CrimeNEWSನಮ್ಮರಾಜ್ಯ

KKRTC: ತಡರಾತ್ರಿ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೋರಿದ 15ಕ್ಕೂ ಹೆಚ್ಚು ದರೋಡೆಕೋರರು- ತಪ್ಪಿದ ಭಾರಿ ಅನಾಹುತ!

ವಿಜಯಪಥ ಸಮಗ್ರ ಸುದ್ದಿ

ಹಟ್ಟಿ (ರಾಯಚೂರು): ಬೀದರ್‌ನಿಂದ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯ ರಾಯಚೂರು ಜಿಲ್ಲೆಯ ಚಿಂಚಣಿ ಸೇತುವೆ ಸಮೀಪದ ಗೋಲ್ಪಲ್ಲಿ ಬಳಿ ಸುಮಾರು 20 ಸರ್ಕಾರಿ ಬಸ್‌ಗಳು ಹಾಗೂ ಸುಮಾರು 20 ಖಾಸಗಿ ವಾಹನಗಳ ಗಾಜುಗಳನ್ನು ದರೋಡೆಕೋರರು ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ 2.30ರ ಸಮಯದಲ್ಲಿ ಜರುಗಿದೆ.

15ರಿಂದ20ಜನರಿದ್ದ ದರೋಡೆಕೋರರ ಗುಂಪು ಕತ್ತಲಿನಲ್ಲಿ ಬಸ್‌ಗಳು ಹಾಗೂ ಖಾಸಗಿ ಲಾರಿ, ಕಾರು ಹಾಗೂ ಟೆಂಪೋಗಳಿಗೆ ಕಲ್ಲು ತೂರಿದರಿಂದ ಚಾಲಕರು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಎಷ್ಟು ಮಂದಿಗೆ ಗಾಯವಾಗಿದೆ ಎಂಬ ಪಕ್ಕ ಮಾಹಿತಿ ಇನ್ನೂ ಸಿಕ್ಕಿಲ್ಲ. ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆಯ ತಲೆಗೆ ಪೆಟ್ಟಾಗಿದೆ ಎಂದು ಬಸ್‌ ಚಾಲಕರು ತಿಳಿಸಿದ್ದಾರೆ.

ಬೀದರ್‌ನಿಂದ ಬಳ್ಳಾರಿಗೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿತ್ತಾಪುರ, ಔರಾದ್‌ ಹಾಗೂ ಬೀದರ್‌ ಘಟಕ-1ರ ಬಸ್‌ಗಳ ಮುಂದಿನ ಗಾಜು ಹಾಗೂ ಪ್ರಯಾಣಿಕರ ವಿಂಡೋ ಗ್ಲಾಸ್‌ಗಳು ಸಂಪೂರ್ಣ ಜಂಖಗೊಂಡಿರುವುದರಿಂದ ಈ ಘಟಕಗಳ ಚಾಲನಾ ಸಿಬ್ಬಂದಿ ಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ: ಚಿಂಚಣಿ ಸೇತುವೆ ಸಮೀಪದ ಗೋಲ್ಪಲ್ಲಿ ಬಳಿ 15ರಿಂದ 20 ಜನರಿಂದ ಕಳ್ಳರು ಆ ಮಾರ್ಗವಾಗಿ ಬರುತ್ತಿದ್ದ ಎಲ್ಲ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ಎಚ್ಚೆತ್ತ ಚಾಲಕರು ವಾಹನಗಳನ್ನು ನಿಲ್ಲಿಸದೆ ಬಂದಿದ್ದರಿಂದ ಕಳ್ಳರು ದರೋಡೆ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ವಾಹನ ನಿಲ್ಲಿಸಿದ್ದರೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಆಭರಣ, ಹಣ ಹಾಗೂ ಜೀವ ಹಾನಿಯಾಗುತ್ತಿತ್ತು ಎಂದು ಕೆಕೆಆರ್‌ಟಿಸಿ ಸಂಸ್ಥೆಯ ಬಸ್ಸೊಂದರ ಚಾಲಕರು ವಿಜಯಪಥಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಕಳೆದ 3 ವರ್ಷಗಳ ಹಿಂದೆ ಈ ರೀತಿ ದರೋಡೆಗಳು ಇಲ್ಲಿ ಆಗುತ್ತಿದ್ದವು. ಆ ವೇಳೆ ಪೊಲೀಸರು ದರೋಡೆಕೋರರ ಹೆಡೆಮುರಿಕಟ್ಟಿದ್ದರಿಂದ ಕಳ್ಳತನ ಮಾಡುವುದು ನಿಂತುಹೋಗಿತ್ತು. ಆದರೆ, ಮತ್ತೆ ತಡರಾತ್ರಿಯಿಂದ ದರೋಡೆಕೋರರರು ಕಳ್ಳತನಕೆ ಇಳಿದಿದ್ದಾರೆ. ಇನ್ನು ಈ ಬಗ್ಗೆ ವಿಷಯ ತಿಳಿಸಿದರೂ ಪೊಲೀಸರು ಸ್ಥಳಕ್ಕೆ ಬರುವುದಕ್ಕೆ ಹೆದರಿದರು.

ಅಂದರೆ, ದರೋಡೆಕೋರರ ಅಟ್ಟಹಾಸ ಅಷ್ಟರಮಟ್ಟಿಗೆ ಈ ಭಾಗದಲ್ಲಿ ಇದೆ. ಹೀಗಾಗಿ ಸಂಬಂಧಪಟ್ಟ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ದರೋಡೆಗೆ ಇಳಿದಿರುವ ಖದೀಮರ ಹೆಡೆಮುರಿಕಟ್ಟಲು ಮುಂದಾಗಬೇಕು. ಇಲ್ಲದಿದ್ದರೆ ರಾತ್ರಿ ವೇಳೆ ಈ ಮಾರ್ಗದಲ್ಲಿ ವಾಹನಗಳು ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ವಿಷಯ ತಿಳಿದ ಬಳಿಕ ಬೆಳಗ್ಗೆ ಹಟ್ಟಿ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಕೆಕೆಆರ್‌ಟಿಸಿ ಬಸ್‌ ಚಾಲನಾ ಸಿಬ್ಬಂದಿಗಳು ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

ಇತ್ತ 15ರಿಂದ20 ಖದೀಮರ ತಂಡ ವಾಹನಗಳನ್ನು ಜಖಂಗೊಳಿಸಿರುವುದು ಭಾರಿ ಲಾಸ್‌ ಆಗಿದೆ. ಅಲ್ಲದೆ ಇದು ಮತ್ತೆ ಮತ್ತೆ ಮರುಕಳಿಸಿದರೆ ದೊಡ್ಡ ಅನಾಹುತವೆ ಆಗಬಹುದು ಎಂಬ ನಿಟ್ಟಿನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗಳು ತಂಡ ರಚಿಸಿ ಗಸ್ತುವಾಹನಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KKRTC: ತಡರಾತ್ರಿ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೋರಿದ 15ಕ್ಕೂ ಹೆಚ್ಚು ದರೋಡೆಕೋರರು- ತಪ್ಪಿದ ಭಾರಿ ಅನಾಹುತ! KSRTC: ವೇತನ ಹೆಚ್ಚಳ ಸಂಬಂಧ ಗೌಪ್ಯ ಸಭೆಗೆ ಸಜ್ಜಾದ ಅಧಿಕಾರಿಗಳು-ಸಿಬ್ಬಂದಿ ವರ್ಗ ಸಮಾಜ ಪರಿವರ್ತನೆಗೆ ದಾಸಶ್ರೇಷ್ಠ ಕನಕರ ದಾರಿಯಲ್ಲಿ ನಡೆಯೋಣ: ಸಚಿವ ಮುನಿಯಪ್ಪ ಬಸ್‌ ಪಾಸ್‌ ತೋರಿಸದೆ ನಿರ್ವಾಹಕರಿಗೆ ಅವಾಜ್‌ ಹಾಕಿ ಬಸ್‌ ನಿಲ್ಲಿಸಿ ಗಲಾಟೆ ಮಾಡಿದ ಕಿರಾತಕ ! 2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ