ಕಲಬುರಗಿ: ಡಿಸೆಂಬರ್ 23ರಂದು ಅನ್ನದಾತರ ರಾಜ್ಯ ಮಟ್ಟದ ರೈತ ಸಮಾವೇಶ- ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್

ಕಲಬುರಗಿ: ಅನ್ನದಾತರ ರಾಜ್ಯ ಮಟ್ಟದ ರೈತ ಸಮಾವೇಶವನ್ನು ಕಲಬುರಗಿಯಲ್ಲಿ ಡಿಸೆಂಬರ್ 23ರ ವಿಶ್ವ ರೈತ ದಿನಾಚರಣೆಯಂದು ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ರೈತ ದಿನದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಅನ್ನದಾತನನ್ನು ನೆನೆಯುವ ದಿನ ವಿಶ್ವ ರೈತ ದಿನ. ಹೀಗಾಗಿ ಅಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನ ಪ್ರಗತಿಪರ ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ರಾಜ್ಯದ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಸೆಳೆಯಲು ಈ ಸಮಾವೇಶಕ್ಕೆ ಕೇಂದ್ರದ ಹಾಗೂ ರಾಜ್ಯದ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಮೂಲಕ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ
ಭಾಗವಹಿಸಲ್ಲಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ 3000 ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಚಿಂಚೋಳಿಯ ಸಿದ್ದಸಿರಿ ಕಾರ್ಖಾನೆಯವರು 2500 ಪಾವತಿ ಮಾಡುತ್ತಿದ್ದಾರೆ. ಈ ಕಾರ್ಖಾನೆ ಮಾಲೀಕರು ಎಲ್ಲ ಕಾರ್ಖಾನೆಗಳಿಗಿಂತ ಹೆಚ್ಚು ಹಣ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿ ಈಗ ರೈತರನ್ನು ವಂಚಿಸುತ್ತಿದ್ದಾರೆ ಇದು ರೈತ ದ್ರೋಹಿ ಕಾರ್ಯವಾಗಿದೆ ಎಂದು ಅಸಮಾಧಾನ ವ್ಯಕತಪಡಿಸಿದರು.
ಇನ್ನು ಒಪ್ಪಂದದಂತೆ ಟನ್‌ಗೆ 3000 ರೂ. ರೈತರಿಗೆ ಪಾವತಿಸಬೇಕು, ಇಲ್ಲದಿದ್ದರೆ ಕಾರ್ಖಾನೆಗೆ ಕಬ್ಬು ಸರಬರಾಜು ನಿಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ರಮೇಶ್ ಉಗಾರ್ ಎಚ್ಚರಿಸಿದ್ದಾರೆ.
ಅತಿವೃಷ್ಟಿ, ಮಳೆ, ಪ್ರವಾಹಕ್ಕೆ ಹಾನಿಯಾಗಿರುವ ಬೆಳೆಗಳಿಗೆ ನಷ್ಟ ಪರಿಹಾರ ನೀಡುವುದು ರೈತರಿಗೆ ಭಿಕ್ಷೆಯಾಲ್ಲ ಸಂಪೂರ್ಣ ಬೆಳೆ ನಷ್ಟ ಪರಿಹಾರ ಎಕರೆ 25,000 ರೂ. ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಮಾರಂಭದಲ್ಲಿ ಆತ್ತಹಳ್ಳಿ ದೇವರಾಜ್, ಬಸವರಾಜ್ ಪಾಟೀಲ್, ಕರಬಸಪ್ಪ ಉಜ, ಜಗದೀಶ್ ಪಾಟೀಲ್, ನಾಗೇಂದ್ರರಾವ್ ದೇಶಮುಖ್, ನಾಗರಾಜ್ ಬರಡನಪುರ, ಭಾಗಣ್ಣ ಕುಂಬಾರ್, ಶಾಂತವೀರಪ ದಸ್ತಪೂರ್, ಸಂತೋಷ್ ಪಾಟೀಲ್ ಶಾಬಾದ್, ರೇವಣಸಿದ್ದಯ್ಯ ಮಠ, ಬಸುರಾಜ್ ವಾಳಿ, ಲಕ್ಷ್ಮಿಪುತ್ರ ಮನಮಿ, ದರೆಪ್ಪೆಗೌಡ, ಬಿರಾದಾರ್ ಬಿಜಾಪುರ್, ಶರಣು ಮಗಾ, ಶಾಂತವೀರಪ್ಪ ಇತರರು ಇದ್ದರು.
Related









