KSRTC: ವಾರಸುದಾರರಿಲ್ಲದ ಲಗೇಜ್ ತಂದು ಮಾನಸಿಕ, ದೈಹಿಕ ಯಾತನೆ ಅನುಭವಿಸುತ್ತಿರುವ ಚಾಲಕ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನೊಬ್ಬ ವಾರಸುದಾರರಿಲ್ಲದ ಲಗೇಜ್ ತಂದ ಪರಣಾಮ ಈಗ ಕಳ್ಳತನ ಆರೋಪಕೆ ಗುರಿಯಾಗಿದ್ದು ಅಲ್ಲದೆ ಪೊಲೀಸರ ಬೆತ್ತದ ನೋವನ್ನು ಉಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾತನೆ ಅನುಭವಿಸುತ್ತಿದ್ದಾನೆ.
ಶಿವಮೊಗ್ಗ ಸಾರಿಗೆ ವಿಭಾಗದ ಶಿವಮೊಗ್ಗ ಘಟಕದ ಚಾಲಕ ಗುರುವಾರ ಬೆಂಗಳೂರು – ಶಿವಮೊಗ್ಗ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಿಪಟೂರು ಬಸ್ ನಿಲ್ದಾಣದಲ್ಲಿ ಮಹಿಳೆಯಬ್ಬರು ಬಟ್ಟೆ ಇರುವ ಪೇಪರ್ ಬ್ಯಾಗ್‌ಕೊಟ್ಟು ಇದನ್ನು ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿ ಮಹಿಳೆಗೆ ತಲುಪಿಸಿ ಬಿಡಿ ಎಂದು ಹೇಳಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ಆ ಬ್ಯಾಗ್‌ಪಡೆದು ಅದನ್ನು ಬೆಂಗಳೂರಿನ ಆ ಮಹಿಳೆಯ ಸಂಬಂಧಿಕರಿಗೆ ತಲುಪಿಸಿದ್ದಾರೆ. ಆ ಬಳಿಕ ಅದರಲ್ಲಿ ಎರಡು ಚಿನ್ನದ ಬಳೆಗಳಿದ್ದವು ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳವು, ಅವು ಕಾಣುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ಠಾಯಲ್ಲಿ ದೂರು ನೀಡಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಕೆಎಸ್‌ಆರ್‌ಟಿಸಿ ಶಿವಮೊಗ್ಗ ಘಟಕದ ಚಾಲಕನನ್ನು ಠಾಣೆಗೆ ಕರೆಸಿಕೊಂಡು ಸತ್ಯ ಬಾಯಿ ಬಿಡಿಸುವ ನೆಪದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಟಾರ್ಚರ್‌ಕೊಟ್ಟಿದ್ದಾರೆ. ಬಳಿಕ ನಾವು ನಮ್ಮ ಡ್ಯೂಟಿ ಮಾಡಿದ್ದೇವೆ ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಚಾಲಕನನ್ನು ಸಮಾಧಾನ ಮಾಡಿದ್ದಾರೆ.
ಇಲ್ಲಿ ಪೊಲೀಸರು ಕೆಲವೊಮ್ಮೆ ಸತ್ಯ ಬಾಯಿಬಿಡಿಸಬೇಕಾದರೆ ಅವರದೇ ಆದ ಪೊಲೀಸ್ ಭಾಷೆಯನ್ನು ಬಳಬೇಕಾಗುತ್ತದೆ. ಕೆಲವೊಮ್ಮೆ ಅದು ಕಾನೂನು ಮೀರಿಯೂ ಪೊಲೀಸರು ನಡೆದುಕೊಳ್ಳುತ್ತಾರೆ. ಆದರೆ ಅದಕ್ಕೆ ಸಾಕ್ಷಿ ಇರುವುದಿಲ್ಲ. ಜತೆಗೆ ಕೋರ್ಟ್ ಅದು ಇದು ಅಂತ ಏಕೆ ಇನ್ನಷ್ಟು ಮಾನಸಿಕವಾಗಿ ಯಾತನೆ ಅನುಭವಿಸಬೇಕು ಎಂದು ನೋವು ಅನುಭವಿಸಿದವರು ಸುಮ್ಮನಾಗಿಬಿಡುವುದು 99% ಇದೆ.
ಅದೇನೆ ಇರಲಿ ಪೊಲೀಸರು ಒಂದು ಕಡೆ ತಮ್ಮ ಕರ್ತವ್ಯ ಮಾಡಿದ್ದಾರೆ ಬಿಡಿ. ಆದರೆ, ವಾರಸುದಾರಿಲ್ಲದ ಲಗೇಜ್ ತೆಗೆದುಕೊಂಡು ಬಂದ ಚಾಲಕ ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವು ಅನುಭವಿಸುತ್ತಿದ್ದಾನೆ. ಅಲ್ಲದೆ ಸಾರಿಗೆ ನಿಗಮದ ಅಧಿಕಾರಿಗಳು ನೀನು ಸಂಸ್ಥೆಯ ಕಾನೂನು ಮೀರಿ ನಡೆದುಕೊಂಡಿದ್ದೀಯೆ ಎಂದು ಮೆಮೋ ಕೊಟ್ಟಿದ್ದು, ಉತ್ತರವನ್ನು ಪಡೆದುಕೊಂಡಿದ್ದಾರೆ. ಆದರೆ ಬಳಿಕ ವಿಚಾರಣೆ ಮಾಡಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ.
ನೋಡಿ ಸಾರಿಗೆಯ ನಾಲ್ಕೂ ನಿಗಮದ ಚಾಲನಾ ಸಿಬ್ಬಂದಿಗಳು ಈ ರೀತಿ ಮಾನವೀಯತೆ ತೋರಿಸಲು ಹೋಗಿ ತಾವು ಪೇಚಿಗೆ ಸಿಲುಕಿಕೊಳ್ಳುವ ಜತೆಗೆ ಕುಟುಂಬದವರ ನೆಮ್ಮದಿಯನ್ನು ಹಾಳುಮಾಡುವ ಸಾಹಸಕ್ಕೆ ಏಕೆ ಕೈ ಹಾಕುತ್ತೀರಿ. ವಾರಸುದಾರರಿಲ್ಲ ಲಗೇಜ್‌ಗಳನ್ನು ತೆಗೆದುಕೊಂಡು ಬಂದು ಈ ರೀತಿ ಪೊಲೀಸ್ ಪ್ರಕರಣಗಳನ್ನು ದಾಖಲಿಸಿಕೊಂಡು ತಮ್ಮ ಕೆಲಸಕ್ಕೆ ಏಕೆ ಕುತ್ತುತಂದುಕೊಳ್ಳುತ್ತೀರಿ?
ವಾರಸುದಾರರಿಲ್ಲದ ಈ ರೀತಿಯ ಲಗೇಜ್ ತರುವುದರಿಂದ ನಿಮಗೇನು ನೂರಾರು ರೂಪಾಯಿ ಸಿಗುವುದಿಲ್ಲ 10-20 ರೂ. ಕೊಡಬಹುದಷ್ಟೆ ಆದರೆ, ಈ ರೀತಿ ಸಮಸ್ಯೆ ಆದಾಗ ಅದರ ನೋವಿನಿಂದ ಹೊರಬರುವುದಕ್ಕೆ ಸಾವಿರಾರು ರೂ. ಕೊನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಜತೆಗೆ ನೆಮ್ಮದಿಯನ್ನು ಕಳೆದುಕೊಂಡು ಮಾನಸಿಕ ಹಿಂಸೆ ಅನುಭವಿಸಬೇಕು. ಇದೆಲ್ಲ ಬೇಕಾ ನಿಮಗೆ? ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
ಗುರುವಾರ ನಡೆದ ಪ್ರಕರಣದಲ್ಲಿ ಚಾಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವು ಅನುಭವಿಸುತ್ತಿದ್ದಾನೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ಕೋರ್ಟ್ ಕಚೇರಿ ಎಂದು 5-6 ವರ್ಷ ಅಲೆಯುವ ಸಂಭವ ಬರಬಹುದು ಅದು ಆದರೆ 10-20 ರೂ. ಆಸೆಗೆ ಬಿದ್ದು ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ ನೋಡಿ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಿ ಚಾಲನಾ ಸಿಬ್ಬಂದಿಗಳೇ ಎನ್ನುವುದು ನಮ್ಮ ಕಳಕಳಿ.