ಭ್ರಷ್ಟ ಕಾರ್ಮಿಕ ಅಧಿಕಾರಿಗೆ ಕೆಆರ್‌ಎಸ್ ಪಕ್ಷದಿಂದ ನಾಗರೀಕ ಸನ್ಮಾನ
ಬೆಂಗಳೂರು: ಕಾರ್ಮಿಕ ಪರವಾನಿಗೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಗೆ ಸಿಕ್ಕಿದ ಕಾರ್ಮಿಕ ಅಧಿಕಾರಿಗೆ ಕೆಆರ್‌ಎಸ್ ಪಕ್ಷದ ವತಿಯಿಂದ ಸನ್ಮಾನ ಮಾಡಲು ಕಚೇರಿಗೆ ಹೋದಾಗ ಅಧಿಕಾರಿ ಇಲ್ಲದ ಕಾರಣ ಅವರ ಭಾವಚಿತ್ರಕ್ಕೆ ಸನ್ಮಾನ ಮಾಡಲಾಯಿತು.
ಸೆ.9ರಂದು ಬೆಂಗಳೂರಿನ ಬಾಗಲಗುಂಟೆಯಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ 10,000 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ದಾಳಿಗೆ ಒಳಗಾದ ಭ್ರಷ್ಟ ಕಾರ್ಮಿಕ ಅಧಿಕಾರಿ ಶ್ಯಾಮರಾವ್‌ಗೆ ನಾಗರಿಕ ಸನ್ಮಾನ ಮಾಡುವ ಮೂಲಕ ಭ್ರಷ್ಟರಿಗೆ ಅವಮಾನ ಮಾಡುವ ವಿನೂತನ ಪ್ರತಿಭಟನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸದಸ್ಯರು ಇಂದು ಆಯೋಜಿಸಿದರು.
ಭ್ರಷ್ಟ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ಇಲ್ಲವಾದುದರಿಂದ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಮೇಲೆ ಅವರ ಭಾವಚಿತ್ರ ಇಟ್ಟು, ಮೈಸೂರು ಪೇಟ ಹಾಕಿ ಶಾಲು ತೊಡಿಸಿ ಹಾರ ಹಾಕುವ ಮೂಲಕ ಅವಮಾನದ ಸನ್ಮಾನವನ್ನು ಮಾಡಿದರು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ಬೆಂಗಳೂರು ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ನರಸಿಂಹ ರೆಡ್ಡಿ ಕೆ ಎಲ್, ದೇವರಾಜ್, ಲೋಕೇಶ್, ಬಾಲಕೃಷ್ಣ, ಶ್ರೀನಿವಾಸ ಮೂರ್ತಿ, ವಾಸುದೇವ, ಕೀರ್ತಿ ಗೌಡ ಹಾಗೂ ಬೆಂಗಳೂರಿನ ಪದಾಧಿಕಾರಿಗಳು ಹಾಗೂ ಸೈನಿಕರು ಉಪಸ್ಥಿತರಿದ್ದರು.
Related











