NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ 38 ತಿಂಗಳ ವೇತನ ಹಿಂಬಾಕಿಗಾಗಿ ಸರ್ಕಾರದ ಅಂತಿಮ ಆದೇಶ ನಿರೀಕ್ಷಿಸಲಾಗುತ್ತಿದೆ: ಸಂಸ್ಥೆ ನಿರ್ದೇಶಕರು

KSRTC ಏಕ ಸದಸ್ಯ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 01.01.2020 ರಿಂದ ಆಗಿರುವ ವೇತನ ಪರಿಷ್ಕರಣೆಯನ್ವಯ ಅಧಿಕಾರಿಗಳು / ನೌಕರರ ಬಾಕಿ ಉಳಿದಿರುವ 38 ತಿಂಗಳ ಹಣ ಬಿಡುಗಡೆ ಮಾಡಲು ಈಗಾಗಲೇ ರಚನೆಯಾಗಿರುವ ಒನ್‌ ಮ್ಯಾನ್‌ ಕಮಿಟಿ ಅಂತಿಮ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ತಡವಾಗುತ್ತಿದೆ ಎಂದು ತಿಳಿದು ಬಂದಿದೆ.

ಕಳೆದ 2023ರ ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ಅಂದಿನ ಬಿಜೆಪಿ ಸರ್ಕಾರ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರ ವೇತನ ಪರಿಷ್ಕರಿಸಿ ಶೇ.15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿತ್ತು. ಆ ಬಳಿಕ ಬರಬೇಕಿರುವ 38 ತಿಂಗಳ ಹಿಂಬಾಕಿ ಬಿಡುಗಡೆ ಬಗ್ಗೆ ಎಲ್ಲ ಸಂಘಟನೆಗಳ ಮುಖಂಡರನ್ನು ಕರೆದು ಒಂದು ತಿಂಗಳ ಕಾಲಮಿತಿಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದರು.

ಆದರೆ, ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಕಳೆದ 2023ರ ಮಾ ರ್ಚ್‌ 17 ಅಧಿಕೃತ ಆದೇಶ ಹೊರಡಿಸಿ ವರ್ಷ ಸಮೀಪಿಸುತ್ತಿದ್ದರೂ ಅಂದರೆ 11 ತಿಂಗಳ ಕಳೆದು 12ನೇ ತಿಂಗಳು ಬರುತ್ತಿದ್ದರು ಹಿಂಬಾಕಿ ಬಗ್ಗೆ ಈವರೆಗೂ ಒನ್‌ ಮ್ಯಾನ್‌ ಕಮಿಟಿ ಯಾವುದೇ ಸಭೆ ಮಾಡದಿರುವುದು ಖೇದಕರ ಸಂಗತಿಯಾಗಿದೆ.

ಇನ್ನು ಈವರೆಗೂ 38 ತಿಂಗಳ ವೇತನ ಹಿಂಬಾಕಿ ಕೊಡುವ ಬಗ್ಗೆ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್‌ ಸರ್ಕಾರ ಬಂದರು ಕೂಡ ಈ ಕಾಂಗ್ರೆಸ್‌ ಸರ್ಕಾರವೂ ಯಾವುದೇ ತೀರ್ಮಾನಕ್ಕೆ ಇನ್ನೂ ಬಾರದಿರುವುರಿಂದ ನೊಂದ ಕೆಎಸ್‌ಆರ್‌ಟಿಸಿಯ ಮೈಸೂರು ವಿಭಾಗದ ನಿವೃತ್ತ ಅಧಿಕಾರಿ ಕೆ.ವಿ.ನಟರಾಜ ಅವರು ಕೇಂದ್ರ ಕಾರ್ಮಿಕ ಸಚಿವರಿಗೂ ಮನವಿ ಸಲ್ಲಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕೋರಿದ್ದರು.

ಈ ಸಂಬಂಧ ಕೇಂದ್ರ ಕಾರ್ಮಿಕ ಸಚಿವರು ಕೆ.ವಿ.ನಟರಾಜ ಅವರ ಮನವಿಗೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಾದೇಶಿಕ ಕಾರ್ಮಿಕ ಇಲಾಖೆಗೆ ಪತ್ರ ರವಾನಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಆ ಮನವಿಯನ್ನು ಮತ್ತೆ ಪ್ರಾದೇಶಿಕ ಕಾರ್ಮಿಕ ಇಲಾಖೆ ಅಧಿಕಾರಿ ಇದು ನಮಗೆ ಸಂಬಂಧಿಸಿದಲ್ಲ. ಇದು ಕೆಎಸ್‌ಆರ್‌ಟಿಸಿ ನಿಗಮಕ್ಕೆ ಸಂಬಂಧಪಟ್ಟಿದ್ದು, ಈ ಬಗ್ಗೆ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ನಿವೃತ್ತ ನೌಕರರ ಬಾಕಿ ಉಳಿದಿರುವ ವೇತನ ಪರಿಷ್ಕೃತ ಬಾಕಿ ಮೊತ್ತ ಪಾವತಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಇನ್ನು ಕೆಎಸ್‌ಆರ್‌ಟಿಸಿ ನಿಗಮದ ನಿರ್ದೇಶಕರು (ಸಿ & ಜಾ) ಈ ಬಗ್ಗೆ ಸಂಸ್ಥೆಯ ಮೈಸೂರು ವಿಭಾಗದ ನಿವೃತ್ತ ಅಧಿಕಾರಿ ಕೆ.ವಿ.ನಟರಾಜ ಅವರಿಗೆ ಇದೇ ಫೆ.13ರಂದು ಈ ಬಗ್ಗೆ ಸ್ಪಷ್ಟಣೆ ನೀಡಿದ್ದು, ವೇತನ ಹಿಂಬಾಕಿ ಪಾವತಿ ಕುರಿತು ಶಿಫಾರಸ್ಸು ಮಾಡಲು ಏಕಸದಸ್ಯ ಸಮಿತಿ ರಚಿಸಲಾಗಿದ್ದು, ಸರ್ಕಾರದ ಅಂತಿಮ ಆದೇಶವನ್ನು ನಿರೀಕ್ಷಿಸಲಾಗಿದೆ. ಸರ್ಕಾರದ ಅಂತಿಮ ಆದೇಶದನ್ವಯ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸಲಾಗಿದೆ ಎಂದು ತಿಳಿಸಿದ್ದಾರೆ.

ಅಂದರೆ ಇಲ್ಲಿ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದಕ್ಕೂ ಮೊದಲು ಈ ಬಗ್ಗೆ ಏಕಸದಸ್ಯ ಸಮಿತಿ ಕೂಡ ಈ ಬಗ್ಗೆ ಚರ್ಚಿಸಲು ನೌಕರರ ಸಂಘಟನೆಗಳ ಸಭೆ ಕರೆಯುವ ಬಗ್ಗೆ ಈವರೆಗೂ ಚಿಂತನೆಯನ್ನೇ ಮಾಡಿಲ್ಲ. ಅಂದರೆ ಈ ಏಕಸದಸ್ಯ ಸಮಿತಿ ಇದ್ದು ಇಲ್ಲದಂತೆ ಆಗಿದೆ. ಇದು ಹಲ್ಲುಕಿತ್ತ ಹಾವಿನಂತೆ ಇದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುವುದು ಪಕ್ಕ.

ಕಾರಣ ಈ ಏಕಸದಸ್ಯ ಸಮಿತಿ ಅಧ್ಯಕ್ಷರಿಗೆ ವೇತನ ಇತರೆ ಭತ್ಯೆಗಳನ್ನು ಕಾಲ ಕಾಲಕ್ಕೆ ಕೊಟ್ಟು ಸರ್ಕಾರ ಅವರನ್ನು ಆರ್ಥಿಕವಾಗಿ ಬಲಿಷ್ಟರನ್ನಾಗಿ ಮಾಡುವುದಕ್ಕೆ ಮಾತ್ರ ಈ ಏಕಸದಸ್ಯ ಸಮಿತಿ ಮಾಡಿಕೊಂಡು ನೌಕರರ ಯಾಮಾರಿಸುವ ಕೆಲಸ ಮಾಡುತ್ತಿದೆ.

ಇನ್ನಾರೂ ಸಂಬಂಧಪಟ್ಟ ನೌಕರರ ಪರ ಸಂಘಟನೆಗಳು ಈ ಬಗ್ಗೆ ನೌಕರರ ಸಭೆ ಸಮಾರಂಭಗಳನ್ನು ಆಯೋಜಿಸಿ ಅಲ್ಲಿ ಪೌರುಷ ತೋರಿಸುವ ಬದಲಿಗೆ ಏಕಸದಸ್ಯ ಸಮಿತಿ ಮತ್ತು ಸರ್ಕಾರ ಮುಂದೆ ತಮ್ಮ ಪೌರುಷವನ್ನು ತೋರಿಸುವ ಮೂಲಕ ನೌಕರರಿಗೆ ಸಿಗಬೇಕಾದ 38 ತಿಂಗಳ ವೇತನ ಹಿಂಬಾಕಿ ಕೊಡಿಸುವತ್ತ ಮುಂದಾಗಿ ಎಂದು ಕಳೆದ ಒಂದು ವರ್ಷದಿಂದ ಕಾಯುತ್ತಿರುವ ನಿವೃತ್ತ ನೌಕರರು ಸೇರಿದಂತೆ ಹಾಲಿ ಎಲ್ಲ ನೌಕರರ/ ಅಧಿಕಾರಿಗಳು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...