CRIMENEWSನಮ್ಮಜಿಲ್ಲೆ

KKRTC: ಬೈಕ್‌ಗೆ ಸೈಡ್‌ ಬಿಡಲಿಲ್ಲ ಅಂತ ಕಿಡಿಗೇಡಿಗಳಿಂದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ- ಚಾಲಕನ ಸ್ಥಿತಿ ಗಂಭೀರ

ವಿಜಯಪಥ ಸಮಗ್ರ ಸುದ್ದಿ

ಭಾಲ್ಕಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕನಿಗೆ ಬೈಕ್‌ ಸವಾರ ಮಾರಣಂತಿಕ ಹಲ್ಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಭಾಲ್ಕಿ ಬೀರಿ ಗ್ರಾಮ ರೂಟಲ್ಲಿ ಜರುಗಿದ್ದು ಹಲ್ಲೆಗೊಳಗಾದ ಚಾಲಕನ ಸ್ಥಿತಿ ಗಂಭಿರಾವಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ- ಬೀರಿ ಗ್ರಾಮದ ರೂಟಲ್ಲಿ ಬಸ್‌ ಚಲಿಸುತ್ತಿದ್ದಾಗ ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂದು ಕೋಪಗೊಂಡ ಇದೇ ಬೀರಿ ಗ್ರಾಮದ ನಿವಾಸಿಗಳಾದ ಇಬ್ಬರು ಬೈಕ್‌ ಸವಾರರು ಬಸ್‌ ಚಾಲಕ ಚಂದ್ರಶೇಖರ್‌ಸ್ವಾಮಿ ಅವರ ಮೇಲೆ ಮನಬಂದಂತೆ ಹಲ್ಲೆಮಾಡಿ  ಪರಾಗಿದ್ದಾರೆ.

ಈ ಕಿಡಿಗೇಡಿ ಬೈಕ್‌ ಸವಾರರ ಹಲ್ಲೆಯಿಂದ ಮೂರ್ಛೆ ಹೋಗಿದ್ದ ಚಾಲಕ ಚಂದ್ರಶೇಖರ್‌ಸ್ವಾಮಿ ಅವರನ್ನು ಕೂಡಲೇ ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ.

ಮಾರಣಂತಿಕ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಇತ್ತ ವಿಷಯ ತಿಳಿಯುತ್ತಿದ್ದಂತೆ ಕೆಕೆಆರ್‌ಟಿಸಿ ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭಾಲ್ಕಿ ಘಟಕದ ಘಟಕ ವ್ಯವಸ್ಥಾಪಕರು ಸೇರಿದಂತೆ ಇತರ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ.

ಅಲ್ಲದೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದಾಗಿಯು ತಿಳಿಸಿದ್ದು, ಮುಂದೆ ನಮ್ಮ ಚಾಲನಾ ಸಿಬ್ಬಂದಿಗಳ ಮೇಲೆ ಈ ರೀತಿ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ ಎಂದ ಅವರು, ಸಾರ್ವಜನಿಕ ಸೇವೆಯಲ್ಲಿರುವ ನಮ್ಮ ನೌಕರರ ಮೇಲೆ ಹಲ್ಲೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಜತೆಗೆ ನಮ್ಮ ಚಾಲಕರು ತಪ್ಪು ಮಾಡಿದರೆ ನಮಗೆ ದೂರುಕೊಡಿ ನಾವು ಆ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದರೆ ಅಂತ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅದನ್ನು ಬಿಟ್ಟು ಈ ರೀತಿ ಮಾಡುವುದರಿಂದ ಜೀವಹಾನಿಯಾದರೆ ಅವರ ಕುಟುಂಬಕ್ಕೆ ಯಾರಾಗುತ್ತಾರೆ. ಅಲ್ಲದೆ ಇದು ಕಾನೂನು ಪ್ರಕಾರ ಭಾರಿ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಸಾರಿಗೆ ಬಸ್‌ ಚಾಲನಾ ಸಿಬ್ಬಂದಿ ಎಂದರೆ ಇಂಥ ಕಿಡಿಗೇಡಿಗಳಿಗೆ ಯಾವುದೆ ಭಯವಿಲ್ಲದ ಪರಿಸ್ಥಿತಿ ಇರುವುದರಿಂದ ಜತೆಗೆ ಸಾರಿಗೆ ಅಧಿಕಾರಿಗಳು ಕೂಡ ತಮ್ಮ ನೌಕರರ ಮೇಲೆ ಆಗುವ ಹಲ್ಲೆ ಸಂಬಂಧ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ನೌಕರರದೆ ತಪ್ಪು ಎಂಬರೀತಿ  ವರ್ತಿಸುತ್ತಿರುವುಉ ಹೆಚ್ಚಾಗಿರುವುದರಿಂದ ಪುಂಡರು ಹಲ್ಲೆ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಇನ್ನು ಮುಂದೆ ಈರೀತಿ ಘಟನೆಗಳು ಆಗದಂತೆ ಅಧಿಕಾರಿಗಳು ಕೂಡ ಹಲ್ಲೆಕೋರರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು ಎಂಬ ಒತ್ತಾಯವನ್ನು ಚಾಲನಾ ಸಿಬ್ಬಂದಿಗಳು ಮಾಡಿದ್ದಾರೆ.

ಚಾಲಕರ ಮೇಲೆ ಡ್ಯೂಟಿಯಲ್ಲಿದ್ದಾಗ ಹಲ್ಲೆಯಾದರೆ ಅಧಿಕಾರು ಖುದ್ದು ಮುಂದೆ ನಿಂತು ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು ಅದನ್ನು ಬಿಟ್ಟು ಹಲ್ಲೆಗೊಳಗಾದವರ ಕುಟುಂಬ ಸದಸ್ಯರು ಬಂದು ಅಥವಾ ಹಲ್ಲೆಗೊಳದ ನೌಕರರೇ ಚಿಕಿತ್ಸೆ ಪಡೆದ ಬಳಿಕ ಪೊಲೀಸ್‌ ಠಾಣೆಗೆ ಹೋಗಿ   ದೂರು ನೀಡುವವರೆಗೂ ಸಾರಿಗೆ ಅಧಿಕಾರಿಗಳು ಕಾನೂನಾತ್ಮಕವಾಗಿ ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲವಾದ್ದರಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇವೆ ಎಂಬ ಆರೋಪ ಕೇಳಿ ಬಂದಿದೆ.

ಹಲ್ಲೆಕೋರರ ವಿರುದ್ಧ ಈಗಾಗಲೇ ಭಾಲ್ಕಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Deva
the authorDeva

Leave a Reply

error: Content is protected !!
Latest news
KKRTC: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್‌ ಪಲ್ಟಿ- 8ಮಂದಿಗೆ ಗಾಯ BMTC: ಘಟಕ 22ರಲ್ಲಿ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಬಸ್‌ ಚಲಿಸಿ ಸಂಚಾರ ನಿಯಂತ್ರಕರ ಕಚೇರಿ, ಬೈಕ್‌ಗಳಿಗೆ ಡಿಕ್... KSRTCಶಿರಾ: ಬರಗೂರು ಸಮೀಪ ಬಸ್‌ಗೆ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು ಬೆಂಗಳೂರಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರಿ ಬಸ್‌ ಬ್ರೇಕ್ ಫೇಲಾಗಿ ಬೈಕ್, ಪಿಕಪ್ ವ್ಯಾನ್‌ಗೆ ಡಿಕ್ಕಿ: ಗರ್ಭಿಣಿ, ಮಗು ಸೇರಿ ಎಂಟು ಮಂದಿ ಸಾವು BMTC: ಕುಡಿದು ಬಸ್‌ ಚಾಲನೆ – ಪ್ರಶ್ನಿಸಿದ ಮಹಿಳೆ ಜತೆ ಚಾಲಕನ ರಂಪಾಟ ಆರೋಪ ನೌಕರರ ವರ್ಗಾವಣೆ ವಿಚಾರದಲ್ಲಿ ಸಿಎಂಒ ನೇರ ಹಸ್ತಕ್ಷೇಪಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ಮಾಜಿ ಪ್ರಧಾನಿ ಎಚ್‌ಡಿಡಿ ಸಹೋದರಿ ಜವರಮ್ಮ ನಿಧನ ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲದು: ಕುರುಬೂರು SSLC ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ ಸಿಎಂ