ದುಃಖದಲ್ಲೂ ಕೂಡ ಸ್ವಲ್ಪ ಸಮಾಧಾನ ಪಡಬೇಕು ಯಾಕೆಂದ್ರೆ. ಮಾಜಿ ಸಾರಿಗೆ ಸಚಿವರಾದ ಶ್ರೀರಾಮುಲು ಅವರು ಅಪಘಾತದಲ್ಲಿ ಮೃತರಾದ ಚಾಲಕರ ಮನೆಗೆ ಭೇಟಿನೀಡಿ ಸಂತ್ವಾನ ಹೇಳಿದ್ದು.! ಚುನಾವಣೆಯಲ್ಲಿ ಸೋತ ನಂತರ ಇವರಿಗೆ ಸ್ವಲ್ಪ ಪುರುಸೊತ್ತು ಸಿಕ್ಕಿದೆ ಅಂತಾ ನನಗೆ ಅನಿಸುತ್ತೆ.
ತನ್ನ ಅಧಿಕಾರ ಅವಧಿಯಲ್ಲಿ ನೌಕರರಿಗೆ ಬರಿ ಸುಳ್ಳು ಆಶ್ವಾಸನೆ ನೀಡುತ್ತಾ ನೌಕರರನ್ನು ಮೂರ್ಖರನ್ನಾಗಿಸಿ ನಂತರ ಇದೆ ನೌಕರರ ನೋವಿನ ಪ್ರತಿಫಲದಿಂದಾಗಿ ಚುನಾವಣೆಯಲ್ಲಿ ಸೋತು ಈಗ ಮೊಸಳೆ ಕಣ್ಣೀರು ಸುರಿಸಲು ಬಂದಿದ್ದಾರೆ.
ತಾವು ಅಧಿಕಾರದಲ್ಲಿದ್ದಾಗ ಅಧಿಕಾರಿಗಳ ಕಿರುಕುಳದಿಂದ ಹಲವಾರು ನೌಕರರು ಆತ್ಮಹತ್ಯೆ ಮಾಡಿಕೊಂಡರು. (ಒಂದೇ ದಿನ ಮೂರು ನೌಕರರು ಆತ್ಮಹತ್ಯೆ ಮಾಡುಕೊಂಡರು )ತಾವು ಸೌಜನ್ಯಕ್ಕೂ ಆ ವೇಳೆ ಭೇಟಿನೀಡಿಲ್ಲ.! ಒಂದೇ ಒಂದು ಸಂತ್ವಾನದ ಮಾತು ಹೇಳಿಲ್ಲ.!
ಆತ್ಮಹತ್ಯೆಮಾಡಿಕೊಂಡ ನೌಕರನ ಶವವನ್ನು ಡಿಪೋದಲ್ಲಿ ಇರಿಸಿ ಪ್ರತಿಭಟನೆ ಮಾಡಿದರೂ ಬರಲೇ ಇಲ್ಲ.!
ಈಗ ಬಂದಿದ್ದೀರಿ..! ಈಗ ಬಂದು ಏನು ನ್ಯಾಯ ಕೊಡಿಸುತ್ತೀರಿ.! ಅಧಿಕಾರ ಕೈಯಲ್ಲಿದ್ದಾಗ………?
ನೆನಪಿರಲಿ (ಇತಿಹಾಸ ನೋಡಿ )ಸಾರಿಗೆ ನೌಕರರನ್ನು ನೋಯಿಸಿ ನೌಕರರನ್ನು ಕನಿಷ್ಠವಾಗಿ ನಡೆಸಿಕೊಂಡ ಹಲವು ಸಾರಿಗೆ ಸಚಿವರು ಪ್ರಸ್ತುತ ಮೂಲೆಗುಂಪಾಗಿದ್ದಾರೆ.
ಈ ಸೋಲು ಹಗಲು, ರಾತ್ರಿ, ಹಬ್ಬ ಹರಿದಿನ, ಸಾವು ನೋವು ಎಲ್ಲವನ್ನೂ ಮರೆತು ಪ್ರಾಮಾಣಿಕವಾಗಿ ಜನಸೇವೆ ಮಾಡುವ ಈ ಸಾರಿಗೆ ನೌಕರರ ಶಾಪವೇ ಹೊರತು ಬೇರೆಯೇನಿಲ್ಲ.
l ಜಯಂತ್ ಮರ್ಗಿ, ಮಾಜಿ ಸಾರಿಗೆ ನೌಕರರು