KSRTC: ಡ್ರೈವಿಂಗ್-ಕಂಡಕ್ಟರ್ ಲೈಸನ್ಸ್ ರಿನಿವಲ್ ಬಗ್ಗೆ ನೌಕರರಿಗೆ ಮಾಹಿತಿ ಕೊಟ್ಟರೆ ಹುಷಾರ್- ಭ್ರಷ್ಟ ಅಧಿಕಾರಿಗಳಿಂದ ಧಮ್ಕಿ !

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಡ್ರೈವಿಂಗ್ ಹಾಗೂ ಕಂಡಕ್ಟರ್ ಲೈಸನ್ಸ್ ರಿನಿವಲ್ ಮಾಡಿರುವ ಹಣವನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ನೌಕರರಿಗೆ ಅವಕಾಶವಿದೆ. ಆದರೆ ಕೆಲ ಭ್ರಷ್ಟ ಅಧಿಕಾರಿಗಳು ಈ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೌಕರರಿಗೆ ಕೊಡದೆ ಯಾಮಾರಿಸುತ್ತಿದ್ದಾರೆ.
ಇನ್ನು ಸಂಸ್ಥೆಯಲ್ಲಿ ಇರುವುದರಿಂದ ಈ ಬಗ್ಗೆ ತಿಳಿದುಕೊಂಡಿರುವವರು ನೌಕರರಿಗೆ ಮಾಹಿತಿ ಕೊಡಲು ಮುಂದಾದರೆ ನಿನ್ನದೆಷ್ಟೆ ಅಷ್ಟು ನೋಡಿಕೋ ಯಾವುದೇ ಮಾಹಿತಿಯನ್ನು ನೌಕರರಿಗೆ ಕೊಡಬೇಕು ಎಂದು ಮಾಹಿತಿ ಕೊಡಬೇಕಾದ ಅಧಿಕಾರಿಗಳೇ ಬೆದರಿಕೆ ಹಾಕುತ್ತಿದ್ದಾರೆ ಎಂದರೆ ಇದರ ಅರ್ಥ ಏನು?
ಇನ್ನು ಸಂಸ್ಥೆಯಿಂದ ನೌಕರರಿಗೆ ಸಿಗಬೇಕಿರುವ ಸೌಲಭ್ಯವನ್ನು ಮರೆಮಾಚುವ ಇಂಥ ಅಧಿಕಾರಿಗಳು ಇರುವುದರಿಂದ ನೌಕರರಿಗೆ ಕಾಲ ಕಾಲಕ್ಕೆ ಸಿಗಬೇಕಿರುವ ವೇತನ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಥೋ ಏನ್ ಅಧಿಕಾರಿಗಳು ಇವರು ಅನಿಸುವಷ್ಟು ಅಸಹ್ಯವಾಗುತ್ತಿದೆ.
ಡ್ರೈವಿಂಗ್ ಹಾಗೂ ಕಂಡಕ್ಟರ್ ಲೈಸನ್ಸ್ ರಿನಿವಲ್ ಬಗ್ಗೆ ಸವಿಸ್ತಾರವಾದ ಮಾಹಿತಿಯೊಂದಿಗೆ ವಿಡಿಯೋ ಮಾಡುತ್ತೇನೆಂದು ಮತ್ತು ಸಂಸ್ಥೆಯಿಂದ ಕ್ಯಾಶ್ ಬ್ಯಾಗ್ ಟ್ರೇ ಬಾಕ್ಸ್ ಮತ್ತು ಟ್ರಂಕ್ಕನ್ನು ಹೇಗೆ ತೆಗೆದುಕೊಳ್ಳುವುದು ಎಂದು ಸುತ್ತೋಲೆ ಸಮೇತ ಹಾಕಲು ಸಂಸ್ಥೆಯ ನೌಕರ ಜಯದೇವ್ ಎಂಬುವರು ಮುಂದಾಗಿದ್ದರು.
ಈ ಬಗ್ಗೆ ಹಾಕುವುದಕ್ಕೆ ಅವರ ವಾಟ್ಸಪ್ ಗ್ರೂಪ್ಗಳಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಅವರ ವಾಟ್ಸಪ್ ಗ್ರೂಪ್ಗಳಲ್ಲಿ ಸಾರಿಗೆ ಸಂಸ್ಥೆಯ ಎಲ್ಲ ಘಟಕ ವಿಭಾಗಗಳ ಗ್ರೂಪ್ಗಳಿಗೂ ಇದು ಶೇರ್ ಆಗಿತ್ತು. ಈ ನಡುವೆ ಯಾವುದೋ ಮಾರ್ಗದಲ್ಲಿ ಅಧಿಕಾರಿ ವರ್ಗದ ಕೆಲ ಭ್ರಷ್ಟ ಅಧಿಕಾರಿಗಳು ಇದನ್ನು ನೋಡಿದ್ದಾರೆ.
ಇಲ್ಲಿ ಅಧಿಕಾರಿಗಳಿಗೆ ಒಂದು ರೀತಿಯ ಬಕೆಟ್ ಹಿಡಿಯುವ ಕೆಲಸ ಮಾಡುತಿರುವ ನೌಕರರೂ ಅವರ ಗ್ರೂಪಲ್ಲಿದ್ದು ಅವರು ಹಾಕಿರುವ ಪೋಸ್ಟ್ಗಳನ್ನು ಸ್ಕ್ರೀನ್ಶಾಟ್ ತೆಗೆದು ವಾಟ್ಸಾಪ್ ಮಾಡಿದ್ದು, ನಿನ್ನೆ ದಿನ ಕೆಲವು ಅಧಿಕಾರಿಗಳು ಜಯದೇವ ಅವರ ಜತೆ ಮಾತನಾಡಿ ಸಂಸ್ಥೆಯ ನಿಯಮಾವಳಿ ಪ್ರಕಾರ ನೀನು ಡ್ರೈವಿಂಗ್ ಲೈಸೆನ್ಸ್ ರಿನಿವಲ್ ತೆಗೆದುಕೊಂಡಿದ್ದೀಯ ಮತ್ತು ಕ್ಯಾಶ್ ಬ್ಯಾಗ್ ತೆಗೆದುಕೊಂಡಿದ್ದೀಯ.

ಆದರೆ ಅದರ ಬಗ್ಗೆ ವಿಡಿಯೋ ಮಾಡಿ ಸವಿಸ್ತಾರವಾಗಿ ತಿಳಿಸುತ್ತೇನೆ ಎಂದು ಗ್ರೂಪ್ಗಳಲ್ಲಿ ಹಾಕಿದ್ದೀಯ ಬೇರೆಯವರಿಗೆ ಏಕೆ ತಿಳಿಸುತ್ತೀಯಾ? ನೀನು ಕೇಳಿದ್ದೀಯ ಕೊಟ್ಟಿದ್ದೇವೆ ಅವರು ಕೇಳಲಿ ಕೊಡುತ್ತೇವೆ ಅದನ್ನು ಬಿಟ್ಟು ಈ ರೀತಿಯಲ್ಲ ಮಾಡಬೇಡ. ಯಾವುದೇ ವಿಡಿಯೋ ಮಾಡಿ ಬಿಡಬೇಡ ಅವರಿಗೆಲ್ಲರಿಗೂ ಕೂಡ ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಜಯದೇವ್ ನೌಕರರಿಗೆ ಇದೇ ವಾಟ್ಸ್ಆಪ್ ಮೂಲಕವೇ ತಿಳಿಸಿದ್ದಾರೆ.
ಅಲ್ಲದೆ ಅಧಿಕಾರಿಗಳು ಈ ರೀತಿ ಬೆದರಿಕೆ ಹಾಕಿರುವುದರಿಂದ ನಾನು ಈ ವಿಡಿಯೋ ಮಾಡಲು ಮತ್ತೆ ಸವಿಸ್ತಾರವಾದ ಮಾಹಿತಿ ನೀಡಲು ಹಿಂದೇ ಸರಿಯುತ್ತಿದ್ದೇನೆ ಎಂದು ಕೂಡ ತಿಳಿಸಿದ್ದಾರೆ. ಜತೆಗೆ ನನ್ನನ್ನು ಪರ್ಸನಲ್ ಆಗಿ ಬಂದು ಮೀಟ್ ಮಾಡಿದರೆ ಎಲ್ಲ ಮಾಹಿತಿಯನ್ನು ನೀಡುತ್ತೇನೆ. ಅದರಂತೆ ತಾವು ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಹಣ ಮತ್ತು ಕ್ಯಾಶ್ ಬ್ಯಾಗ್ ತೆಗೆದುಕೊಳ್ಳಬಹುದು ಅಥವಾ ನಿಯಮಾವಳಿ ಪ್ರಕಾರ ಪತ್ರದ ಮುಖಾಂತರ ಬರೆದು ಕೊಡಿ ಕೊಡಬಹುದು ಎಂದು ತಿಳಿಸದ್ದಾರೆ.
ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಸೌಲಭ್ಯ ಸಿಗಬೇಕು ಎಂದು ನಿಯಮ ಮಾಡಲಾಗಿದೆ. ಆದರೆ ಆ ನಿಯಮವನ್ನು ನೌಕರರಿಗೆ ತಿಳಿಸದೆ ಅಧಿಕಾರಿಗಳು ಏಕೆ ಈ ರೀತಿ ನಡೆಸುಕೊಳ್ಳುತ್ತಿದ್ದಾರೆ. ಇನ್ನು ಸೌಲಭ್ಯ ಪಡೆಯುವ ಬಗ್ಗೆ ಸಂಸ್ಥೆ ಹಣ ಖರ್ಚ್ ಮಾಡಿ ನೌಕರರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಅದನ್ನು ಒಬ್ಬ ಸಂಸ್ಥೆಯ ನೌಕರರ ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ನೌಕರರಿಗೆ ಸೌಲಭ್ಯ ಪಡೆಯುವುದು ಹೇಗೆ ಎಂದು ತಿಳಿಸಲು ಮುಂದಾದರೆ ಅವರನ್ನು ಬೆದರಿಸುವುದು ಎಷ್ಟರ ಮಟ್ಟಿಗೆ ಸರಿ.
ಈ ರೀತಿ ಒಂದು ವೇಳೆ ಬೆದರಿಕೆ ಹಾಕಿದರೆ ಫೋನ್ ಮಾಡಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು, ಅಲ್ಲದೆ ನೌಕರರಿಗೆ ಸಿಗಬೇಕಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಮಸ್ತ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಆಗ್ರಹಿಸಿದ್ದಾರೆ.
Related


You Might Also Like
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರ ಸಂಘದ ವಾರ್ಷಿಕೋತ್ಸವ
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘವು ತನ್ನ 30ನೇ ಸಾಮಾನ್ಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಮಂದಿರದಲ್ಲಿ ಭವ್ಯವಾಗಿ ಆಚರಿಸಿತು....
ಇತ್ತೀಚಿಗೆ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ: ಸಿಎಂ ಸಿದ್ದರಾಮಯ್ಯ ಆತಂಕ
ಧಾರವಾಡ: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಫಲವತ್ತತೆ ಕಡಿಮೆ...
ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ: 1,65,000 ರೂ. ಎಗರಿಸಿದ ಹ್ಯಾಕರ್
ಬೆಂಗಳೂರು: ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್ಲೈನ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನೇ...
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಈ ಕರ್ತವ್ಯ ತಪ್ಪದೇ ಎಲ್ಲರೂ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ,...
ಅವನನ್ನ ಮೂರ್ಖ ಅಂತ ಕರೆಯಬೇಕು: ಪ್ರತಾಪ್ ಸಿಂಹ ಹೆಸರು ಹೇಳದೆ ಸಿಎಂ ವಾಗ್ದಾಳಿ
ಬೆಂಗಳೂರು: ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ....
KSRTC: ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ 38 ತಿಂಗಳ ಹಿಂಬಾಕಿ ಸರ್ಕಾರ ಕೊಟ್ಟರೆ ನೌಕರರು ಖುಷಿಯಾಗುತ್ತಾರೆ ಎಂದೇ ಶಿಫಾರಸು ಮಾಡಿದೆ
ಬೆಂಗಳೂರು: ಸಾರಿಗೆ ನೌಕರರಿಗೆ 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ತಾವು ಈಗಾಗಲೇ 14 ತಿಂಗಳ ಹಿಂಬಾಕಿಯಷ್ಟೇ...
ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಧಗಧಗಿಸಿದ ಬಿಎಂಟಿಸಿ ಬಸ್- ಸದ್ಯ 75 ಪ್ರಯಾಣಿಕರು ಸೇಫ್
ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೆ ಹೊತ್ತು ಉರಿದು ಸಂರ್ಪೂಣ ಸುಟ್ಟು ಕರಕಲಾದ ಘಟನೆ ನಗರದ ಎಚ್ಎಎಲ್ ಮುಖ್ಯದ್ವಾರದ...
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...