CRIMENEWSVideos

KKRTC: ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ವಿದ್ಯಾರ್ಥಿಗೆ ಬುದ್ಧಿ ಹೇಳಲು ಹೋದ ಚಾಲಕನ ಮೇಲೆಯೇ ಮನಬಂದಂತೆ ಹಲ್ಲೆ- ಮೂರ್ಚೆ ಹೋದ ಚಾಲಕ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಮನೆ ಸಮೀಪ ಬಸ್‌ ಬರುತ್ತಿದ್ದಂತೆ ಚಲಿಸುತ್ತಿದ್ದ ಬಸ್‌ನಿಂದ ಜಂಪ್‌ ಮಾಡಿದ್ದಕ್ಕೆ ಬಸ್‌ನಿಲ್ಲಿಸಿ ಬುದ್ಧಿ ಹೇಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲನಿಗೆ ಮೂರ್ಚೆ ಹೋಗುವ ರೀತಿಯಲ್ಲಿ ವಿದ್ಯಾರ್ಥಿಯ 7-8 ಮಂದಿ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ನಗರದ ಚಿಕ್ಕಪೇಟ್ ಬಳಿ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್‌ ವಿಭಾಗದ ಬೀದರ್‌ 1ನೇ ಘಟಕದ ಚಾಲಕ ಉಮೇಶ್‌ ಹಲ್ಲೆಗೊಳಗಾಗಿ ಮೂರ್ಚೆ ಹೋದ ಚಾಲಕ. ಸದ್ಯ ಸಹೋದ್ಯೋಗಿ ನಿರ್ವಾಹಕ ವಿಜಯಕುಮಾರ್‌ ಅವರು ಉಮೇಶ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಲಿಸುತ್ತಿದ್ದ ಬಸ್‌ ಮನೆ ಸಮೀಪ ಬಂದಿದೆ ಎಂದು ತಿಳಿದ ಕೂಡಲೇ ಜಂಪ್‌ ಮಾಡಿದ್ದು ವಿದ್ಯಾರ್ಥಿ. ಆತನಿಗೆ ಬುದ್ಧಿ ಹೇಳಬೇಕಾದವರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಎಂಥಾ ಅನ್ಯಾಯ ನೋಡಿ. ಆ ಹುಡುಗನ ಕಡೆಯ ಜನರೇ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಅಲ್ಲದೆ ನಂತರ ಅವರೇ ಚಾಲಕ ಮೇಲೆ ದೂರು ಕೊಡುತ್ತಾರೆ ಎಂದರೆ ನ್ಯಾಯ ಎಲ್ಲಿದೆ?

ಇತ್ತ ಚಾಲಕ ಕೂಡ ಎಫ್‌ಐಆರ್‌ ದಾಖಲಿಸಿದ್ದಾರೆ. ಇದು ಜು.7ರಂದು ನಡೆದಿರುವ ಘಟನೆ ಆದರೆ ಎಫ್‌ಐಆರ್‌ ಆಗಿರುವುದು ಜು.11ರಂದು. ಅಂದು ಹುಡುಗ ಹುಚ್ಚಾಟ ಮಾಡಿ ಚಲಿಸುವ ಬಸ್ಸಿನಿಂದ ಅವನ ಮನೆಯ ಹತ್ತಿರವೇ ಜಿಗಿದ. ( ಅದೃಷ್ಟ, ಅಲ್ಲಿ ಹಂಪ್ ಇದ್ದ ಕಾರಣ ಬಸ್ ಸ್ಲೋ ಇತ್ತು. ಈ ವೇಳೆ ಹುಡುಗನ ತಲೆಗೆ ಅಲ್ಪ ಮಟ್ಟಿಗೆ ಪೆಟ್‌ಕೂಡ ಆಗಿದೆ) ನಂತರದಲ್ಲಿ ಆ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಚಾಲಕ ಬಂದು ಹುಡುಗನಿಗೆ ಈ ತರಹ ಮಾಡಿದಿಯಲ್ಲ ನಿನಗೆ ಏನಾದರೂ ಅನಾಹುತವಾಗಿದ್ದರೆ ನನ್ನ ಕೆಲಸವೂ ಹೋಗುತ್ತಿತ್ತು. ಇದಕ್ಕೆ ಯಾರು ಜವಾಬ್ದಾರಿ ಎಂದು ಗದರಿಸಿದ್ದಾರೆ. ಆ ವೇಳೆ ವಿದ್ಯಾರ್ಥಿಯ ಕುಟುಂಬದವರು ಜತೆಗೆ ಅಕ್ಕಪಕ್ಕದವರು ಸೇರಿಕೊಂಡು ಚಾಲಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಹಲ್ಲೆಗೊಳಗಾದ ಚಾಲಕ ಉಮೇಶ್‌ನನ್ನು ನಿರ್ವಾಹಕ ವಿಜಯಕುಮಾರ್‌ ಚಿಕಿತ್ಸೆಗಾಗಿ ಔರಾದ ಕಡೆಯಿಂದ ಬರುತ್ತಿದ್ದ ಬಸ್‌ ತಡೆದು ನಿಲ್ಲಿಸಿ ಆ ಬಸ್‌ನಲ್ಲೇ ಮಲಗಿಸಿಕೊಂಡು ಬೀದರ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ ವಾಸು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ 5 ದಿನಗಳ ವರೆಗೆ ಚಿಕಿತ್ಸೆ ಬಡೆದು ಬಳಿಕ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಚಾಲಕ ಉಮೇಶ್‌.

ಈ ನಡುವೆ ವಾಸ್ತವ ಸಂಗತಿಯನ್ನು ಬಚ್ಚಿಟ್ಟು ಮಕ್ಕಳ ಆಯೋಗಕ್ಕೆ ವಿದ್ಯಾರ್ಥಿಯ ಕಡೆಯವರು ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್‌ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಟ್ಟಾರೆ ಶಕ್ತಿ ಯೋಜನೆ ಬಂದಮೇಲೆ ನೂರಾರು ಜನರನ್ನು ಹಗಲಿರುಳು ಬಂದೆಡೆಯಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಲು ಚಾಲನಾ ಸಿಬ್ಬಂದಿಗಳು ಪರದಾಡುತ್ತಿರುವ ಪರಿಸ್ಥಿತಿ ತಮಗೂ ಪ್ರತಿಯೊಬ್ಬರಿಗೂ ಗೊತ್ತಿದೆ. ಇಂಥದರಲ್ಲಿ ಹೇಳದೇ ಕೇಳದೆ ಒಂದೇ ಸಮನೆ ಬಸ್ಸಿಂದ ಜಿಗಿದಾಗ ಅನಾಹುತವಾದಲ್ಲಿ ಮಾಡದ ತಪ್ಪಿನಿಂದ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲು ಹೋದ ಚಾಲಕನಿಗೆಅದು ಸಮವಸ್ತ್ರದ ಮೇಲಿರುವ ಸಾರ್ವಜನಿಕ ಸೇವಕನಿಗೆ ಆ ವಿದ್ಯಾರ್ಥಿಯ ಕುಟುಂಬದವರು ಈ ರೀತಿ ಥಳಿಸಿರುವುದು ನ್ಯಾಯವೇ?

ಇದಕ್ಕೆ ಆರಕ್ಷಕರು ಕೂಡ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕು ಎಂದು ಬೀದರ್‌ ವಿಭಾಗದ ಸಾರಿಗೆ ಅಧಿಕಾರಿಗಳು/ ನೌಕರರು ಒತ್ತಾಯ ಮಾಡಿದ್ದು, ಪೊಲೀಸರಿಂದ ನಮಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

Megha
the authorMegha

Leave a Reply

error: Content is protected !!