CrimeNEWSನಮ್ಮಜಿಲ್ಲೆ

KSRTC: ಚಿಲ್ಲರೆಗಾಗಿ ನಿರ್ವಾಹಕರ ನಿಂದಿಸಿದರೆ 3ವರ್ಷ ಜೈಲು – ಸುಪ್ರೀಂ ಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ
  • ಆದರೆ ಸಾರಿಗೆ ಸಂಸ್ಥೆ ಅಧಿಕಾರಿಗಳೇ ಚಾಲನಾ ಸಿಬ್ಬಂದಿಯನ್ನು ವಿಚಾರಣೆಗೆ ಮುನ್ನವೇ ಶಿಕ್ಷೆಗೆ ಗುರಿಮಾಡುತ್ತಿದ್ದಾರೆ
  • ಇನ್ನು ಏಕಾಏಕಿ ಅಮಾನತು ಮಾಡುವ ಅಧಿಕಾರಿಗಳ ನಡೆಯಿಂದ ನೌಕರರು ಒತ್ತಡಕ್ಕೆ ಸಿಲುಕುತ್ತಿದ್ದಾರೆ
  • ಜತೆಗೆ ತೊಂದರೆ ಕೊಟ್ಟ ಪ್ರಯಾಣಿಕರ ರಕ್ಷಣೆಗೆ ನಿಲ್ಲುತ್ತಿದ್ದಾರೆ ಎಂಬ ಆರೋಪ

ಬೆಂಗಳೂರು: ಇನ್ನು ಮುಂದೆ ಚಿಲ್ಲರೆ ಕೊಡುವುದು ನಿಮ್ಮ ಕರ್ತವ್ಯ ಎಂದು ಪ್ರಯಾಣಿಕರು ಬಸ್‌ ನಿರ್ವಾಹಕರ (Conductor) ಜತೆ ಜಗಳ ಮಾಡುವಂತಿಲ್ಲ. ಒಂದು ವೇಳೆ ಕ್ಯಾತೆ ತೆಗೆದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಹೌದು! ಈ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದ್ದು, ಚಿಲ್ಲರೆಗಾಗಿ ನಿರ್ವಾಹಕರನ್ನು ಹೊಣೆ ಮಾಡಿ ಅವರ ಜತೆಗೆ ತಕರಾರು ಮಾಡಿದರೆ ನೀವು ಸಮಸ್ಯೆಗೆ ಸಿಲುಕಿಕೊಳ್ಳುವುದು ಖಚಿತ.

ಇನ್ನು ಸುಪ್ರೀಂ ಕೋರ್ಟ್‌ನ ನೂತನ ಆದೇಶ ನಿರ್ವಾಹಕರನ್ನು ಈ ಸಮಸ್ಯೆಯಿಂದ ಪಾರುಮಾಡಿದೆ. ಚಿಲ್ಲರೆ ಇಟ್ಟುಕೊಳ್ಳುವುದು ಪ್ರಯಾಣಿಕರ ಕರ್ತವ್ಯವಾಗಿದೆಯೇ ಹೊರತು ನಿರ್ವಾಹಕರ ಜವಾಬ್ದಾರಿಯಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ತಿಳಿಸಿದೆ.

ಬಸ್‌ನಲ್ಲಿ ಯಾರೋ ಪ್ರಯಾಣಿಕರು ಚಿಲ್ಲರೆ ತರದೆ ನಿರ್ವಾಹಕರ ಮೇಲೆ ಕೋಪ ಮಾಡಿಕೊಂಡು ಅವರನ್ನು ನಿಂದಿಸುತ್ತಾರೆ. ಆದರೆ ಅದನ್ನು ಸಹಿಸಿಕೊಂಡು ನಿರ್ವಾಹಕರು ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ. ಆದರೂ ಅವರನ್ನು ಇನ್ನಷ್ಟು ಹೀಯಾಳಿಸುವ ಮೂಲಕ ಕರ್ತವ್ಯಕ್ಕೂ ಅಡ್ಡಿ ಪಡಿಸುವುದು ಸಾಮಾನ್ಯವಾಗಿದೆ.

ಇದರಿಂದ ನಿರ್ವಾಹಕರು ಪ್ರಯಾಣಿಕರೆ ನಮ್ಮ ದೇವರು ಎಂಬ ಭಾವನೆಯಿಂದ ತಮಗಾಗುತ್ತಿರುವ ಮಾನಸಿಕ ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಎದುರಾದರೆ ಅದಕ್ಕೆ ಪ್ರಯಾಣಿಕರು ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.

ನಿರ್ವಾಹಕರ ಜತೆಗೆ ಪ್ರಯಾಣಿಕರು ನಮ್ರತೆಯಿಂದ ನಡೆದೆದುಕೊಳ್ಳಬೇಕು. ಇಲ್ಲ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಪರೋಕ್ಷವಾಗಿ ತನ್ನ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ಸಾರಿಗೆ ಸಂಸ್ಥೆಗಳ ಚಾಲಕ ಮತ್ತು ನಿರ್ವಾಹಕರನ್ನು ಭಾರತೀಯ ದಂಡ ಸಂಹಿತೆ ಕಲಂ 21ರಡಿ ಸಾರ್ವಜನಿಕ ಸೇವಕ ಎಂದು ಗುರುತಿಸಿದ್ದು, ಪ್ರಯಾಣದ ವೇಳೆ ಚಾಲಕ ಮತ್ತು ನಿರ್ವಾಹಕರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದರೆ ಐಪಿಸಿ ಸೆಕ್ಟನ್‌ 322ರಡಿ ಮೂರು ವರ್ಷ, ಕಲಂ 353ರಡಿ ಮೂರು ವರ್ಷ ಕಲಂ 186ರಡಿ 3 ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ಈ ವಿಷಯವನ್ನು ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದ್ದು, ಈ ಸಂಬಂಧ ಪೊಲೀಸ್‌ ಇಲಾಖೆಯೂ ತನ್ನ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ  ಎಚ್ಚರಿಕೆ ಸಂದೇಶವನ್ನು ಹೊರಡಿಸಿದೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿಲ್ಲರೆಗಾಗಿ ಬಿಎಂಟಿಸಿ ಬಸ್‌ನಲ್ಲಿ ನಡೆದ ಘಟನೆಯಲ್ಲಿ ನಿರ್ವಾಹಕರನ್ನು ಅಮಾನತು ಮಾಡಿ ಸಂಸ್ಥೆ ಆದೇಶ ಹೊರಡಿಸಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂಬುವುದು ನಮ್ಮ ಕಳಕಳಿ.

2 Comments

  • ಆ ಅವಿವೇಕಿ ಅಧಿಕಾರಿಗಳಿಗೆ ಮಾನ್ಯ ನ್ಯಾಯಾಲಯದ ಸೂಚನೆಯು , ಆ ಬಡಪಾಯಿ ನಿರ್ವಹಕನನ್ನು ಅಮಾನತು ಪಡಿಸುವಾಗ ಮನಸ್ಸಿಗೆ ನಾಟದಿರುವುದು ಖೇದಕರ

  • ಮೊದಲು ಒಂದು ರೂ ಎರಡು ರೂ. ರೂಪಾಯಿ ಒಟ್ಟಾರೆ ಮೊಬಲಗು ಮೇಲಿನ ಚಿಲ್ಲರೆಯನ್ನು ತೆಗೆದು ನಿರ್ದಿಷ್ಟ ಸರಾಸರಿ ಟಿಕೆಟ್ ದರವನ್ನು ಮಾಡಿರಿ ಉದಾರಣೆಗೆ 81 ರ ಬದಲು 80

Leave a Reply

error: Content is protected !!
LATEST
KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌