NEWSಕೃಷಿನಮ್ಮರಾಜ್ಯ

ಕಲಬುರಗಿ: ಡಿಸೆಂಬರ್ 23ರಂದು ಅನ್ನದಾತರ ರಾಜ್ಯ ಮಟ್ಟದ ರೈತ ಸಮಾವೇಶ- ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಅನ್ನದಾತರ ರಾಜ್ಯ ಮಟ್ಟದ ರೈತ ಸಮಾವೇಶವನ್ನು ಕಲಬುರಗಿಯಲ್ಲಿ ಡಿಸೆಂಬರ್ 23ರ ವಿಶ್ವ ರೈತ ದಿನಾಚರಣೆಯಂದು ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ರೈತ ದಿನದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಅನ್ನದಾತನನ್ನು ನೆನೆಯುವ ದಿನ ವಿಶ್ವ ರೈತ ದಿನ. ಹೀಗಾಗಿ ಅಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಜನ ಪ್ರಗತಿಪರ ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ರಾಜ್ಯದ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಸೆಳೆಯಲು ಈ ಸಮಾವೇಶಕ್ಕೆ ಕೇಂದ್ರದ ಹಾಗೂ ರಾಜ್ಯದ ಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಮೂಲಕ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ
ಭಾಗವಹಿಸಲ್ಲಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ 3000 ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಚಿಂಚೋಳಿಯ ಸಿದ್ದಸಿರಿ ಕಾರ್ಖಾನೆಯವರು 2500 ಪಾವತಿ ಮಾಡುತ್ತಿದ್ದಾರೆ. ಈ ಕಾರ್ಖಾನೆ ಮಾಲೀಕರು ಎಲ್ಲ ಕಾರ್ಖಾನೆಗಳಿಗಿಂತ ಹೆಚ್ಚು ಹಣ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿ ಈಗ ರೈತರನ್ನು ವಂಚಿಸುತ್ತಿದ್ದಾರೆ ಇದು ರೈತ ದ್ರೋಹಿ ಕಾರ್ಯವಾಗಿದೆ ಎಂದು ಅಸಮಾಧಾನ ವ್ಯಕತಪಡಿಸಿದರು.

ಇನ್ನು ಒಪ್ಪಂದದಂತೆ ಟನ್‌ಗೆ 3000 ರೂ. ರೈತರಿಗೆ ಪಾವತಿಸಬೇಕು, ಇಲ್ಲದಿದ್ದರೆ ಕಾರ್ಖಾನೆಗೆ ಕಬ್ಬು ಸರಬರಾಜು ನಿಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ರಮೇಶ್ ಉಗಾರ್ ಎಚ್ಚರಿಸಿದ್ದಾರೆ.

ಅತಿವೃಷ್ಟಿ, ಮಳೆ, ಪ್ರವಾಹಕ್ಕೆ ಹಾನಿಯಾಗಿರುವ ಬೆಳೆಗಳಿಗೆ ನಷ್ಟ ಪರಿಹಾರ ನೀಡುವುದು ರೈತರಿಗೆ ಭಿಕ್ಷೆಯಾಲ್ಲ ಸಂಪೂರ್ಣ ಬೆಳೆ ನಷ್ಟ ಪರಿಹಾರ ಎಕರೆ 25,000 ರೂ. ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಮಾರಂಭದಲ್ಲಿ ಆತ್ತಹಳ್ಳಿ ದೇವರಾಜ್‌, ಬಸವರಾಜ್ ಪಾಟೀಲ್, ಕರಬಸಪ್ಪ ಉಜ, ಜಗದೀಶ್ ಪಾಟೀಲ್, ನಾಗೇಂದ್ರರಾವ್ ದೇಶಮುಖ್‌, ನಾಗರಾಜ್ ಬರಡನಪುರ, ಭಾಗಣ್ಣ ಕುಂಬಾರ್, ಶಾಂತವೀರಪ ದಸ್ತಪೂರ್, ಸಂತೋಷ್ ಪಾಟೀಲ್ ಶಾಬಾದ್, ರೇವಣಸಿದ್ದಯ್ಯ ಮಠ, ಬಸುರಾಜ್ ವಾಳಿ, ಲಕ್ಷ್ಮಿಪುತ್ರ ಮನಮಿ, ದರೆಪ್ಪೆಗೌಡ, ಬಿರಾದಾರ್ ಬಿಜಾಪುರ್, ಶರಣು ಮಗಾ, ಶಾಂತವೀರಪ್ಪ ಇತರರು ಇದ್ದರು.

Megha
the authorMegha

Leave a Reply

error: Content is protected !!
Latest news
BMTC: ದೈಹಿಕವಾಗಿ ಫಿಟ್‌ ಇದ್ದರೂ ಲಘುಡ್ಯೂಟಿ ಮಾಡುತ್ತಿರುವ ನೌಕರರ ಸಂಘಟನೆಯ ಮುಖಂಡ- ಕಂಡು ಕಾಣದಂತೆ ಮೌನವಾಗಿರುವ ಅಧಿಕ... ಮೃತ ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆ ಸೇರಿದೆ ಬರೋಬರಿ 79.75 ಕೋಟಿ ರೂ.ಗೂ ಹೆಚ್ಚು ಹಣ ಇಂದಿನಿಂದ KSRTC ಬಸ್‌ನಲ್ಲಿ ಯಾವುದೇ ವಿಶೇಷ ಕಾರ್ಡ್‌ ಇಲ್ಲದೆ ಮಹಿಳೆಯರ ಮುಕ್ತ ಪ್ರಯಾಣಕ್ಕೆ ಅವಕಾಶ- "ಪ್ರಿಯದರ್ಶಿನಿ ಯ... ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ನೂರಕ್ಕೆ ನೂರರಷ್ಟು ಎಥನಾಲ್ ಬಳಕೆ: ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತ 8ನೇ ವೇತನ ಆಯೋಗ: ಸಲಹೆ ಸಂಗ್ರಹಕ್ಕೆ ಸರ್ಕಾರ ಕೊಟ್ಟಿದ್ದ ಗಡುವು ಇಂದಿಗೆ ಮುಕ್ತಾಯ- ವರದಿ ಸಲ್ಲಿಕೆಯೊಂದೇ ಬಾಕಿ ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ