NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

KSRTC: ನೇರವಾಗಿಯೇ ಲಂಚ ಕೇಳುವ ಮೂಡಿಗೆರೆ ಘಟಕದ ATS ಸತೀಶ್ – ಅಮಾನತಿಗೆ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದ ಸಂಚಾರ ಅಧೀಕ್ಷಕ (ATS) ಸತೀಶ್ ನೇರವಾಗಿ ಚಾಲನಾ ಸಿಬ್ಬಂದಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಮೂಡಿಗೆರೆ ಘಟಕದಲ್ಲಿ ಘಟಕ ವ್ಯವಸ್ಥಾಪಕರು ಇಲ್ಲದ ಸಮಯದಲ್ಲಿ ಸಂಚಾರ ಅಧೀಕ್ಷಕ ಸತೀಶ್ ಅವರೆ ಘಟಕದ ಇಂಚಾರ್ಜ್ ಇದ್ದ ಸಮಯದಲ್ಲಿ ನೌಕರರಿಂದ ಹಣ ವಸೂಲಿಗೆ ಇಳಿದಿರುವ ಆಡಿಯೋ ವೈರಲ್‌ ಆಗಿದ್ದು, ಅವರೇ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಯಾದವರು ಹತ್ತರಿಂದ ಹದಿನೈದು ಜನ ಸಾರಿಗೆ ಚಾಲಕರು ಮತ್ತು ಚಾಲಕ ಕಂ ನಿರ್ವಾಹಕರು ಹಾಗೂ ಮೆಕ್ಯಾನಿಕ್‌ಗಳು ತಲಾ ಒಬ್ಬೊಬ್ಬರಿಂದ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಅವರನ್ನು ತರಾತುರಿಯಲ್ಲಿ ಇನ್ನೇನು ಎರಡು ಮೂರು ದಿನದಲ್ಲಿ ಘಟಕಕ್ಕೆ ಬೇರೆ ಡಿಪೋದಿಂದ ಡಿಪೋ ಮ್ಯಾನೇಜರ್ ಬರುವ ಸಮಯದಲ್ಲಿ ಮೂಡಿಗೆರೆ ಘಟಕದಿಂದ ಅವರನ್ನು ತೆರವುಗೊಳಿಸಿದ್ದಾರೆ ಎಂಬ ಆರೋಪ ಕೂಡ ಇದೆ.

ATS ಸತೀಶ್ ಮತ್ತು TI ಬಸವರಾಜ್ ಈ ಇಬ್ಬರು ಡ್ಯೂಟಿ ಬುಕ್ ಮಾಡಲಿಕ್ಕೆ ಇದ್ದರು. ಇನ್ನು TI ಬಸವರಾಜ್ ಅವರು ಇದ್ದರೆ ಲಂಚಪಡೆಯುವುದಕ್ಕೆ ಆಗುವುದಿಲ್ಲ ಎಂದು ಬಸವರಾಜ್ ಅವರನ್ನು ಸಹ ಇವರು ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಕಡೆಯಿಂದ LCಗೆ ವರ್ಗಾವಣೆ ಮಾಡಿಸಿಸಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿಗೆ ಈ ಎಲ್ಲ ವಿಷಯಗಳು ಗೊತ್ತಿದ್ದರೂ ಕೂಡ ಅವರನ್ನು ಬೇರೆ ಘಟಕಕ್ಕೆ ವರ್ಗಾವಣೆ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

ATS ಸತೀಶ್ ಅವರ ಎರಡನೇ ಹೆಂಡತಿಯು ಕೂಡ ಇದೆ ಮೂಡಿಗೆರೆ ಘಟಕದಲ್ಲಿ ನಿರ್ವಾಹಕಿಯಾಗಿದ್ದಾರೆ ಸಾಹೇಬ್ರೆ ಅವರಿಗೆ ಮಾತ್ರ ಅನುಕೂಲಕರವಾದ ಡ್ಯೂಟಿ ಗಳನ್ನು ಹಾಕುತ್ತಿದ್ದಾರೆ. ಆದರೆ, ಬೇರೆಯವರಿಗೆ ಹಣ ಕಿತ್ತುಕೊಂಡು ಬೇಕಾದ ಡ್ಯೂಟಿ ಹಾಕುತ್ತಾರೆ ಎಂದು ಡಿಸಿಯವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ನೌಕರರು.

ವಿಭಾಗೀಯ ನಿಯಂತ್ರಣಾಧಿಕಾರಿಗಳೆ ನಮ್ಮ ಘಟಕದಿಂದ ಭ್ರಷ್ಟಾಚಾರವನ್ನು ಮುಕ್ತಿಗೊಳಿಸಿ, ಈತನ ಅಮಾನತುಗೊಳಿಸಿ, ಕಾನೂನು ಕ್ರಮ ಜರುಗಿಸಿ ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇವೆ ಮತ್ತು ನೊಂದ ಕಾರ್ಮಿಕರನ್ನು ಈ ಭ್ರಷ್ಟಾಚಾರದಿಂದ ರಕ್ಷಿಸಿ ಸಾಹೇಬ್ರೆ ಎಂದು ಒತ್ತಾಯಿಸಿದ್ದಾರೆ.

ಇನ್ನು ಇವರ ಲಂಚಾವತಾರದಿಂದ ನಮಗೆ ಮುಕ್ತಿ ಕೊಡಿಸಿ ಖಿನ್ನತೆಗೆ ಜಾರುತ್ತಿರುವ ನೊಂದ ನೌಕರರ ಪ್ರಾಣವನ್ನು ಉಳಿಸಿ ಸಾಹೇಬ್ರೆ. ದಯವಿಟ್ಟು ಮತ್ತೊಮ್ಮೆ ತಮ್ಮಲ್ಲಿ ಬೇಡಿಕೊಳ್ಳುತ್ತೇವೆ ಎಂದು ಮೂಡಿಗೆರೆ ಘಟಕದ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !