NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

ಕೆಕೆಆರ್‌ಟಿಸಿ: ಎಂಟ್ರಿ ಮಾಡದೇ ದರ್ಪ ತೋರಿದ್ದು ಟಿಸಿ – ಆದರೆ ಅಮಾನತು ಶಿಕ್ಷೆಕೊಟ್ಟಿದ್ದು ಚಾಲನಾ ಸಿಬ್ಬಂದಿಗೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಯಾದಗಿರಿ ವಿಭಾಗ, ಸುರಪುರ ಘಟಕದ ಚಾಲಕ ಶರಣಪ್ಪ ಎಂಬುವರನ್ನು ಇದೇ ಆ.25ರಂದು ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಾಲಕ ಶರಣಪ್ಪ ವಿರುದ್ಧ ದರ್ನಡತೆ ಮತ್ತು ದುರ್ವರ್ತೆನೆಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮತ್ತು ಕರಾರಸಾ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಬಂಧನೆಗಳು 1971 ರ ಪ್ರಕಾರ ದಂಡನಾರ್ಹವಾದ ಅಪರಾಧಗಳು ಎನಗಿದ್ದಾರೆಂದು ಅಮಾನತು ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ.

ಆದರೆ, ಇದೇ ಆಗಸ್ಟ್‌ 7ರಂದು ತುಮಕೂರಿನ ಬಸ್‌ನಿಲ್ದಾಣಕ್ಕೆ ಬಸ್‌ ತಪುಲಿದಾಗ ಟಿಸಿ ಅಸ್ಲಂಪಾಷ ಅವರ ಬಳಿ ಎಂಟ್ರಿ ಮಾಡಿಕೊಡಿ ಎಂದು ಕೇಳಿದ್ದಾರೆ. ಆದರೆ, ಅಸ್ಲಂಪಾಷ ಅವರು ಎಂಟ್ರಿ ಮಾಡಿಕೊಡುವುದಿಲ್ಲ ಎಂದು ಈ ಚಾಲನಾ ಸಿಬ್ಬಂದಿಯನ್ನು ಬೆದರಿಸಿದ್ದಾರೆ. (ಆ ದೃಶ್ಯವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ).

ಅಲ್ಲದೆ ಅಸ್ಲಂಪಾಷ ಅವರು ಫೋನ್‌ನಲ್ಲಿ ವಿಡಿಯೋ ಮಾಡುತ್ತಿದ್ದವರನ್ನು ಬೆದರಿಸುತ್ತಾ ನಿನಗೆ ವಿಡಿಯೋ ಮಾಡುವ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ಚಾಲನಾ ಸಿಬ್ಬಂದಿ ಶರಣಪ್ಪ ಮತ್ತು ನಿರ್ವಾಹಕರಿಗೆ ನೀವು ಏನು ಮಾಡಿದರೂ ನಾನು ಎಂಟ್ರಿ ಹಾಕುವುದಿಲ್ಲ ನೀವು ತುಮಕೂರು ಬಸ್‌ ನಿಲ್ದಾಣಕ್ಕೆ ಬಂದೇ ಇಲ್ಲ ಎಂದು ನಿಲ್ದಾಣಲ್ಲೇ ನಿಂತು ಹೇಳುತ್ತಿದ್ದಾರೆ.

ಇನ್ನು ಚಾಲಕ ಶರಣಪ್ಪ ಹೇಳುತ್ತಿರುವುದು ನಾವು ತುಮಕೂರಿಗೆ ಎಂಟ್ರಿಕೊಟ್ಟಗ ಮೇಲ್ಸೇತುವೇಯಲ್ಲಿ ಒಂದು ಲಾರಿ ಕೆಟ್ಟು ನಿಂತಿತ್ತು. ಹೀಗಾಗಿ 200 ಮೀಟರ್‌ ಅಂತರದಿಂದ ನಾವು ಬಸ್‌ ನಿಲ್ದಾಣ ತಲುಪಲು ಹೊರಟೆವೆ ಆ ವೇಳೆ ತನಿಖಾಧಿಕಾರಿಗಳು ಬಸ್‌ ಹತ್ತಿ ತನಿಖೆ ಮಾಡಿದರು. ಬಳಿಕ ನೀವು ಈ ಕಡೆಯಿಂದ ಏಕೆ ಹೋಗುತ್ತಿದ್ದೀರಿ ಎಂದು ಕೇಳಿದರು.

ಆಗ ನಾವು ಇರುವ ವಿಷಯ ತಿಳಿಸಿದೆವು. ಆದರೆ ನೀವು ಮೇಲ್ಸೇತುವೆಯಲ್ಲೇ ಹೋಗಬೇಕಿತ್ತು ಎಂದು ಹೇಳಿದರು. ಅಲ್ಲದೆ ನೀವು ಬೇರೆ ಮಾರ್ಗವಾಗಿ ಬಂದಿದ್ದೀರಿ ಎಂದು ಹೇಳಿ ಟಿಸಿ ಅಸ್ಲಂಪಾಷ ಅವರಿಗೆ ಎಂಟ್ರಿ ಮಾಡಿಕೊಡಬೇಡಿ ಎಂದು ಹೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇನ್ನು ನಾವು ಹೋಗಿ ಟಿಸಿ ಅಸ್ಲಂಪಾಷ ಅವರನ್ನು ಪರಿಪರಿಯಾಗಿ ಕೇಳಿದರೂ ಅವರು ಎಂಟ್ರಿ ಮಾಡಿಕೊಡಲಿಲ್ಲ. ಇನ್ನು ಇದನ್ನೇ ನೆಪವಾಗಿಟ್ಟುಕೊಂಡು ನಮ್ಮನ್ನು ಅಮಾನತು ಮಾಡಿದ್ದಾರೆ. ಆದರೆ, ಅಮಾನತಿಗೂ ಮುನ್ನ ನಮ್ಮಿಂದ ಯಾವುದೇ ಹೇಳಿಕೆಯನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಪಡೆದಿಲ್ಲ ಎಂದು ಶರಣಪ್ಪ ತಿಳಿಸಿದ್ದಾರೆ.

ಇನ್ನು ಆ.7ರಂದು ಚಾಲಕ ಶರಣಪ್ಪ ಸುರಪುರ – ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಈ ಮಾರ್ಗಕ್ಕೆ ಅಂದು ಹೆಚ್ಚುವರಿಯಾಗಿ ಈ ಬಸ್‌ ಮಾರ್ಗದಲ್ಲಿತ್ತು. ಅಂದರೆ ಹೆಚ್ಚುವರಿಯಾಗಿ ಬಿಡುವ ಬಸ್‌ಗಳನ್ನು ನಿಗಮದಲ್ಲಿ ರೂಟ್‌ ಮಾಡಿಕೊಂಡು ಬರಬೇಕು ಎಂದಷ್ಟೇ ಡಿಎಂಗಳು ಹೇಳುತ್ತಾರೆ ಎನ್ನಲಾಗಿದೆ.

ಈ ವೇಳೆ ಚಾಲನಾ ಸಿಬ್ಬಂದಿ ತಪ್ಪು ಎಸಗಿದರೆ ದಂಡ, ಅಮಾನತು ಶಿಕ್ಷೆಗೆ ಗುರಿಪಡಿಸಬಹುದು. ಆದರೆ, ತನಿಖಾಧಿಕಾರಿಗಳೊಂದಿಗೆ ದುರ್ನಡೆತೆ ತೋರಿದಿದ್ದೀರಿ, ನೀವು ಬಸ್‌ ನಿಲ್ದಾಣಕ್ಕೆ ಹೋಗಿಲ್ಲ, ಟಿಸಿಯವರಿಂದ ಎಂಟ್ರಿ ಪಡೆದಿಲ್ಲ ಎಂದು ಹೇಳಿ ಅಮಾನತು ಮಾಡುವುದು ಸರಿಯಿದೆಯಾದರೂ ಅವರು ಎಂಟ್ರಿ ಪಡೆದಿಲ್ಲದಿರುವುದಕ್ಕೆ ಕಾರಣ ಏನು ಎಂದು ಯಾದಗಿರಿ ಡಿಸಿ ಶ್ರೀಹರಿಬಾಬು ಈ ಚಾಲನಾ ಸಿಬ್ಬಂದಿಯ ಹೇಳಿಕೆ ಪಡೆಯಬೇಕಿತ್ತಲ್ಲವೇ?

ಇನ್ನು ತನಿಖಾಧಿಕಾರಿಗಳು ಕೊಟ್ಟ ಮಾಹಿತಿ ಆಧಾರದ ಮೇಲೆ ಈ ರೀತಿ ಚಾಲನಾ ಸಿಬ್ಬಂದಿ ವಿರುದ್ಧ ಇಂಥ ಅಮಾನತು ಶಿಕ್ಷೆ ನೀಡುವುದು ಸಂಸ್ಥೆಗೆ ಶೋಭೆ ತರುತ್ತದೆಯೇ ಎಂಬುದರ ಬಗ್ಗೆ ಯೋಚಿಸುವಷ್ಟು ತಾಳ್ಮೆ ಈ ಶ್ರೀಹರಿಬಾಬು ಅವರಿಗೆ ಇಲ್ಲವೇ?

ಚಾಲನಾ ಸಿಬ್ಬಂದಿಗಳನ್ನು ಅವರು ಮಾಡದ ತಪ್ಪಿಗೆ ತಮ್ಮ ಕೈಯಲ್ಲಿ ಅಸ್ತ್ರವಿದೆ ಎಂದು ಏನು ಬೇಕಾದರೂ ಮಾಡಬಹುದೇ? ಇದರಿಂದ ಸಂಸ್ಥೆಗೆ ನಷ್ಟವಾಗುವುದಿಲ್ಲವೇ? ಸಂಸ್ಥೆಯಲ್ಲಿ ಇರುವ ಕಾನೂನು ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಮತ್ತು ಇದು ಸಾರ್ವಜನಿಕರ ಅತ್ಯವಶ್ಯಕ ಸೇವೆಯಾಗಿದ್ದು, ಜನರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಲ್ಲಿ ಅಲ್ಲವೇ ಕಾನೂನು ರಚಿಸಿರುವುದು?

ಅದರ ದುರುಪಯೋಗವನ್ನು ಮಾಡಿಕೊಳ್ಳುವ ಇಂಥ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳಿಂದ ಸಂಸ್ಥೆಗೆ ಎಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂಬುದರ ಅರಿವಿದೆಯೇ? ಈ ಬಗ್ಗೆ ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಾಮಾನ್ಯ ನೌಕರರ ಮೇಲೆ ದರ್ಪ ಮೆರೆಯುವ ಇಂಥ ಅಧಿಕಾರಿಗಳಿಗೆ ಅದು ಪಾಠವಾಗಬೇಕಿದೆ ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.

ಆ.7ರಂದು KA 33 F 0429 ಹೆಚ್ಚುವರಿ ಬಸ್ಅನ್ನು ಸುರಪುರ – ಬೆಂಗಳೂರು ಮಾರ್ಗವಾಗಿ ಬಿಡಲಾಗಿತ್ತು. ಆದರೆ, ತುಮಕೂರು ನಿಲ್ದಾಣಕ್ಕೆ ಹೋಗದೆ ಮತ್ತು ತನಿಖಾಧಿಕಾರಿಗಳಿಗೆ ಇವರು ಸಹಕರಿಸದೆ ದುರ್ವರ್ತನೆ ತೋರಿದ್ದಾರೆ. ಇದಿಷ್ಟೇ ಅಲ್ಲದೆ ತುಮಕೂರು ನಿಲ್ದಾಣದಲ್ಲಿ ಎಂಟ್ರಿ ಹಾಕಿಸಿಕೊಂಡಿಲ್ಲ. ಈ ಎಲ್ಲ ಆಧಾರದ ಮೇಲೆ ಶರಣಪ್ಪ ಅರವನ್ನು ಅಮಾನತು ಮಾಡಲಾಗಿದೆ. ಒಂದುವೇಳೆ ಇದೆಲ್ಲ ಸುಳ್ಳು ಎಂದು ಚಾಲಕ ಶರಣಪ್ಪ ಸಾಬೀತು ಪಡಿಸಿದರೆ ಮುಂದಿನ ಕ್ರಮ ಜರುಗಿಸಲಾಗುವುದು.

l ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಯಾದಗಿರಿ

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC