NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್‌ದೋಶ್‌ ಬೇಗಂ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ ಫಿರ್‌ದೋಶ್‌ ಬೇಗಂ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಫಿರ್‌ದೋಶ್‌ ಬೇಗಂ ಅವರು ಕುಕನೂರು ಪಟ್ಟಣಪಂಚಾಯಿತಿ ವಾರ್ಡ್ ನಂ. 15, ವಿನೋಭಾನಗರದ ಮಹಿಳಾ ಸದಸ್ಯರಾಗಿದ್ದು ಸಾರಿಗೆ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿ ಮೇ 28ರಂದು ಕುಕನೂರಿನಿಂದ ಬೆಂಗಳೂರಿನ ವಿಧಾನಸೌಧದ ವರೆಗೂ ಬಂದು ಸಿಎಂ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇದು ಸಾರಿಗೆ ನೌಕರರು ಕಳೆದ 2020ರಿಂದ ಈವರೆಗೂ  ವೇತನ ಹೆಚ್ಚಳವಿಲ್ಲದೆ, ಇನ್ನು ಹೆಚ್ಚಳವಾದ ಶೇ.15ರಷ್ಟು ವೇತನದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ಪಡೆಯದೆ ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು 17 ತಿಂಗಳುಗಳು ಕಳೆದರೂ ಮಾಡದೆ ಸರ್ಕಾರ ಮೀನಮೇಷ ಎಣಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಈ ಬಗ್ಗೆ ಕಾಳಜಿ ವಹಿಸಿ ಹಗಲಿರುಳೆನ್ನದೆ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುವ ಸಾರಿಗೆ ನೌಕರರಿಗೆ ಸಿಗಬೇಕಿರುವ ನ್ಯಾಯಯುತ ಸೌಲಭ್ಯಗಳನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿರುವ ಫಿರ್‌ದೋಶ್‌ ಬೇಗಂ ಅವರು, ಘನ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದ ಸರ್ಕಾರದ ಯಶಸ್ವಿಗೆ ಕಾರಣರಾದ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಿಸುವಲ್ಲಿ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹಲವಾರು ಬಾರಿ ನೌಕರರ ಪರ ಸಂಘಟನೆಗಳು, ರಾಜಕಾರಣಿಗಳು, ಶಾಸಕರು ಸಂಸದರೂ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಜಿಪಂ, ತಾಪಂ ಸದಸ್ಯರು ಹಾಗೂ ಅಧ್ಯಕ್ಷರು ಸೇರಿದಂತೆ ವಿಪಕ್ಷದ ನಾಯಕರು ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಿ ಎಂದು ಒತ್ತಾಯ ಮಾಡಿದರೂ ಕೂಡ ತಾವು ಕಾಳಜಿ ವಹಿಸಿಲ್ಲದಿರುವುದು ಬಾರಿ ನೋವಿನ ಸಂಗತಿ ಎಂದು ಅಸಮಾಧಾನ ವ್ಯಾಕ್ತಪಡಿಸಿದ್ದಾರೆ.

ಇದರ ನಡುವೆ ಸಾರಿಗೆ ನೌಕರರು, ಸಂಘಟನೆಗಳು, ಪ್ರಜಾ ಪ್ರತಿನಿಧಿಗಳು ಅನೇಕ ರೀತಿಯ ಹೊರಾಟಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಸರ್ಕಾರದ ಗಮನಸೆಳೆದರು ಕೂಡ ನೀವು ಸ್ಪಂದಿಸಿಲ್ಲ. ಹೀಗಾಗಿ ವಿಳಂಬವಿಲ್ಲದಂತೆ ಕೂಡಲೇ ಸಾರಿಗೆ ನೌಕರರಿಗೆ 2024ರ ವೇತನ ಹೆಚ್ಚಳ ಹಾಗೂ 2020ರ 38 ತಿಂಗಳ ವೇತನ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಿ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸಾರಿಗೆ ನೌಕರರು ಹೋರಾಟ ಮಾಡುವುದಕ್ಕೆ ಇದುವರೇಗೂ ಪ್ರಯತ್ನಿಸುತ್ತಿದ್ದಾರೆ.  ಈ ನೌಕರರಿಗೆ 01-01-2020 ರಿಂದ ವೇತನ ಹೆಚ್ಚಳವಾಗಿದ್ದು ಅದರ ಒಟ್ಟು 38 ತಿಂಗಳ ಬಾಕಿ, ನಂತರ 01-01-2024 ರಿಂದ ವೇತನ ಹೆಚ್ಳವಾಗಬೇಕಿದ್ದು, 17 ತಿಂಗಳು ಕಳೆದರು ಸರ್ಕಾರ ಸಿಬ್ಬಂದಿಗಳ ವೇತನ ಹೆಚ್ಚಳ ಮಾಡುವಲ್ಲಿ ವಿಳಂಬ ಮಾಡುತ್ತಿದೆ.

ಕಾರಣ ಫಿರ್‌ದೋಶ್‌ ಬೇಗಂ ಗಂ. ವಾಹೀದ್ ಪಾಷಾ ಖಾಜಿ ಸದಸ್ಯರು (ಕೌನ್ಸಲರ್) ಪಟ್ಟಣ ಪಂಚಾಯತಿ ಕುಕನೂರು ಆದ ನಾನು ಸಮಸ್ತ ಸಾರಿಗೆ ನೌಕರರ ಪರವಾಗಿ ಘನ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಸರ್ಕಾರ ಕೂಡಲೇ ಈ ಕುರಿತು ಸ್ಪಂದಿಸುವುದಾಗಿ ನಂಬಿಕೆ ಇಟ್ಟುಕೊಂಡಿರುತ್ತೇನೆ. ಸಾರಿಗೆ ನೌಕರರ ವೇತನ ಹೆಚ್ಚಳ ಈ ಕೂಡಲೆ ಮಾಡಿಕೋಡಬೇಕೆಂದು ವಿನಂತಿಸುತ್ತಿದ್ದೇನೆ ಎಂದು ಮೇ 28ರಂದು ಮನವಿ ಮತ್ರ ಸಲ್ಲಿಸಿದ್ದಾರೆ.

Megha
the authorMegha

Leave a Reply

error: Content is protected !!