KKRTC ನೌಕರನ ಪುತ್ರನ IFS ಸಾಧನೆ: ₹1 ಲಕ್ಷ ಪ್ರೋತ್ಸಾಹ ಧನ-ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕಲಬುರಗಿ: ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುವ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕ ಬಸಪ್ಪ ಅವರ ಪುತ್ರ ಆನಂದಕುಮಾರ ಅವರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಒಂದು ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಅಭಿನಂದನಾ ಪತ್ರ ನೀಡಿ ಇಂದು ಸನ್ಮಾನಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಕಲಬುರಗಿಯಲ್ಲಿ ಆನಂದಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ನಮ್ಮ ಸಾರಿಗೆ ಸಿಬ್ಬಂದಿಗಳ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನೌಕರರ ಮಕ್ಕಳಿಗಾಗಿ ಸಾರಿಗೆ ವಿದ್ಯಾ ಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಐದರಿಂದ ಹತ್ತು ಪಟ್ಟು ಹೆಚ್ಚಳ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದ ಸಚಿವರು, ಆನಂದ ಕುಮಾರ ಅವರು ಭಾರತೀಯ ಆಡಳಿತ ಸೇವೆ(IAS) ಅಥವಾ ಭಾರತೀಯ ವಿದೇಶಾಂಗ ಸೇವೆ ( IFS)ಗೆ ತಯಾರಿ ನಡೆಸಲು ಸಲಹೆ ನೀಡಿದರು. ಜತೆಗೆ ನಿಮ್ಮ ಈ ಸಾಧನೆಯಿಂದ ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ರಾಜ್ಯಕ್ಕೆ ಇನ್ನಷ್ಟು ಕೀರ್ತಿ ತನ್ನಿ ಎಂದು ಆಶಿಸಿದರು.
ಇನ್ನು ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕ ಬಸಪ್ಪ ಮತ್ತು ತಾಯಿ ನಾಗರತ್ನ ಅವರ ಪುತ್ರ ಆನಂದಕುಮಾರ ಅವರು ಐಎಫ್ಎಸ್ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹೇಳಿದರು.
ಆನಂದ ಕುಮಾರ ಅವರು ಪದವಿಯನ್ನು ಬಿ.ಎಸ್ಸಿ (ಅಗ್ರಿ) – ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿ, ಯು.ಪಿ.ಎಸ್.ಸಿ – ಐ.ಎಫ್.ಎಸ್. ನಲ್ಲಿ 41 ನೇ ರ್ಯಾಂಕ್ ನೊಂದಿಗೆ ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ. ಅವರ ಐಎಫ್ಎಸ್ನ ಈ ಸಾಧನೆಯು ಕುಟುಂಬಕ್ಕೂ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ಕೀರ್ತಿ ತಂದಿದೆ ಎಂದು ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಶ್ಲಾಘಿಸಿದರು.
ಅಭಿನಂದನಾ ಸಮಾರಂಭದಲ್ಲಿ ಆನಂದ್ ಕುಮಾರ್ ಅವರ ಪರಿವಾರದವರು ಹಾಗೂ ಸಂಸ್ಥೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...