KKRTC ವಿಜಯಪುರ: ಸಾರಿಗೆ ಡಿಸಿ ನಾರಾಯಣಪ್ಪ ಕುರಬರ ಹಾಲಿ ಸ್ಥಳದಲ್ಲಿಯೇ ಮುಂದುವರಿಸಿ- ಸಿಎಂ ಶಿಫಾರಸು?

- ಇದು ಅಸಲಿಯೋ ನಕಲಿಯೋ? l ನಕಲಿಯಾಗಿದ್ದರೆ ಸೂಕ್ತ ಕ್ರಮಕ್ಕೆ ಇಳಕಲ್ ಒತ್ತಾಯ
ವಿಜಯಪುರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಮತ್ತೊಂದು ದಿನಾಂಕವೇ ಇಲ್ಲದ ಶಿಫಾರಸು ಲೆಟರೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸಿಎಂ ಅವರ ಅಧಿಕೃತ ಪತ್ರವೋ ಅಥವಾ ಅಲ್ಲವೋ ಎಂಬ ಗೊಂದಲವಾಗುತ್ತಿದೆ.

ಹೌದು! ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣಪ್ಪ ಕುರಬರ ಅವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಲು ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಟಿಪ್ಪಣಿಯೂ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೆ ದಿನಾಂಕವೇ ಇಲ್ಲ. ಹೀಗಾಗಿ ಇದು ಫೇಕ್ ಲೆಟರ್ ಎಂದು ಅನಿಸುತ್ತಿದೆ.
ಇನ್ನು ಇದೇ ರೀತಿ ಇತ್ತೀಚೇಗೆ ಮಡ್ಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅವರನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿ ನಿಯೋಜಿಸುವಂತೆ ಟಿಪ್ಪಣಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಬಳಿಕ ಮುಖ್ಯಮಂತ್ರಿಯವರಿಗೆ ತಿಳಿದು ಇದು ಸುಳ್ಳು ಈ ರೀತಿ ನಾವು ಶಿಫಾರಸು ಮಾಡಿಲ್ಲ ಈ ರೀತಿ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಲಾಗಿತ್ತು.
ಅದೇ ರೀತಿ ಸರ್ಕಾರಕ್ಕೆ ಕೆಟ್ಟ ಹೆಸರು ಅಂದು ಬಂದಿತ್ತು. ಇನ್ನು ಈ ಟಿಪ್ಪಣಿಯಲ್ಲಿ ಅಧಿಕೃತ ಸಂಖ್ಯೆ ಮತ್ತು ದಿನಾಂಕವಿಲ್ಲ. ಆದರೂ ಟಿಪ್ಪಣಿಯು ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಇ-ತಂತ್ರಾಂಶ(E-Office)ದಲ್ಲಿ ನೋಂದಾಯಿಸಿರುವುದಿಲ್ಲ ಹಾಗೂ ಈ ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿಲ್ಲ. ಇದರ ಆಧಾರದಲ್ಲಿ ಯಾವುದೇ ವರ್ಗಾವಣೆ/ ನಿಯೋಜನೆ ಆದೇಶ ಸಹ ಹೋರಡಿಸಿಲ್ಲ.
ಆದಾಗ್ಯೂ ಮುಖ್ಯಮಂತ್ರಿಯವರಿಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರುವ ದುರುದ್ದೇಶದಿಂದ ಈ ತರಹದ ಕೃತ್ಯವನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುವಂತಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೇಹಚ್ಚಿ ತುರ್ತಾಗಿ ಈ ರೀತಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿತನಾಗಿರುವ ಬಗ್ಗೆ ಅರುಣ ಫುರ್ಟಾಡೊ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (ಆಡಳಿತ) ಇವರ ಮುಖಾಂತರ ಆರಕ್ಷಕ ಉಪ ನಿರೀಕ್ಷಕರು ವಿಧಾನ ಸೌಧ ಪೊಲೀಸ್ ಠಾಣೆ ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿತ್ತು.
ಅದರಂತೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣಪ್ಪ ಕುರಬರ ಇವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಲು ಸಂ/ಮುಮಂ.(ಕೃ) /2025 ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಇವರಿಗೆ ನೀಡಿರುವ ಟಿಪ್ಪಣಿಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದ್ದರಿಂದ ಸಿಎಂ ಅವರು ನಾರಾಯಣಪ್ಪ ಕುರಬರ, ವಿಭಾಗೀಯ ನಿಯಂತ್ರಣಾಧಿಕಾರಿ ಕಕರಸಾ ನಿಗಮದ ವಿಜಯಪುರ ಅವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಲು ಟಿಪ್ಪಣಿ ನೀಡಿದ್ದರ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಈ ಟಿಪ್ಪಣಿಯನ್ನು ನೀಡದೇ ಇದ್ದರೆ ಈ ಟಿಪ್ಪಣಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದು ತಮಗೂ ಹಾಗೂ ಸರ್ಕಾರಕ್ಕೂ ಕೆಟ್ಟ ಹೆಸರು ಬರಲು ಮಾಡಿರುವ ತಂತ್ತ್ತಿರ ಎಂಬಂತೆ ಕಾಣುತ್ತಿದೆ. ಹೀಗಾಗಿ ಈ ತಪ್ಪು ಮಾಡಿರುವ ಕಿಡಿಗೇಡಿಗಳ ಪತ್ತೆಹಚ್ಚಿ ತುರ್ತಾಗಿ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ವಿಜಯಪುರದ ವಿಭಾಗ ಪ್ರಧಾನ ಕಾರ್ಯದರ್ಶಿ ಎಂ.ಎನ್.ಇಲಕಲ್ ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ E-mail & ಲಿಖಿತ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Related









