ್ತು ಸರ್ಕಾರ ತೆಗೆದುಕೊಳ್ಳಲು ಹೊರಟ ನಿಲುವಿನ ಬಗ್ಗೆ ನೌಕರರಿಗೆ ತಿಳಿಸುವ ಕೆಲಸ ಮಾಡಿದ್ದೇವೆ, ಮಾಡುತ್ತಿದ್ದೇವೆ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸತ್ಯ ಹೇಳುವುದಕ್ಕೆ ನಮಗೆ ಯಾವುದೆ ಭಯವಿಲ್ಲ.
ನಮ್ಮ ಮೀಡಿಯಾದಲ್ಲಿ ಬರುತ್ತಿರುವ ವರದಿ ಸುಳ್ಳು ಎಂಬುದನ್ನು ದಾಖಲೆ ಸಹಿತ ನೀವು ತಿಳಿಸುವುದಕ್ಕೆ ಸಾಧ್ಯವಿದೆಯೇ? ಇದ್ದರೆ ಬಹಿರಂಗ ಪಡಿಸಿ. ಅದು ಸಮಸ್ತ ವಿಜಯಪಥ ಓದುಗರು, ಅಭಿಮಾನಿಗಳಿಗೂ ತಿಳಿಯಲಿ. ಅದನ್ನು ಬಿಟ್ಟು ಈ ರೀತಿ ಮಾತನಾಡಿ ಸತ್ಯವನ್ನು ಮರೆ ಮಾಚಬಹುದು ಎಂದು ಜತೆಗೆ ನೌಕರರ ದಿಕ್ಕು ತಪ್ಪಿಸಲಬಹುದು ಅಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಅಷ್ಟೆ.
Superb 👌👌👌