NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ವೇತನ ಹೆಚ್ಚಳ-38 ತಿಂಗಳ ಹಿಂಬಾಕಿ ಪ್ರಕರಣ ಸೆ.17ಕ್ಕೆ ಮುಂದೂಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಆ ಪ್ರಕರಣದ ವಿಚಾರಣೆ ಇಂದು ಹೈ ಕೋರ್ಟ್‌ ನಡೆದು, ಸೆ.17ಕ್ಕೆ ಮುಂದೂಡಿದೆ.

ಈ ಹಿಂದೆ ಸೆ.3ರಂದು ಪ್ರಕರಣದ ವಿಚಾರಣೆ ನಡೆದಿತ್ತು. ನೌಕರರ ಪರ ವಕೀಲರು ಹಾಗೂ ಸರ್ಕಾರ, ಸಾರಿಗೆ ಆಡಳಿತ ಮಂಡಲಿ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ನೌಕರರ ಪರ ವಕೀಲರು ಐಎ ಹಾಕಿದ್ದರು. ಬಳಿಕ ಸೆ.10ಕ್ಕೆ ಅಂದರೆ ಇಂದಿಗೆ ಮುಂದೂಡಲಾಗಿತ್ತು. ಇಂದು ವಿಚಾರಣೆ ನಡೆಯಿತು.

ಈ ವೇಳೆ ಸಂಸ್ಥೆಯ ಪರ ವಕೀಲರು ನೌಕರರ ಪರ ವಕೀಲರು ಹಾಕಿರುವ ಐಎಗೆ ಆಕ್ಷೇಪಣೆ (Objection) ಸಲ್ಲಿಸಲು   ಕಾಲಾವಕಾಶ ಕೊಡಿ ಎಂದು ಕೇಳಿದ್ದರು. ಈ ವೇಳೆ ಮೇನ್‌ ಪಿಟಿಷನ್‌ಗೆ ಆಕ್ಷೇಪಣೆ ಸಲ್ಲಿಸಿಲ್ಲ ಈಗ ಐಎಗೆ ಏನು ಆಕ್ಷಣೆ ಸಲ್ಲಿಸುತ್ತಾರೆ ಎಂದು  ನೌಕರರ ಪರ ವಕೀಲರಾದ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಕೇಳಿದರು.

ಈ ವೇಳೆ ಇಲ್ಲ ನಾವು ಈ ಐಎಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದರಿಂದ ಕೋರ್ಟ್‌ ಇದೇ ಸೆ.17ಕ್ಕೆ ಪ್ರಕರಣವನ್ನು ಮುಂದೂಡಿದೆ.

ಒಟ್ಟಾರೆ ಈ ಪ್ರಕರಣ ತ್ವರಿತವಾಗಿ ಮುಗಿಯಬೇಕು ನೌಕರರಿಗೆ ನ್ಯಾಯಸಿಗಬೇಕು ಎಂದು ಕೋರ್ಟ್‌ ಕೂಡ ಬಯಸಿದ್ದು ಆ ನಿಟ್ಟಿನಲ್ಲಿ ಹತ್ತಿರ ಹತ್ತಿರದಲ್ಲೇ ಡೇಟ್‌ಕೊಡುತ್ತಿದೆ ಎಂದು ಹೇಳಬಹುದು. ಇದನ್ನು ಗಮನಿಸಿದರೆ ಕೋರ್ಟ್‌ ಕೂಡ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಗಮನಿಸುತ್ತಿದೆ ಎನ್ನಬಹುದು. ಆದರೆ, ಕೋರ್ಟ್‌ ದಾಖಲೆಗಳ ಆಧಾರದ ಮೇಲೆ ತೀರ್ಪುಕೊಡುವುದರಿಂದ ಎಷ್ಟರಮಟ್ಟಿಗೆ ವಾದ ಪ್ರತಿವಾದ ಮಂಡನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಈ ಪ್ರಕರಣ ನೌಕರರ ಪರ ಬಲವಾಗಿ ನಿಲ್ಲಬೇಕಾದರೆ ಯಾವುದಾದರೊಂದು ನೌಕರರ ಪರ ಸಂಘಟನೆ ಸಂಸ್ಥೆಯ ಎಂಡಿ ಅವರಿಗೆ 2024ರ ಜನವರಿ 1ರಿಂದ ವೇತನ ಹೆಚ್ಚಳ ಮಾಡಬೇಕು ಹಾಗೂ 38 ತಿಂಗಳ ಹಿಂಬಾಕಿ ಕೊಡಬೇಕು ಎಂಬ ಸಂಬಂಧ ಮನವಿ ಮಾಡಿರುವ ಪ್ರತಿಯನ್ನು ಲಗತ್ತಿಸಿದರೆ ತುಂಬ ಅನುಕೂಲವಾಗುತ್ತದೆ. ಆದರೆ ಈ ಬಗ್ಗೆ ನೌಕರರ ಯಾವುದೇ ಸಂಘಟನೆ ಈವರೆಗೂ ಮುಂದೆ ಬಂದಿಲ್ಲದಿರುವುದು ದುರಂತ.

ಪ್ರಕರಣವೇನು?: ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು20 ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ನೌಕರರ ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್‌ 10ರಂದು ಹೈ ಕೋರ್ಟ್‌ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಹೈ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Megha
the authorMegha

Leave a Reply

error: Content is protected !!
Latest news
7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್‌ ಹಣ ವಿತ್‌ಡ್ರಾಗೆ ಅವಕಾಶ- ಜೂನ್ ಅಂತ್ಯದ... ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣದ ಪ್ರಮುಖ ಆರೋಪಿ: ಕಾಲಿಗೆ ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿದ ಪೊಲೀಸರು KSRTC: ಸಾರಿಗೆ ನಿಗಮದ ನೌಕರರಿಗೆ ಗಳಿಕೆ ರಜೆ (EL) ನಗದೀಕರಣ ಸೌಲಭ್ಯ ವಿಸ್ತರಿಸಿ ಎಂಡಿ ಆದೇಶ KSRTC: ಶೇ.1.5ರಷ್ಟು ಹೆಚ್ಚಳದ ತುಟ್ಟಿಭತ್ಯೆ ಜೂನ್‌ ವೇತನದಲ್ಲಿ ಅನುಷ್ಠಾನಗೊಳಿಸಿ ನೌಕರರಿಗೆ ಪಾವತಿಸಲು ಎಂಡಿ ಆದೇಶ 'ಕರ್ತವ್ಯ' ಆಪ್ ನೋಂದಣಿ ಶೇ.70.6 ರಷ್ಟು ಪ್ರಗತಿ - ಮಾಧ್ಯಮಗಳ ವರದಿಗೆ ಸರ್ಕಾರದ ಸ್ಪಷ್ಟನೆ ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ