ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜೆ.ಮಹ್ಮದ್ ಫೈಜ್ ಆವರು ನೇಮಕಗೊಂಡಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಎಂ.ಎ.ಮುಲ್ಲಾ ಅವರು ಕಳೆದ ಮೇ 31ರಂದು ನಿವೃತ್ತರಾಗಿದ್ದರಿಂದ ಜೂನ್ ಒಂದರಿಂದ ಅಂದರೆ ಕಳೆದ 27ದಿನಗಳಿಂದ ಖಾಲಿಯಿದ್ದ ಹುದ್ದೆಗೆ ಇಂದು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ನಿಗಮದ ಕೇಂದ್ರ ಕಚೇರಿ ಕಲಬುರಗಿಯಲ್ಲಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಜೆ.ಮಹ್ಮದ್ ಫೈಜ್ ಅವರನ್ನು ವಿಜಯಪುರ ಸಾರಿಗೆ ಡಿಸಿಯಾಗಿ ನೇಮಿಸಿದ್ದು, ಈ ಕೂಡಲೇ ಅಧಿಕಾರವಹಿಸಿಕೊಳ್ಳುವಂತೆ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬರುವುದಕ್ಕೆ ಈ ಹಿಂದೆ ಇದ್ದ ನಾರಾಯಣಪ್ಪ ಕುರಬರ ಅವರು ಶತಪ್ರಯತ್ನ ಮಾಡಿದರು. ಆದರೆ, ಅವರು ಕೆಲ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವುದರಿಂದ ಅವರ ಪ್ರಯತ್ನ ಫಲಿಸಿಲ್ಲ.