NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬಂದ ನೌಕರರ ವಿರೋಧಿ ನಾರಾಯಣಪ್ಪ ಕುರುಬರ- ಪ್ರತಿಭಟನೆಗೆ ಸಂಘದ ಸಿದ್ಧತೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಭ್ರಷ್ಟ ಅಧಿಕಾರಿ ನಾರಾಯಣಪ್ಪ ಕುರುಬರ ಅವರನ್ನು ವಿಜಯಪುರ ವಿಭಾಗಕ್ಕೆ ಮತ್ತೆ ವರ್ಗಾವಣೆ ಮಾಡಿದ್ದು ಖಂಡನೀಯ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ವಿಜಯಪುರ ವಿಭಾಗ ಪ್ರಧಾನ ಕಾರ್ಯದರ್ಶಿ ಜಿ.ಎಮ್.ಬಿರಾದಾರ ಹಾಗೂ ಕಾರ್ಯಾಧ್ಯಕ್ಷ ಎ.ಎ.ಮುಲ್ಲ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಜಯಪುರ ವಿಭಾಗಕ್ಕೆ ಬರಬಾರದೆಂದು ಮನವಿ ಮತ್ತು ಈಗಾಗಲೇ ಕೊಡಬಾರದೆಂಬ ಆದೇಶ ಇದೆ. ಆದರೂ ಕಾನೂನು ಮಿರಿ ವಿಜಯಪುರ ವಿಭಾಗಿಯ ನಿಯಂತ್ರಾಣಾಧಿಕಾರಿಯಾಗಿ ಕೊಟ್ಟಿದ್ದು ಕಾನೂನು ಪ್ರಕಾರ ತಪ್ಪು. ಇವರು ಮಾಡಿರುವ ಭಷ್ಟಾಚಾರದ ಬಗ್ಗೆ ವಿಚಾರಣೆ ಮಾಡಿದರೆ ಅಮಾನತು ಆದೇಶ ಮಾಡಬೇಕು. ಆದರೆ. ಇದಾವುದನ್ನು ಮಾಡದೆ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ನಿಯೋಜಿಸಿ ಆದೇಶ ಮಾಡಿರುವುದು ಕಾನೂನು ಬಾಹಿರ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾರಾಯಣಪ್ಪ ಕುರುಬರ ಅವರನ್ನು ಮಂಪೂರು ಪರೀಕ್ಷೆ ಮಾಡಿದಲ್ಲಿ ಸಂಸ್ಥೆಯಲ್ಲಿ ಮಾಡಿದ ನೂರಾರು ಕೋಟಿ ರೂ.ಗಳ ಹಗರಣ ಹೊರ ಬೀಳುತ್ತದೆ. ಇನ್ನು ಇವರು ಮಾಡಿರುವ ಕೃತಿಗಳನ್ನು ಒಂದಾಗಿ ಬಿಚ್ಚಿಡುವುದಾದರೆ ನೋಡಿ ಹೇಳಿಗೆ ಎಂದು.

1) ಸುಮಾರು 9 ವರ್ಷಗಳ ಕಾಲ ವಿಜಯಪುರ ವಿಭಾಗದಲ್ಲಿ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಂಯುಸಿ ಕೇಸಿನಲ್ಲಿ ನೂರಾರು ಕೋಟಿ ಲೂಟಿ ಮಾಡಿದ್ದು ಇರುತ್ತದೆ. 2) ಅಮಾನತಾದ ಸಿಪಿಎಂ ಬೆಂಗಳೂರ ಶಿವಕುಮಾರ ಜೋತೆಯಲ್ಲಿ ಭಾಗಿಯಾಗಿ ಸಂಸ್ಥೆಗೆ ನೂರಾರು ಕೋಟಿ ನಷ್ಟ ಮಾಡಿದ್ದಾರೆ.

3) 2023ರಲ್ಲಿ ನಾರಾಯಣಪ್ಪ ಕುರುಬರ ಅವರಿಗೆ ಡಿಸಿ ಹುದ್ದೆ ಕೊಡಬಾರದೆಂದು ಆದೇಶ ಇದ್ದರು ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಸಿ ಡಿಸಿ ಮಾಡಿದ್ದು ದಾಖಲೆ ಇದೆ.

4) ಬೆಂಗಳೂರಿನಲ್ಲಿ ಅಮಾನುತನಲ್ಲಿರುವ ಸಿಪಿಎಂ ಶಿವಕುಮಾರ ಅವರ ಮೊಬೈಲ್‌ ಜಪ್ತಿ ಮಾಡಿ ಪರೀಕ್ಷೆ ಮಾಡಿದರೆ ಎಲ್ಲವೂ ಹೊರಬಿಳುತ್ತದೆ.

5) 2020-21 ರಲ್ಲಿ ಡಿಸಿ ಆದಾಗ ಮಹಿಳಾ ದಿನಾಚರಣೆ ನೆಪದಲ್ಲಿ ಆಫೀಸ್‌ ಕಾಗದ ಪತ್ರಗಳನ್ನು ಸಹಿ ಮಾಡುವ ನೆಪದಲ್ಲಿ ಮನೆಗೆ ಕರೆಯಿಸಿ ಅಸಭ್ಯವಾಗಿ ನಡೆದುಕೊಂಡಿದ್ದು ಇರುತ್ತದೆ.

6) ವಿಜಯಪುರ ವಿಭಾಗದಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರ ನಡುವೆ ಜಗಳ ಹಚ್ಚಿ ತನಗೆ ತಿಂಗಳಿಗೆ ಹತ್ತು ಲಕ್ಷ ರೂಪಾಯಿಗಳು ಬರುವ ಹಾಗೆ ಮಾಡಿಕೊಂಡಿದ್ದು ಇದೆ.

7) ವಿಜಯಪುರ ವಿಭಾಗದಲ್ಲಿ ಡಿಸಿ ಆದಾಗ ಶಿಸ್ತು ಪ್ರಕರಣಗಳಲ್ಲಿ ಗೈರು ಹಾಜರಾತಿ ಪ್ರಕರಣದಲ್ಲಿ ದುಡ್ಡು ಕೊಟ್ಟವರಿಗೆ ಕಡಿಮೆ ಫನಿಶ್‌ಮೆಂಟ್‌, ಕೊಡಲಾರದವರಿಗೆ ಬೇರೆ ಫನಿಶ್‌ಮೆಂಟ್‌ ಕೊಟ್ಟಿದ್ದಾರೆ. 8) ಮಹಿಳೆಯರ ಶಿಸ್ತು ಪ್ರಕರಣದಲ್ಲಿ ಬೇಕಾಬಿಟ್ಟಿ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಕಾನೂನು ಮಾಡಿದ್ದಾರೆ.

9) 2020-21 ರಲ್ಲಿ ಕಾರ್ಮಿಕ ಮುಖಂಡರು ಸುಮಾರು 14 ದಿನಗಳ ಕಾಲ ಕಾರ್ಮಿಕರ ಬೇಡಿಕೆಗುಣವಾಗಿ ಬಸ್ಸುಗಳನ್ನು ಬಂದ್‌ ಮಾಡಿದ್ದು ಈ ವೇಳೆ ನೌಕರರನ್ನು ತನ್ನ ಮನಸ್ಸಿಗೆ ಬಂದಹಾಗೆ ವರ್ಗಾಯಿಸಿ ನೂರಕ್ಕೆ 90% ರಷ್ಟು ಭಾಗಿ ಆಗಲಾರದ ಜನರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿದ್ದು ಅದರಲ್ಲಿ 80% ರಷ್ಟು ಜನರು ಕೋರ್ಟ್‌ ಹಾಗೂ ಪೊಲೀಸ್ ಠಾಣೆಯಲ್ಲಿ ಬಿ ರಿಪೋರ್ಟ್‌ ಆಗಿ ಮರಳಿ ಬಂದಿದ್ದಾರೆ.

10) ಇದೆ 2023-24 ರಲ್ಲಿ ವಿಭಾಗದ ಎಲ್ಲ ನೌಕರರು ಬೆಂಗಳೂರಿನ ಲೋಕಾಯುಕ್ತ ನ್ಯಾಯ ಮೂರ್ತಿಗಳಲ್ಲಿ ತಮ್ಮ ಅಳಲನ್ನು ಸಮಸ್ಯೆಗಳನ್ನು ತೊಡಿಕೊಂಡಾಗ ಲೋಕಾಯುಕ್ತರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ವಕುಮಾರ್‌ ಅವರೊಂದಿಗೆ ಫೋನ್‌ ಮುಖಾಂತರ ಮಾತನಾಡಿ, ನಾರಾಯಣಪ್ಪ ಕುರಬರ ಅವರಿಗೆ ವಿಜಯಪುರದಲ್ಲಿ ವಿಭಾಗಿಯ ನಿಯಂತ್ರಾಂಣಾಧಿಕಾರಿಯಾಗಿ ಹಾಗೂ ಯಾವುದೇ ಉನ್ನತ ಹುದ್ದೆಯನ್ನು ಕೊಡಬಾರದು ಅಂತಾ ಸೂಚಿಸಿದ್ದರು.

11) ಮತ್ತೆ 2020-21 ರಲ್ಲಿ ವಾ.ಕ.ರಾ.ಸಾ ಸಂಸ್ಥೆ ಇಲ್ಲಿಗೆ ನಾರಾಯಣಪ್ಪ ಕುರುಬರ ಅವರನ್ನು ಫನಿಶ್‌ಮೆಂಟ್‌ ವರ್ಗಾವಣೆ ಮಾಡಿದ್ದು ಮತ್ತೆ ಹುಬ್ಬಳ್ಳಿಯಲ್ಲಿ ರಾಜಕೀಯ ಶಿಫಾರಸು ಪತ್ರಗಳನ್ನು ಪಡೆದು ಮುಖ್ಯ ಸಂಚಾರಿ ವ್ಯವಸ್ಥಾಪಕರಾಗಿ ಆದೇಶ ಮಾಡಿದರು. ಆ ಸಮಯದಲ್ಲಿ ಮತ್ತೆ ಎಂಡಿ ಅನ್ವಕುಮಾರ ಅವರಿಗೆ ಫೋನ್‌ ಮುಖಾಂತರ, ಪತ್ರದ ಮುಖಾಂತರ ತಿಳಿಸಿದಾಗ ಮತ್ತೆ ಅವರಿಗೆ ಫನಿಶ್‌ಮೆಂಟ್‌ ಮಾಡಿ ತರಬೇತಿ ಕೇಂದ್ರಕ್ಕೆ ಪ್ರೀನ್ಸಿಪಾಲ್‌ ಮಾಡಿ ವರ್ಗಾಯಿಸಿದ್ದರು.

12) 2020-21ರಲ್ಲಿ ನಾರಾಯಣಪ್ಪ ಕುರುಬರ ನೌಕರರಿಂದ ದುಡ್ಡು ತೆಗೆದುಕೊಂಡಿದ್ದು ಅದು ಫೋನ್‌, ವಿಡಿಯೋ, ಸಿಡಿಗಳನ್ನು ಮಾಡಿದ್ದು ಇದೆ. 13) ವಿಜಯಪುರ ವಿಭಾಗದಲ್ಲಿ ನಾರಾಯಣಪ್ಪ ಕುರುಬರ ಏಜೆಂಟರು ಮನೆ ಮನೆಗೆ ಹೋಗಿ ದುಡ್ಡು ಬೇಡಿದ್ದು ಮೊಬೈಲ್‌ನಲ್ಲಿ ರಿಕಾರ್ಡ್‌ ಇದೆ.

14) ಈ ವಿಡಿಯೋ ಸಿಡಿ, ಮೊಬೈಲ್‌ ರೆಕಾರ್ಡಿಂಗ್ ಸಂಸ್ಥೆಗೆ ಸೇರಿದ ಬೆಂಗಳೂರಿನ ಅಧಿಕಾರಿಗಳಿಗೂ ಹಾಗೂ ಕಲಬುರ್ಗಿ ಅಧಿಕಾರಿಗಳಿಗೂ ಸರಕಾರಿ ಸಂಸ್ಥೆಯ ಅಧಿಕಾರಿಗಳಿಗೂ ಕಳಿಸಿದ್ದು ಇದೆ.

15) ಈಗಾಗಲೇ ಎಲ್ಲ ವಿಷಯಗಳ ಕುರಿತು ಕಲಬುರ್ಗಿ ವಿಭಾಗದಲ್ಲಿ ನಾಲ್ಕು ಜನ ಉನ್ನತ ಅಧಿಕಾರಿಗಳ ತಂಡ ತನಿಖೆ ಮಾಡಲು ನೇಮಿಸಿದ್ದು ನಾಲ್ಕು ವರ್ಷ ಕಳೆದರು ತನಿಖೆ ಮುಂದಕ್ಕೆ ಸಾಗಿಲ್ಲ. ಹೀಗಾಗಿ ಯಾವುದೇ ಕ್ರಮ ಜರೂಗಿಸಿಲ್ಲ. 16) ಸಂಸ್ಥೆಯಲ್ಲಿ ಸಿಎನ್‌ಡಿಆರ್ ಕಾನೂನುಗಳು ನೌಕರರಿಗೆ ಒಂದು ಕಾನೂನು ಅಧಿಕಾರಿಗಳಿಗೆ ಒಂದು ಕಾನೂನು ಇದೆಯೇ?

17) ಸಂಸ್ಥೆಯಲ್ಲಿ ಕಾಯಾನಿರ್ವಹಿಸುವ ನೌಕರರು ಹಾಗೂ ನಿರ್ವಾಹಕರಿಗೆ ಕೇಸು, ತನಿಖೆ, ಆದರೆ ಆದಿವಸ ಕರ್ತವ್ಯದಿಂದ ಅಮಾನತು ಮಾಡುತ್ತಾರೆ. ಆದರೆ ಇವರೆಗೆ ಅಂಥ ಯಾವುದೇ ಶಿಕ್ಷೆ ಆಗುತ್ತಿಲ್ಲ ಏಕೆ ಎಂದು ಜಿ.ಎಮ್.ಬಿರಾದಾರ ಹಾಗೂ ಕಾರ್ಯಾಧ್ಯಕ್ಷ ಎ.ಎ.ಮುಲ್ಲ ಪ್ರಶ್ನಿಸುವ ಮೂಲಕ ಕೂಡಲೇ ನಾರಾಯಣಪ್ಪ ಕುರುಬರ ಅವರ ವರ್ಗಾವಣೆಯನ್ನು ರದ್ದು ಪಡಿಸಬೇಕು ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ಬೃಹತ್‌ ಪ್ರತಿಭಟನೆ ಮಾಡಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌