CrimeNEWSನಮ್ಮಜಿಲ್ಲೆ

KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ KKRTC ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಜೆ. ಮಹಮ್ಮದ್ ಫೈಜ್ ಅವರನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ.

ಬಳಿಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಸಂಬಂಧ ನಿಗಮದಿಂದ ಕಾರಣ ಕೇಳಿ ಸೂಚನಾ ಪತ್ರವನ್ನು ಫೈಜ್ ಅವರಿಗೆ ನೀಡಲಾಗಿದೆ. ಅದರಂತೆ ಸೂಚನಾ ಪತ್ರಕ್ಕೆ ಉತ್ತರ ನೀಡಿದ್ದಾರೆ. ಆದರೆ ಆ ಉತ್ತರಕ್ಕೆ ವಿಭಾಗದ ಕಿರಿಯ ಸಹಾಯಕ ಎಂ.ಎನ್.ಇಲಕಲ್ ಆದ ನನ್ನ ಡಿಫಾಲ್ಟ್ ಹಿಸ್ಟರಿ ಲಗತ್ತಿಸಿ ಕೊಟ್ಟಿದ್ದಾರೆ ಎಂದು ಇಲಕಲ್‌ ಆರೋಪಿಸಿದ್ದಾರೆ.

ಇನ್ನು ನನ್ನ ಡಿಫಾಲ್ಟ್ ಹಿಸ್ಟರಿಯನ್ನು ನನ್ನ ಅನುಮತಿ ಪಡೆಯದೇ ಕೊಡುವ ಮೂಲಕ ಶಿಸ್ತು ಶಾಖೆಯ ಮೇಲ್ವಿಚಾರಕ ಝಾಕೀರ್ ಜಮಾದಾರ್ ಅವರು ತಪ್ಪು ಎಸಗಿರುವುದು ಕಾಣಿಸುತ್ತಿದೆ. ಅಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಜಮಾದಾರ್ ಸಹಾಯ ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ.

ಇವರಷ್ಟೇ ಅಲ್ಲದೆ ಇನ್ನು ಸಿಬ್ಬಂದಿ ಮೇಲ್ವಿಚಾರಕ ಯಾಸೀನ್ ಮುಲ್ಲಾ , ಸಿಬ್ಬಂದಿ  ಸಹಾಯಕ ಎಂ.ವಿ.  ಬಿಜಾಪುರ್‌, ಪಿಎ  ಅಬ್ದುಲ್ ಮುತ್ತಲಿಬ ಪಾನ್‌ಫರೋಶ್ ಅವರು ಸೇರಿ ಜೆ. ಮಹಮ್ಮದ್ ಫೈಜ್ ಅವರ Show Causeಗೆ ವಿಭಾಗೀಯ ಕಚೇರಿ ಕರ್ತವ್ಯ ಸಮಯದಲ್ಲಿ ಉತ್ತರ ಬರೆದು ಕೊಟ್ಟು ಒಬ್ಬ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಸಹಾಯ ಮಾಡಿದ್ದಾರೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲದೆ ಸಿಬ್ಬಂದಿ ಮೇಲ್ವಿಚಾರಕ ಯಾಸೀನ್ ಮುಲ್ಲಾ ಕೇಂದ್ರ ಕಚೇರಿಗೆ ಹೋಗಿ ಜೆ.ಮಹಮ್ಮದ್ ಫೈಜ್ ಅವರಿಗೆ ಕಾರಣ ಕೇಳಿ ಕೊಟ್ಟಿದ್ದ ಸೂಚನಾ ಪತ್ರಕ್ಕೆ ಉತ್ತರ ನೀಡಿ ಬಂದಿದ್ದಾರೆ. ಹೀಗೆ ಒಬ್ಬ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಸಹಕರಿಸಿರುವುದರಿಂದ ಕಾನೂನಿನಡಿ ಎಂಡಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಎನ್.ಇಲಕಲ್ ಒತ್ತಾಯಿಸಿದ್ದಾರೆ.

ಅಲ್ಲದೆ ಈ ಮೂವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿ ಈ ಆರೂಪಿಗಳ ವಿರುದ್ಧ ಸೆಕ್ಷನ್ 107, IPC & other ಪ್ರಚೋದನೆ, ಪಿತೂರಿ, ನೆರವು ನೀಡಿರುವ ಆರೋಪದಡಿಯಲ್ಲಿ FIR ದಾಖಲು ಮಾಡುವಂತೆ ಚುನಾವಣೆ ಆಯುಕ್ತರಿಗೆ ಈಗಾಗಲೇ ದೂರು ನೀಡಲಾಗಿದೆ.

ಚುನಾವಣೆ ಆಯುಕ್ತರು ಈ ದೂರನ್ನು ಮುಂದಿನ ಕ್ರಮಕ್ಕಾಗಿ ನಿಗಮದ ಕೇಂದ್ರ ಕಚೇರಿ & ವಿಭಾಗೀಯ ಕಚೇರಿಗೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಿದ್ದಾರೆ. ಆದರೆ KKRTC ಕೇಂದ್ರ ಕಚೇರಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು/ ಮುಖ್ಯ ಭದ್ರತಾ ಮತ್ತು ಜಾಗ್ರತಾ ಅಧಿಕಾರಿ ಆನಂದ ಭದ್ರಕಳ್ಳಿ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ಇಲ್ಲಿಯವರೆಗೆ ಆರೋಪಿಗಳ ವಿಚಾರಣೆ ಮಾಡಿಸಿ ವರದಿ ನೀಡಿಲ್ಲ.

ಇದನ್ನು ಗಮನಿಸಿದರೆ ಈ ಆರೋಪಿಗಳನ್ನೂ ನೀತಿ ಸಂಹಿತೆ ಪ್ರಕರಣದಿಂದ ಬಚಾವ್ ಮಾಡಲು ಈ ಅಧಿಕಾರಿಗಳು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ ಈ ಅಧಿಕಾರಿಗಳು ಚುನಾವಣೆ ಆಯುಕ್ತರ ಆದೇಶಕ್ಕೆ ಕಿಂಚಿತ್ತು ಬೆಲೆ ಮತ್ತು ಕಿಮ್ಮತ್ತು ಕೊಟ್ಟಿಲ್ಲ ಎಂದು KPCC ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಯಾಕೂಬ ನಾಟಿಕಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಿಗದಿತ ಸಮಯದಲ್ಲಿ ಕ್ರಮ ಜರುಗಿಸದೆ ಹೋದರೆ ಮುಂದಿನ ಕಾನೂನು ಕ್ರಮಕ್ಕಾಗಿ ದೆಹಲಿಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ