KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !


ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್‌ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು ಇತ್ತ ನೌಕರಿ ಇಲ್ಲದೇ ಮೃತ ಅವಲಂಬಿತ ನೌಕರರ ಮಕ್ಕಳು ಕಾದು ಕಾದು ಹೈರಾಣಾಗಿದ್ದಾರೆ.
ಇನ್ನು ಇಲ್ಲಿಯವರೆಗೆ ಕಿರಿಯ ಸಹಾಯಕ ಹುದ್ದೆ ನೀಡುವುದಾಗಿ ಹೇಳಿದ ಸಂಸ್ಥೆಯ ಅಧಿಕಾರಿಗಳು ಈಗ ದಿಢೀರನೇ ಬೇರೆ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಕೌನ್ಸಲಿಂಗ್‌ಗೆ ಹಾಜರಾಗಲು ತಿಳಿಸಿದ ಸೂಚನಾ ಪತ್ರ ಕಳುಹಿಸಿದ್ದಾರೆ. ಇದನ್ನು ಕಂಡು ಮೃತ ನೌಕರರ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.
ಕಲ್ಯಾಣ ಕರ್ನಾಟಕದ ವಿಜಯಪುರ ವಿಭಾಗದಲ್ಲಿ ಅನುಕಂಪದ ಆಧಾರದ ಮೇಲೆ ಇತ್ತಿಚಿಗೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಬೀದರ್ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳದೇ ತಾರತಮ್ಯ ಮಾಡುತ್ತೀರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ ಬೀದರ್ ವಿಭಾಗದಲ್ಲಿ ಒಟ್ಟು ಕಿರಿಯ ಸಹಾಯಕ ಹುದ್ದೆಗಳು 10 ಖಾಲಿ ಇದೆ. ಆದರೂ ಸಹ ನೇಮಕಾತಿ ಮಾಡಿಕೊಳ್ಳದೇ ಕಿರಿಯ ಸಹಾಯಕ ಹುದ್ದೆ ಬಿಟ್ಟು ಬೇರೆ ಹುದ್ದೆ ನಿರ್ವಹಿಸಲು ಕೌನ್ಸಿಲಿಂಗ್ ಮಾಡುತ್ತೀರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಅಲ್ಲದೆ ಇದು ಸಂಸ್ಥೆಯ ಎಂಡಿ ಅವರ ಗಮನಕ್ಕೆ ಈ ಅಧಿಕಾರಿಗಳು ತಂಲದಿಲ್ಲವೇ ಅಥವಾ ಎಂಡಿ ಗೊತ್ತಿದ್ದು ಆ 10 ಹುದ್ದೆಗಳನ್ನು ಹಾಗೆ ಖಾಲಿ ಬಿಡಿಸಿ ಬೇರೆ ಹುದ್ದೆಗೆ ನೇಮಕ ಮಾಡಲು ಹೇಳಿದ್ದಾರೆ. ಹೀಗೆ ಹತ್ತು ಹಲವು ಪ್ರಶ್ನೆಗಳು ಹಾಗೂ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಬೀದರ್ ವಿಬಾಘದ ಅಧಿಕಾರಿಗಳ ನಡೆ.
ಜತೆಗೆ ಇನ್ನು ನೋಡಿದರೆ ಆಡಳಿತದಲ್ಲಿ ಕೊರತೆ ಇದ್ದರು ಸುಧಾರಣೆ ಮಾಡಿಕೊಳ್ಳುವ ಇಚ್ಛಾ ಶಕ್ತಿ ಸರ್ಕಾರಕ್ಕೆ ಇಲ್ಲವೇ ಅಥವಾ ನಿಗಮಕ್ಕೆ ಇಲ್ಲವೇ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಕಾರಣ ಅನುಕಂಪದ ಆಧಾರದ ಮೇಲೆ ಕಿರಿಯ ಸಹಾಯಕ ಹುದ್ದೆಗಳಿಗೆ ನೇಮಕಾತಿಯಲ್ಲಿ ವಿಭಾಗಗಳಿಂದ ವಿಭಾಗಕ್ಕೆ ಈ ತಾರತಮ್ಯ ಎಸಗುತ್ತಿರುವುದು ಏಕೆ? ಇನ್ನಾದರು ಇದನ್ನು ಬಿಟ್ಟು ಸಮಾನತೆ ಕಾಪಾಡಬೇಕೆಂದು ಮೃತ ನೌಕರರ ಕುಟುಂಬದವರು ಆಗ್ರಹಿಸಿದ್ದಾರೆ.

Related

 








