Please assign a menu to the primary menu location under menu

NEWSಆರೋಗ್ಯನಮ್ಮರಾಜ್ಯ

KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ನಗದು ರಹಿತ ಚಿಕಿತ್ಸೆಗಾಗಿ ಅವಶ್ಯಕವಿರುವ ಸಿಬ್ಬಂದಿಗಳ ವೈಯಕ್ತಿಕ ಹಾಗೂ ಅವರ ಅವಲಂಬಿತರ ಮಾಹಿತಿಯನ್ನು ಸಂಗ್ರಹಿಸಿ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ಅಧಿಕಾರಿಗಳಿಗೆ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಆದೇಶಿಸಿದ್ದಾರೆ.

ಈ ಸಂಬಂಧ ಸಂಸ್ಥೆಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾಂಶುಪಾಲರು, ಕಾರ್ಯ ನಿರ್ವಾಹಕ ಅಭಿಯಂತರರಿಗೆ ಅತೀ ಜರೂರು ಮಾಹಿತಿಯೊಂದನ್ನು ಸಂಸ್ಥೆಯ ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ ಇಂದು ಡಿ.20ರಂದು ಹೊರಡಿಸಿದೆ.

ನಿಗಮದ ಎಲ್ಲ ಅಧಿಕಾರಿಗಳ ಗಮನಕ್ಕೆ ತರಬಯಸುವುದೇನೆಂದರೆ 19.12.2024 ರಂದು ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರ ಆದೇಶದಂತೆ ವಿಡಿಯೋ ಸಂವಾದನದಲ್ಲಿ ವಿವರವಾಗಿ ಚರ್ಚಿಸಿದಂತೆ ನಿಗಮದ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೀದರ, ಕಲಬುರಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರುನಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಹಾಗೂ ವಿಜಯಪುರ, ಹೊಸಪೇಟೆಗಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ಜತೆಯಲ್ಲಿ ನಗದು ರಹಿತ ಒಡಂಬಡಿಕೆಯನ್ನು ಮಾಡಿಕೊಳ್ಳಲು ಉಲ್ಲೇಖಿತ ಪತ್ರದನ್ವಯ ತಮ್ಮಗೆ ಈಗಾಗಲೇ ಸೂಚಿಸಲಾಗಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ನಿಗಮದ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ನಿಗಮವು ಗುರುತಿಸುವ ಎಲ್ಲ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಗಾಗಿ ಕ್ರಮಹಿಸಲು ತುರ್ತು ಮತ್ತು ಅವಶ್ಯಕ ವಾಗಿರುವುದರಿಂದ ನಿಗಮದಲ್ಲಿ ಕಾರ್ಯಾ ನಿರ್ವಹಿಸುವ ನೌಕರರು ಮತ್ತು ಅವಲಂಬಿತರ ಮಾಹಿತಿಯನ್ನು ಪಡೆದು ಕ್ರಮವಹಿಸ ಬೇಕಾಗಿದೆ.

ಆದರಂತೆ ಎಲ್ಲ ವಿಭಾಗಗಳ ವಿಭಾಗೀಯ ಕಚೇರಿ/ ಘಟಕ/ ಕಾರ್ಯಾಗಾರ/ ತರಬೇತಿ ಕೇಂದ್ರ/ ಯುನಿಟ್‌ಗಳಲ್ಲಿ ಒಬ್ಬ ಸಿಬ್ಬಂದಿ ಮೇಲ್ವಿಚಾರಕರ/ ಸಹಾಯಕ ಅವರನ್ನು ನೇಮಿಸಿ ನಗದು ರಹಿತ ಚಿಕಿತ್ಸೆಯನ್ನು ನೀಡಲು ಅವಶ್ಯವಿರುವ ಸಿಬ್ಬಂದಿಗಳ ವ್ಯಯಕ್ತಿಕ ಮಾಹಿತಿಯು ತಂತ್ರಾಂಶದಲ್ಲಿ ನಮೂದಿಸಲು ಈ ಕೆಳಕಂಡ ದಾಖಲೆಗಳನ್ನು ಕ್ರೂಡೀಕರಿಸಲು ಸೂಚಿಸಬೇಕು.

ಯಾವಯಾವ  ದಾಖಲೆಗಳನ್ನು ಕ್ರೂಡೀಕರಿಸಬೇಕು: i. ಸಿಬ್ಬಂದಿಯ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರುಗಳ ಆಧಾರ್‌ ನಕಲು ಪ್ರತಿ.
ii. ಸಿಬ್ಬಂದಿಯ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರುಗಳ ಕೌಟಂಬಿಕ ಭಾವ ಚಿತ್ರ.
iii. ಸಿಬ್ಬಂದಿಯವರ ಅವಲಂಬಿತ ಕುಟುಂಬ ಸದಸ್ಯರುಗಳ (ತಂದೆ-ತಾಯಿ) ಆದಾಯ ಪ್ರಮಾಣ ಪತ್ರ (ಪ್ರಸ್ತುತ).

iv. ಸಿಬ್ಬಂದಿಯವರಿಂದ ಕುಟುಂಬದ ಸದಸ್ಯರುಗಳ ಸ್ವಯಂ ದೃಢೀಕರಣ ಪತ್ರ.
v. ಸಿಬ್ಬಂದಿಯವರ ದೂರವಾಣಿ ಸಂಖ್ಯೆ ಹಾಗೂ ಭವಿಷ್ಯ ನಿಧಿ ಸಂಖ್ಯೆ.
vi. ಸಿಬ್ಬಂದಿಯವರ ಪ್ರಸ್ತುತ ವೇತನ ಪಟ್ಟಿ.

ಈ ಎಲ್ಲವನ್ನು ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯವರಿಗೆ ನಗದು ರಹಿತ ಚಿಕಿತ್ಸೆಯ ಕುರಿತು ವ್ಯಯಕ್ತಿಕ ಹಾಗೂ ಕುಟುಂಬದ ಮಾಹಿತಿಯನ್ನು ನೀಡುವುದು ಅವಶ್ಯಕವೆಂದು ಬ್ಯಾನರ್‌ಗಳನ್ನು ಪ್ರದರ್ಶಿಸಿ ಘಟಕ ವ್ಯಸ್ಥಾಪಕರು/ವಿಭಾಗದ ಅಧಿಕಾರಿಗಳು ಸಿಬ್ಬಂದಿಯವರಿಗೆ ಸೂಕ್ತ ತಿಳಿವಳಿಕೆ ನೀಡಿ ಅಗತ್ಯ ಕ್ರಮವಹಿಸಲು ಈ ಮೂಲಕ ಸೂಚಿಸಲಾಗಿದೆ.

Leave a Reply

error: Content is protected !!
LATEST
ಜ.6ರಿಂದ KSRTC ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ: ನಿರ್ದೇಶಕರ ಆದೇಶ ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ ಡಿ.31ರಂದು ಜಗಜಿತ್ ಸಿಂಗ್ ದಲೈವಾಲರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪಂಜಿನ ಪ್ರತಿಭಟನಾ ಮೆರವಣಿಗೆ KSRTC: ಸಾರಿಗೆ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಿದ ಜಂಟಿ ಕ್ರಿಯಾ ಸಮಿತಿ ಇಂದು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ತುರ್ತು ಸಭೆ ಕರೆದ ಸಿಎಂ KSRTC ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರ ತಡೆಯಲು ಮುಂದಾದ ಸರ್ಕಾರ? NWKRTC: ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ- ಹುಬ್ಬಳ್ಳಿ ಸಾರಿಗೆ ನೌಕರರ ಒಕ್ಕೂಟ NWKRTC: ಬಸ್‌-ಕಾರು ನಡುವೆ ಅಪಘಾತ - ಮಹಿಳೆ ಮೃತ, ಇಂಜಿನಿಯರ್‌ಗೆ ಗಾಯ ದೆಹಲಿ ರೈತರ ಹೋರಾಟ ಬೆಂಬಲಿಸಿ ಬನ್ನೂರಿನಲ್ಲಿ ರೈತರು- ರೈತ ಮುಖಂಡರ ಪ್ರತಿಭಟನೆ KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು