Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ರಾಜಹಂಸ ಸೇರಿ ಎಲ್ಲ ಪ್ರತಿಷ್ಠಿತ ಬಸ್‌ಗಳಲ್ಲಿ “ನಿವೃತ್ತ ದರ್ಜೆ 3-4 ನೌಕರರು ಪ್ರಯಾಣಿಸಲು ಅವಕಾಶ: ಎಂಡಿ ಆದೇಶ

KSRTC MD ಅನ್ಬುಕುಮಾರ್‌
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ “ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರು ಶೇ.25ರಷ್ಟು ರಿಯಾಯಿತಿ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು KSRTC ಎಂಡಿ ಅನ್ಬುಕುಮಾರ್‌ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸಾಮಾನ್ಯ ಸಾರಿಗೆಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣಿಸಲು ಅವಕಾಶವಿತ್ತು. ಆದರೆ, ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ ಉಚಿತವಾಗಿ ಅಥವಾ ರೀಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಹೀಗಾಗಿ ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರು ಶೇ.25ರಷ್ಟು ರಿಯಾಯಿತಿ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ (ಕ.ರಾ.ರ.ಸಾ.ನಿಗಮ, ಬೆಂ.ಮ.ಸಾ.ಸಂಸ್ಥೆ, ವಾ.ಕ.ರ.ಸಾ.ಸಂಸ್ಥೆ ಮತ್ತು ಕ.ಕ.ರ.ಸಾ.ನಿಗಮ) ನಿವೃತ್ತರಾದ ನೌಕರ/ಅಧಿಕಾರಿಗಳು ನಿಗಮಕ್ಕೆ ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ 01-01-1988 ಮತ್ತು ನಂತರ ನಿವೃತ್ತರಾದ/ ನಿವೃತ್ತರಾಗಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮ/ ಸಂಸ್ಥೆಗಳ ನೌಕರರು/ ಅಧಿಕಾರಿಗಳು ಹಾಗೂ ಆತನ/ ಆಕೆಯ ಒಬ್ಬ ಜೀವಂತ ಪತ್ನಿ/ ಪತಿಗೆ ಮಾತ್ರ ಸೀಮಿತವಾಗುವಂತೆ ವಾರ್ಷಿಕ ರೂ.500/- ಸಂಸ್ಕರಣಾ ಶುಲ್ಕ (processing fee) ಪಾವತಿಸಿ ನಿವೃತ್ತ ಬಸ್ ಪಾಸ್ ಪಡೆದು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

ಕ.ರಾ.ರ.ಸಾ.ನಿಗಮದ ನಿರ್ದೇಶಕ ಮಂಡಳಿ ಠರಾವು ಸಂಖ್ಯೆ 10414/454ನೇ ಸಭೆ ದಿನಾಂಕ 02.01.2024 ರಲ್ಲಿ ನಿಗಮದ ಸೇವೆಯಿಂದ ನಿವೃತ್ತರಾದ ದರ್ಜೆ-III ಮತ್ತು ದರ್ಜೆ-IV ನೌಕರರಿಂದ ಪ್ರತಿ ಪಾಸಿಗೆ ರೂ.500/- ಸಂಸ್ಕರಣಾ ಶುಲ್ಕ ಪಡೆದು ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಇರುವ ಅವಕಾಶದ ಜತೆಗೆ ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ “ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಮಾತ್ರ” ಅನ್ವಯಿಸುವಂತೆ ಆಯಾ ವರ್ಗಗಳ (ಸಾಮಾನ್ಯ, ನಗರ ಮತ್ತು ವೇಗದೂತ ಸಾರಿಗೆಗಳನ್ನು ಹೊರತುಪಡಿಸಿ) ಸಾರಿಗೆಗಳಲ್ಲಿ ಪೂರಕವಾದ ಮೂಲ ಪ್ರಯಾಣದರದ ಶೇಕಡ 25 ರಷ್ಟು ವಿನಾಯಿತಿ ನೀಡಿ, ಶೇಕಡ 75 ರಷ್ಟು ಪ್ರಯಾಣದರ (Seventy five percent of the bus fares for the destination of travel) ಪಾವತಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಕಾಗಿದೆ ಎಂದು ಎಂಡಿ ತಿಳಿಸಿದ್ದಾರೆ.

ಇನ್ನು ದರ್ಜೆ-Iಮತ್ತು ದರ್ಜೆ-II ಅಧಿಕಾರಿಗಳು ಈ ಹಿಂದಿನಿಂದಲೂ ಶೇ.50ರಷ್ಟು ರಿಯಾಯಿತಿ ಪಡೆದು ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ ಈ ಹಿಂದಿನಿಂದಲೂ ಪ್ರಯಾನಿಸಲು ಅವಕಾಶ ಹೊಂದಿದ್ದರು. ಆದರೆ, ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಈ ರರಿಯಾಯಿತಿ ಎಂಬುದನ್ನೇ ಕೊಟ್ಟಿರಲಿಲ್ಲ.

ನಾಲ್ಕೂ ನಿಗಮಗಳ ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಕಡಿಮೆ ವೇತನವಿದೆ. ಆದರೆ ಇವರೆ ಸಂಸ್ಥೆಯ ಅಡಿಪಾಯವಾಗಿದ್ದಾರೆ. ಇಂಥ ನೌಕರರಿಗೆ ಈವರೆಗೂ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ. ಎಂಡಿ ಅವರು ಈ ಬಗ್ಗೆ ಗಮನ ಹರಿಸಿ ಮತ್ತು ಸಂಘಟನೆಗಳು ಬೇಡಿಕೆ ಇಟ್ಟಿದ್ದರಿಂದ ಈ ಒಂದು ಅವಕಾಶ ನೀಡಲು ಒಪ್ಪಿ ಆದೇಶ ಹೊರಡಿಸಿದ್ದಾರೆ.

ಆದರೆ, ಕಡಿವೆ ವೇತನದಲ್ಲಿ ದುಡಿದ ಈ ನೌಕರರಿಗೆ ಮುಸಂಜೆಯ ಇಳಿ ವಯಸ್ಸಿನಲ್ಲಿ ಕನಿಷ್ಠ ಪಕ್ಷ ನಿವೃತ್ತ ದರ್ಜೆ-Iಮತ್ತು ದರ್ಜೆ-II ಅಧಿಕಾರಿಗಳಿಗೆ ನೀಡಿರುವ ರೀತಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕಿತ್ತು ಎಂದು ನಿವೃತ್ತ ನೌಕರರು ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ KSRTC ನಿಗಮದ ವ್ಯವಸ್ಥಾಪಕರು ಈ ಬಗ್ಗೆ ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಆಡಳಿತ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡರೆ ನಮಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

 

 

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ