KSRTC: 26 ವರ್ಷ ಸೇವೆಯ ನೌಕರರ ಮೂಲ ವೇತನ 31 ಸಾವಿರ- ಕೇವಲ 8ವರ್ಷ ಸೇವೆಯ ಸರ್ಕಾರಿ ನೌಕರರ ಮೂಲ ವೇತನ 48 ಸಾವಿರ!

- ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಇದು ಅರ್ಥವಾಗುತ್ತಿಲ್ಲವೇಕೆ- ಒಕ್ಕೂಟದ ಪದಾಧಿಕಾರಿಗಳ ಪ್ರಶ್ನೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳ-ನೌಕರರ ವೇತನ ಸರ್ಕಾರಿ ಅಧಿಕಾರಿಗಳು-ನೌಕರರಿಗೆ ಹೋಲಿಸಿದರೆ ಭಾರಿ ವ್ಯತ್ಯಾಸವಿದೆ ಎಂಬುವುದು ಏಕೆ ಈ ಜಂಟಿ ಸಮಿತಿ ಪದಾಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.
26 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಲ ಸಿಬ್ಬಂದಿಗಳ ವೇತನ ಯಾವುದೇ ಇಂಕ್ರಿಮೆಂಟ್ ಕೂಡ ಕಟ್ಟಾಗದೆ ಕಾಲಕಾಲಕ್ಕೆ ಹೆಚ್ಚಳವಾಗುತ್ತ ಬಂದಿದ್ದರೂ ಕೂಡ ಅವರ ಮೂಲ ವೇತನ ಕೇವಲ 31,570 ರೂ.ಗಳಿದೆ.
ಅದೇ ಸರ್ಕಾರಿ ನೌಕರರ ಅದೇ ಸಿ ಗ್ರೂಪ್‌ನಡಿ ಅದೇ ವಿದ್ಯಾರ್ಹತೆಯಡಿ ಅಂದರೆ ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿ ಒಬ್ಬ ಸರ್ಕಾರಿ ಅಧಿಕಾರಿಯ ಕಾರು ಚಾಲಕನಾಗಿ, ಸಹಾಯಕ ಅಥವಾ ಎಸ್‌ಡಿಎಯಾಗಿ 8 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ, ಈಗ ಬಡ್ತಿಯೊಂದಿಗೆ ಆ ನೌಕರರ ಮೂಲ ವೇತನ ಪ್ರಸ್ತುತ 48 ಸಾವಿರವಿದೆ.
ನೋಡಿ 26 ವರ್ಷಗಳ ಹಿಂದೆ ಅದೇ ಚಾಲಕ ಅದರಲ್ಲೂ ಭಾರಿ ವಾಹನ ಚಾಲನಾ ಸಿಬ್ಬಂದಿಯಾಗಿ ಕೆಎಸ್‌ಆರ್‌ಟಸಿಗೆ ಸೇರಿ ಕೊಂಡಿರುವವರ ಮೂಲ ವೇತನ ಕೇವಲ 31,570 ರೂಪಾಯಿ ಇದೆ. ಅಂದರೆ ಯೋಚನೆ ಮಾಡಿ 26 ವರ್ಗಳಿಂದಲೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮೂಲ ವೇತನ ಕೇವಲ 8 ವರ್ಷಗಳಲ್ಲಿ ಸರ್ಕಾರಿ ನೌಕರರಾಗಿ ಸೇರಿದ ನೌಕರರಿಗಿಂತ ಸುಮಾರು 17 ಸಾವಿರ ವ್ಯತ್ಯಾಸವಿದೆ.
ಇನ್ನು 26 ವರ್ಷಗಳ ಹಿಂದೆ ಸರ್ಕಾರಿ ಕೆಲಸಕ್ಕೆ ಸೇರಿರುವ ನೌಕರರ ಮೂಲ ವೇತನ ಬಡ್ತಿಯೊಂದಿಗೆ ಎಷ್ಟಿರಬೇಕು ಎಂಬುದನ್ನು ನೀವೆ ಯೋಚಿಸಿ. ಹೀಗಾಗಿ ಸರ್ಕಾರಿ ನೌಕರರಿಗೆ ಕೊಡುವ ವೇತನವನ್ನು ಅದೇ ಸಿ ಗ್ರೂಪ್ ಹುದ್ದೆಯಲ್ಲಿರುವ ನಮಗೂ ಕೊಡಿ ಎಂದು ಸಾರಿಗೆ ನೌಕರರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತಿದೆ.
ಆದರೆ, ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಲ್ಲ ಇಲ್ಲ ನಾವು ಶೇ.25 ರಷ್ಟು ವೇತನ ಹೆಚ್ಚಳ ಮಾಡಿದರೆ ಸಾಕು ಅದು ಕೂಡ ಅಗ್ರಿಮೆಂಟ್ ಆಗಬೇಕು. ಈ ಬಗ್ಗೆ ಚರ್ಚಿಸಲು ಸಭೆ ಕರೆಯಿರಿ ಎಂದು ಸಿಎಂ, ಸಾರಿಗೆ ಸಚಿವರು ಹಾಗೂ ನಿಗಮಗಳ ಎಂಡಿಗಳಿಗೆ ಮನವಿ ಪತ್ರ ಕೊಡುತ್ತಿದೆ.

ಅಂದರೆ ನಮಗೆ ಇವರ ಉದ್ದೇಶವೆ ಅರ್ಥವಾಗುತ್ತಿಲ್ಲ. ಪ್ರಸ್ತುತ ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರುವ ನೌಕರರ ಮೂಲ ವೇತನ 27 ಸಾವಿರ ಆಗಿದೆ. ಆದರೆ, ನಮ್ಮ ಸಂಸ್ಥೆಯಲ್ಲಿ 12 ವರ್ಷಳಿಂದಲೂ ಸೇವೆ ಸಲ್ಲಿಸುತ್ತಿರುವವರ ಮೂಲ ವೇತನ ಈಗಲೂ 24,980 ರೂ.ಗಳಿದೆ ಎಂದರೆ ನಂಬುತ್ತೀರ ನಂಬಲೇ ಬೇಕು.
ಕಾರಣ ಸಾರಿಗೆ ನೌಕರರಿಗೆ ಸರಿಯಾಗಿ ವೇತನ ಹೆಚ್ಚಳ ಮಾಡಿಸುವಲ್ಲಿ ಈ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ಕೆಲವರ ತಾತ್ಸಾರದಿಂದ ಈ ವ್ಯತ್ಯಾಸ ಕಾಣುವಂತಾಗಿದೆ. ಹೀಗಾಗಿ ಇದನ್ನು ಸರಿ ಪಡಿಸುವ ಉದ್ದೇಶದಿಂದ ಸಾರಿಗೆ ನೌಕರರ ಒಕ್ಕೂಟ ನಮ್ಮ ನೌಕರರಿಗೂ ವಿದ್ಯಾರ್ಹತೆ, ಹುದ್ದೆಗೆ ತಕ್ಕ ವೇತನ ಕೊಡಿ ಎಂದು ಒತ್ತಾಯ ಮಾಡುತ್ತಿದೆ.
ಇಲ್ಲಿ ಹೇಳಬಹುದು ಈ ಹಿಂದೆ ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರು ಕೇವಲ 3-4 ಕ್ಲಾಸ್ ಓದಿದವರನ್ನು ಕೆಲಸಕ್ಕೆ ತೆಗೆದುಕೊಂಡಿರುವವರಿಗೆ ಯಾವ ಲೆಕ್ಕಚಾರದಲ್ಲಿ ವೇತನ ಕೊಡಿಸುತ್ತೀರಿ ಎಂದು. ಇಲ್ಲಿ ಅವರ ಹುದ್ದೆಯ ಮಾನದಂಡದ ಆಧಾರದ ಮೇಲೆ ಅವರಿಗೆ ಮೂಲ ವೇತನವನ್ನು ಹುದ್ದೆಗೆ ಸರಿ ಸಮಾನವಾಗಿ ಕೊಡಬೇಕು ಎಂಬುವುದು ಒಕ್ಕೂಟದ ವಾದವಾಗಿದೆ.
ಇನ್ನು ಇದು ಕೇವಲ ಸಾರಿಗೆ ನೌಕರರಿಗೆ ಮಾತ್ರ ಈ ಮೂಲ ವೇತನದಲ್ಲಿ ವ್ಯತ್ಯಾಸವಾಗಿಲ್ಲ ಅಧಿಕಾರಿ ವರ್ಗದವರಿಗೂ ಇಲ್ಲಿ ತಾರತಮ್ಯವಾಗಿದೆ. ಆದರೆ ಇದನ್ನು ಸರಿ ಪಡಿಸಿ ಎಂದು ಏಕೋ ಅಧಿಕಾರಿಗಳು ಕೇಳುತ್ತಿಲ್ಲ. ಕೇಳಿದ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಸದ್ಯ ಮೌನಕ್ಕೆ ಜಾರಿದ್ದಾರೆ. ಕಾರಣ ಗೊತ್ತಿಲ್ಲ.
ಅದೇನೆ ಇರಲಿ ಸರ್ಕಾರ ಈಗಾಗಲೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಮಾಡುವುದಕ್ಕೆ ಬಹುತೇಕೆ ನಿರ್ಧಾರ ಮಾಡಿದೆ. ಹೀಗಾಗಿ ನೌಕರರ ಪರವಾಗಿದ್ದೇವೆ ಎನ್ನುವ ಎಲ್ಲ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಈ 4 ವರ್ಷಕ್ಕೊಮ್ಮೆ ಆಗುತ್ತಿರುವ ಅನಾಹುತವನ್ನು ತಪ್ಪಿಸಬೇಕು ಎಂಬುವುದು ಒಕ್ಕೂಟದ ಎಲ್ಲ ಪದಾಧಿಕಾರಿಗಳು ಮನವಿ ಮಾಡುತ್ತಿದ್ದೇವೆ.
Related
