ಕನಕಪುರ: ಅತ್ತ ನೀರಿಲ್ಲದೆ ಇತ್ತ ವಾತಾವರಣದ ಬಿಸಿ ತಾಳಲಾರದೆ ಕಾಡಾಣೆಯೊಂದು ಮೃತಪಟ್ಟ ಘಟನೆ ಯಲವನತ್ತ ವನ್ಯ ಜೀವಿ ಸಂರಕ್ಷಣಾ ಪ್ರದೇಶದಲ್ಲಿ ನಡೆದಿದೆ.
ರಾಂನಗರ ಜಿಲ್ಲೆಯ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಯೊಂದು ಮೃತಪಟ್ಟಿದೆ. ಕಳೆದ ಮೂರು ದಿನಗಳ ಹಿಂದೆ ನಿತ್ರಾಣಗೊಂಡಿದ್ದ 14 ವರ್ಷದ ಗಂಡಾನೆ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ. ನಿತ್ರಾಣಗೊಂಡಿದ್ದ
ಕಾಡಾನೆಗೆ ಅರಣ್ಯ ಸಿಬ್ಬಂದಿಗಳು ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಇತ್ತೀ ಚೆಗಷ್ಟೆ ನಿತ್ರಾಣಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಗಳು ಕಾಡಿಗಟ್ಟಿದ್ದರು. ಆದರೀಗ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಕಾಡಿನಲ್ಲಿ ನೀರು ಸಿಗದೆ ಆನೆ ಕೊನೆಯುಸಿರೆಳೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಎಫ್ಒ ರಾಮಕೃಷ್ಣಪ್ಪ , ಕನಕಪುರ ಎಸಿಎಫ್ ಗಣೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.